ಭಾರತದಿಂದ ಅಧಿಕೃತವಾಗಿ ಆಸ್ಕರ್ (Oscar) ಸ್ಪರ್ಧೆಗೆ ಕಳುಹಿಸಿರುವ ಚೆಲ್ಲೋ ಶೋ (Chello Show) ಸಿನಿಮಾ ಬಗ್ಗೆ ಆಕ್ಷೇಪವೊಂದು (Controversy) ಮೂಡಿದೆ. ಈ ಸಿನಿಮಾ ಭಾರತದ್ದೇ ಅಲ್ಲ, ಹೇಗೆ ಭಾರತದಿಂದ ಈ ಸಿನಿಮಾ ಸ್ಪರ್ಧೆ ಮಾಡುತ್ತದೆ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಸಿನಿಮಾ ಎಂಪ್ಲಾಯ್ಸ್ ಸಂಘವು ಆಕ್ಷೇಪಿಸಿದೆ. ಈ ಆಯ್ಕೆಯನ್ನು ಕೂಡಲೇ ತಡೆಹಿಡಿದು, ಬೇರೆ ಸಿನಿಮಾವನ್ನು ಆಯ್ಕೆ ಮಾಡುವಂತೆ ಸಂಘದ ಅಧ್ಯಕ್ಷ ಬಿ.ಎನ್. ತಿವಾರಿ (B.N. Tiwari)ಹೇಳಿದ್ದಾರೆ. ಈ ಕುರಿತು ಅವರು ಸಂಬಂಧಪಟ್ಟ ಮಂತ್ರಿಗಳಿಗೂ ಪತ್ರ ಬರೆಯುವುದಾಗಿ ಹೇಳಿದ್ದಾರೆ.
Advertisement
ಚೆಲ್ಲೋ ಶೋ ಸಿನಿಮಾವನ್ನು ಭಾರತದ ಸಿನಿಮಾ (Cinema) ಎಂದು ಹೇಗೆ ಪರಿಗಣಿಸಿದರೋ ಗೊತ್ತಿಲ್ಲ. ಅದು ಭಾರತೀಯ ಸಿನಿಮಾವಲ್ಲ. ದಿ ಕಾಶ್ಮೀರ್ ಫೈಲ್ಸ್ (The Kashmir Files), ಆರ್.ಆರ್.ಆರ್ (RRR) ಸೇರಿದಂತೆ ಸಾಕಷ್ಟು ಸಿನಿಮಾಗಳು ರೇಸ್ ನಲ್ಲಿ ಇದ್ದವು. ಆದರೆ, ಚೆಲ್ಲೋ ಶೋ ಸಿನಿಮಾವನ್ನು ಯಾವ ಮಾನದಂಡದಿಂದ ಆಯ್ಕೆ ಮಾಡಲಾಗಿದೆ ಎನ್ನುವುದು ಗೊತ್ತಿಲ್ಲ. ಕೂಡಲೇ ಆಯ್ಕೆ ಸಮಿತಿ ಈ ಕುರಿತು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ ತಿವಾರಿ. ಅಪ್ಪಟ ಭಾರತೀಯ ಸಿನಿಮಾಗಳನ್ನು ಆಯ್ಕೆ ಮಾಡದೇ ಇರುವುದಕ್ಕೆ ದಿಗ್ಭ್ರಮೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ
Advertisement
Advertisement
ಆಯ್ಕೆಯ ಸಮಿತಿಯ ಬಗ್ಗೆಯೂ ಆಕ್ಷೇಪ ವ್ಯಕ್ತ ಪಡಿಸಿರುವ ತಿವಾರಿ, ಪ್ರತಿ ವರ್ಷವೂ ಜ್ಯೂರಿ ಕಮಿಟಿಯಲ್ಲಿ ಇದ್ದವರೇ ಇರುತ್ತಾರೆ. ಅವರು ಸಿನಿಮಾವನ್ನು ನೋಡದೇ ಸುಮ್ಮನೆ ವೋಟು ಮಾಡುತ್ತಾರೆ. ಹೀಗಾಗಿ ಅಪ್ಪಟ ದೇಶಿಯ ಚಿತ್ರಗಳಿಗೆ ಮೋಸವಾಗಿದೆ. ಆಯ್ಕೆಯಾಗಿರುವ ಸಿನಿಮಾವನ್ನು ಕೂಡಲೇ ಹಿಂತೆಗೆದುಕೊಂಡು ಬೇರೆ ಸಿನಿಮಾವನ್ನು ಆಯ್ಕೆ ಮಾಡಬೇಕು ಎಂದು ಅವರು ಕೋರಿದ್ದಾರೆ. ಇಲ್ಲದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ.