ಗಾಂಧೀನಗರ: ಇಲ್ಲಿನ ಮೊರ್ಬಿ (Morbi) ತಾಲೂಕಿನ ವಿರ್ಪರ್ದಾ (Virparda) ಗ್ರಾಮದಲ್ಲಿರುವ ಬಾವಿಯೊಂದರ ನೀರಿನಲ್ಲಿ ಅಲೆಯಂತಹ ಚಲನೆ ಕಂಡುಬಂದಿದೆ. ನೀರಿನ ನೈಸರ್ಗಿಕ ಚಲನೆಯು ಸ್ಥಳೀಯರಲ್ಲಿ ಕುತೂಹಲ ಹಾಗೂ ಆತಂಕವನ್ನು ಸೃಷ್ಟಿಸಿದೆ.
ಗುರುವಾರ (ಆ.6) ಮಧ್ಯಾಹ್ನ 3:00ರ ಸುಮಾರಿಗೆ ಗ್ರಾಮದ ಕೃಷಿ ಬಾವಿಯ ನೀರು ತನ್ನಿಂತಾನೆ ಅಲೆಯಂತೆ ಚಲಿಸಲು ಆರಂಭಿಸಿದೆ. ಕೆಲ ದಿನಗಳ ಹಿಂದೆಯೂ ಇದೇ ರೀತಿಯ ವಿಚಿತ್ರ ವಿದ್ಯಮಾನ ಕಂಡುಬAದಿತ್ತು. ಆದರೆ ಗುರುವಾರ ಮಧ್ಯಾಹ್ನದ ವೇಳೆಗೆ ಅದು ನಿಂತಿತ್ತು. ಆದರೆ, ಸ್ವಲ್ಪ ಸಮಯದ ನಂತರ ಮತ್ತೆ ನೀರಿನಲ್ಲಿ ಚಲನೆ ಆರಂಭವಾಗಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಪತ್ನಿಗೆ ರೀಲ್ಸ್ ಹುಚ್ಚು, ಊಟ ಹಾಕದಿದ್ದಕ್ಕೆ ಕೊಲೆ; ಶವ ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ ಪತಿ ಲಾಕ್
Unusual phenomenon reported in Gujarat’s Morbi: A farm well has been showing wave-like movement, leaving locals puzzled.
The District Collector has ordered a detailed report from the groundwater research team. pic.twitter.com/UtVv7xfZeD
— TIMES NOW (@TimesNow) August 7, 2026
ಬಾವಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಆಧಾರದ ಮೇಲೆ, ಜಿಲ್ಲಾ ಭೂವಿಜ್ಞಾನಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೀರಿನ ಅಡಿಯಲ್ಲಿ ಸಿಲುಕಿಕೊಂಡಿರುವ ಗಾಳಿಯಿಂದಾಗಿ ಈ ನೀರಿನ ಚಲನೆ ಉಂಟಾಗುತ್ತಿರಬಹುದು ಎಂದು ಅವರ ಪ್ರಾಥಮಿಕ ಅಂದಾಜು ತಿಳಿಸುತ್ತದೆ. ಈ ಕುರಿತು ಭೂಗತ ಜಲ ಸಂಶೋಧನಾ ತಂಡದಿಂದ ವಿಸ್ತೃತ ವರದಿಯನ್ನು ಪಡೆಯಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಬಾವಿಯ ನೀರಿನ ಈ ವಿಚಿತ್ರ ವಿದ್ಯಮಾನದ ಬಗ್ಗೆ ತಿಳಿದ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ವೀಕ್ಷಿಸುತ್ತಿದ್ದಾರೆ. ಈ ನಿಗೂಢ ಚಲನೆಗೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲ. ಆದರೂ, ಮೊರ್ಬಿ ಪ್ರದೇಶವು ಭೂಕಂಪನ ಸಂಭವನೀಯ ವಲಯವಾಗಿರುವುದರಿಂದ, ಇದು ಪ್ರಾದೇಶಿಕ ಭೂಕಂಪನ ಚಟುವಟಿಕೆಗಳಿಗೆ ಸಂಬಂಧಿಸಿರಬಹುದು ಎಂದು ಕೆಲ ಸ್ಥಳೀಯರು ಶಂಕಿಸಿದ್ದಾರೆ.ಇದನ್ನೂ ಓದಿ: ಮಳೆ ಬಂದ್ರೆ ಜೀವಭಯ – ಶಿಥಿಲಗೊಂಡ ಬ್ರೀಮ್ಸ್ ಕಟ್ಟಡದಲ್ಲಿ ನಲುಗುತ್ತಿರೋ ರೋಗಿಗಳು
#WATCH | Morbi, Gujarat: An unusual incident has been reported in Virparda village, Morbi taluka, where a farm well has been showing wave-like movement. The District Collector has ordered a detailed report from the groundwater research team.
Collector Swapnil Khare says, “…… pic.twitter.com/hnFamPfBoW
— ANI (@ANI) August 7, 2026



