ಅಸ್ಸಾಂ ಪೊಲೀಸರಿಂದ ಗುಜರಾತ್ MLA ಜಿಗ್ನೇಶ್ ಮೇವಾನಿ ಬಂಧನ

Public TV
2 Min Read
Jignesh Mevani 2

ಗಾಂಧಿನಗರ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬುಧವಾರ ತಡರಾತ್ರಿ ಗುಜರಾತ್‍ನ ಪಾಲನ್‍ಪುರದ ಸರ್ಕ್ಯೂಟ್ ಹೌಸ್‍ನಿಂದ ಬಂಧಿಸಿದ್ದಾರೆ.

ದಲಿತ ನಾಯಕ ಮತ್ತು ರಾಜಕೀಯ ಪಕ್ಷದ ರಾಷ್ಟ್ರೀಯ ದಲಿತ ಅಧಿಕಾರ ಮಂಚ್‍ನ ಸಂಚಾಲಕರಾಗಿರುವ ಜಿಗ್ನೇಶ್ ಮೇವಾನಿ ಇತ್ತೀಚೆಗಷ್ಟೇ ಮಾಡಿದ್ದ ಕೆಲವು ಟ್ವೀಟ್‍ಗಳಿಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗುಂಡಿಕ್ಕಿ ಬಿಜೆಪಿ ಮುಖಂಡ ಜೀತು ಚೌಧರಿ ಹತ್ಯೆ

Jignesh Mevani 1

ಏಪ್ರಿಲ್ 18ರಂದು ಜಿಗ್ನೇಶ್ ಅವರು ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು, ಗೋಡ್ಸೆಯನ್ನು ದೇವರಾಗಿ ಕಾಣುತ್ತಾರೆ ಹಾಗೂ ಪೂಜಿಸುತ್ತಾರೆ. ಕೋಮು ಗಲಭೆ ನಡೆದಿರುವ ಹಿಮ್ಮತ್‍ನಗರ, ಕಂಭಾತ್ ಹಾಗೂ ವೆರಾವಲ್‍ನಲ್ಲಿ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಪ್ರಧಾನಿ ಏಪ್ರಿಲ್ 20ಕ್ಕೆ ಗುಜರಾತ್‍ಗೆ ಭೇಟಿ ನೀಡಿದಾಗ ಆಗ್ರಹಿಸಬೇಕು ಎಂದು ಟ್ವೀಟ್ ಮಾಡಿದ್ದರು ಎಂದು ಕಂಡಿರುವುದಾಗಿ ದೂರುದಾರ ಅನುಪ್ ಕುಮಾರ್ ಡೇ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಜಿಗ್ನೇಶ್ ಮೇವಾನಿ ಅವರನ್ನು ಪೊಲೀಸರು ಬಂಧಿಸುವ ವೇಳೆ ಅವರ ಬಳಿ ಎಫ್‍ಐಆರ್ ಕಾಪಿ ಇರಲಿಲ್ಲ ಎಂದು ಬೆಂಬಲಿಗರು ತಿಳಿಸಿದ್ದಾರೆ. ಸದ್ಯ ಜಿಗ್ನೇಶ್ ಮೇವಾನಿ ಅವರನ್ನು ಪೊಲೀಸರು ಅಹಮದಾಬಾದ್‍ಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಅಸ್ಸಾಂ ಪೊಲೀಸರು ಅವರನ್ನು ರೈಲಿನಲ್ಲಿ ಗುವಾಹಟಿಗೆ ಕರೆದೊಯ್ಯಲಿದ್ದಾರೆ. ಇದನ್ನೂ ಓದಿ:  2023ರ ವಿಧಾನಸಭಾ ಚುನಾವಣೆ ಮೇಲೆ ಕೇಜ್ರಿವಾಲ್ ಚಿತ್ತ – ಬೆಂಗಳೂರಿನಲ್ಲಿ ಭಾಷಣ

ಜಿಗ್ನೇಶ್ ಮೇವಾನಿ ಗುಜರಾತ್‍ನ ವಡ್ಗಾಮ್‍ನ ವಿಧಾನಸಭೆಯ ಶಾಸಕರಾಗಿದ್ದು, ವಕೀಲ ಕಾರ್ಯಕರ್ತ ಮತ್ತು ಮಾಜಿ ಪತ್ರಕರ್ತರು ಆಗಿದ್ದಾರೆ. ಅವರು ಪಕ್ಷೇತರ ಶಾಸಕರಾಗಿದ್ದರೂ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆ.

Share This Article