ನವದೆಹಲಿ: ಗುಜರಾತ್ ಚುನಾವಣಾ ಫಲಿಂತಾಂಶ(Gujarat Election Results) ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯ(Karnataka Vidhan Sabha Election) ಮೇಲೂ ಪರಿಣಾಮ ಬೀರಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ(Prhald Joshi) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನಲ್ಲಿ ಬಿಜೆಪಿ(BJP) ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದೊಂದು ರೆಕಾರ್ಡ್ ಬ್ರೇಕ್ ಮಾಡಿರುವ ಫಲಿತಾಂಶ ಎಂದು ಬಣ್ಣಿಸಿದರು.
Advertisement
Advertisement
ಬಿಜೆಪಿ ಇಷ್ಟೊಂದು ಸಂಖ್ಯೆಯ ಸ್ಥಾನ ಗಳಿಸಿರೋದು ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಜನರು ವಿಶ್ವಾಸ ಇಟ್ಟಿರೋದನ್ನು ತೋರಿಸುತ್ತದೆ. ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲೂ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಲ ನೀಡಿತು ಚಾಣಕ್ಯ ಜೋಡಿಯ ತಂತ್ರ – ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?
Advertisement
Advertisement
ಎರಡು ಹೊಸ ದಾಖಲೆಯನ್ನು ಬಿಜೆಪಿ ಗುಜರಾತ್ ಚುನಾವಣೆಯಲ್ಲಿ ದಾಖಲಿಸಿದೆ. ಈ ಹಿಂದೆ ಗುಜರಾತ್‌ನಲ್ಲಿ ಕಾಂಗ್ರೆಸ್ ಮಾಧವ್ ಸಿಂಗ್ ಅವರಿದ್ದಾಗ 149 ಸ್ಥಾನಗಳನ್ನ ಪಡೆದಿದ್ದರು. ಗುಜರಾತ್ ಚುನಾವಣಾ ಇತಿಹಾಸದಲ್ಲಿ ಈ ನಂಬರ್ ಬ್ರೇಕ್ ಆಗಿರಲಿಲ್ಲ. ಇದೀಗ ಬಿಜೆಪಿ 156 ಸ್ಥಾನಗಳನ್ನ ಪಡೆದು ಇತಿಹಾಸ ನಿರ್ಮಿಸಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಸತತ 30 ವರ್ಷಗಳ ಕಾಲ ಕಮ್ಯುನಿಸ್ಟ್ ಪಾರ್ಟಿ ಆಡಳಿತ ನಡೆಸಿತ್ತು. ಗುಜರಾತ್ ನಲ್ಲಿ ಈ ಐದು ವರ್ಷ ಬಿಜೆಪಿ ಆಡಳಿತ ನಡೆಸಿದಾಗ ಕಮ್ಯುನಿಸ್ಟ್ ಪಕ್ಷದ ರೆಕಾರ್ಡ್ ಕೂಡ ಬ್ರೇಕ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ದೇಶದ ಜನರು ಮನ್ನಣೆ ನೀಡಿರೋದು ಗುಜರಾತ್ ಚುನಾವಣೆ ಫಲಿಂತಾಶ ತೋರ್ಪಡಿಸುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಬಹುಮತ ಪಡೆಯುವ ವಿಶ್ವಾಸ ಕಾರ್ಯಕರ್ತಲ್ಲಿದೆ. ಗುಜರಾತ್ ಚುನಾವಣಾ ಫಲಿತಾಂಶ ಕಾರ್ಯಕರ್ತದಲ್ಲಿ ಇನ್ನಷ್ಟು ಉತ್ಸಹಾ ತುಂಬಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರಾ ಪ್ರಾರಂಭಿಸಿದಾಗಲೇ ಕೈ ನಾಯಕರು ಕಾಂಗ್ರೆಸ್ ಚೋಡೋದಲ್ಲಿ ನಿರತರಾಗಿದ್ದರು. ಗುಜರಾತ್ ನಲ್ಲಿ ಇದೀಗ ಕಾಂಗ್ರೆಸ್ ದುಂಡೋ ಎನ್ನುವ ಪರಿಸ್ಥಿತಿಗೆ ಬಂದುಬಿಟ್ಟಿದೆ. ಇನ್ನು ತಾವು ಪ್ರಾಮಾಣಿಕರು ಅಂತಾ ಬೋರ್ಡ್ ಹಾಕಿಕೊಂಡು ತಿರುಗಾಡ್ತಿರುವ ಕೇಜ್ರಿವಾಲ್ ಅವರ ಎಎಪಿ ಪಕ್ಷಕ್ಕೂ ತೀವ್ರ ಮುಖಭಂಗವಾಗಿದೆ ಎಂದು ಜೋಶಿ ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.