ಗಾಂಧಿನಗರ: ಪತಿ ತನ್ನ ಹೆಂಡತಿ, ಇಬ್ಬರು ಹದಿಹರೆಯದ ಮಕ್ಕಳು ಮತ್ತು ಹೆಂಡತಿಯ ಅಜ್ಜಿಯನ್ನು ಕೊಂದಿರುವ ಅಮಾನುಷ ಘಟನೆಯೊಂದು ಅಹಮದಾಬಾದ್‍ನಲ್ಲಿ ಬೆಳಕಿಗೆ ಬಂದಿದೆ.
ಸೋನಾಲ್‍ಬೆನ್ ಗಾಯಕ್ವಾಡ್(37), ಅವರ ಮಗ ಗಣೇಶ್ (17), ಮಗಳು ಪ್ರಗತಿ(15) ಮತ್ತು ಸೋನಾಲ್‍ಬೆನ್ ಅವರ ಅಜ್ಜಿ ಸುಭದ್ರಾಬೆನ್(70) ಅವರನ್ನು ವಿನೋದ್ ಚಾಕುವಿನಿಂದ ಇರಿದು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಮೇಲೆ ವಿನೋದ್ ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದ. ಇದನ್ನೂ ಓದಿ: ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ
Advertisement
ಸೋನಾಲ್‍ಬೆನ್ ಅವರ ತಾಯಿ ಸಂಜುಬೆನ್ ಅವರು ಪೊಲೀಸರನ್ನು ಸಂಪರ್ಕಿಸಿದ್ದು, ತನ್ನ ಮಗಳಿಗೆ ಫೋನ್ ರೀಚ್ ಆಗುತ್ತಿಲ್ಲ. ಮನೆಗೆ ಹೋಗಿ ನೋಡಿದರೆ ಬೀಗ ಹಾಕಲಾಗಿದೆ ಎಂದು ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆ ಪೊಲೀಸರು ಅಹಮದಾಬಾದ್‍ನ ಓಧವ್ ಪ್ರದೇಶದ ಸೋನಾಲ್‍ಬೆನ್ ಅವರ ಮನೆ ಬೀಗ ಒಡೆದು ನೋಡಿದಾಗ ಅರೆ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದೆ.
Advertisement
Advertisement
ಶವ ಪತ್ತೆಯಾದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಆರೋಪಿಯನ್ನು ಹುಡುಕಲು ಪ್ರಾರಂಭ ಮಾಡಿದ್ದಾರೆ. ಈ ವೇಳೆ ಆರೋಪಿ ವಿನೋದ್ ಮಧ್ಯಪ್ರದೇಶದ ಇಂದೋರ್‌ನಿಂದ ಗುಜರಾತ್‍ಗೆ ಮರಳುತ್ತಿದ್ದಾಗ ದಾಹೋದ್ ಜಿಲ್ಲೆಯ ಎಸ್‍ಟಿ(ರಾಜ್ಯ ಸಾರಿಗೆ ನಿಗಮ) ಬಸ್‍ನಲ್ಲಿ ಸಿಕ್ಕಿ ಬಿದ್ದಿದ್ದಾನೆ.
Advertisement
ವಿನೋದ್‍ನನ್ನು ಬಂಧಿಸಿದ ಪೊಲೀಸರು ವಿಚಾರಣೆ ಮಾಡಿದಾಗ, ತನ್ನ ಹೆಂಡತಿ, ಮಕ್ಕಳು ಮತ್ತು ಹೆಂಡತಿ ಅಜ್ಜಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಹಮದಾಬಾದ್ ಅಪರಾಧ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ
ವಿನೋದ್, ತನ್ನ ಹೆಂಡತಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಆಕೆಯನ್ನು ಕೊಂದಿದ್ದಾನೆ. ನಂತರ ಅಪರಾಧವನ್ನು ಮರೆಮಾಚಲು ಇಬ್ಬರು ಮಕ್ಕಳು ಮತ್ತು ಪತ್ನಿಯ ಅಜ್ಜಿಯನ್ನು ಕೊಂದಿದ್ದಾನೆ. ಕೊಲೆ ಮಾಡಿದ ನಂತರ, ಅವನು ಸೂರತ್‍ಗೆ ಹೋಗಿದ್ದನು. ಅಲ್ಲಿಂದ ಅಹಮದಾಬಾದ್‍ಗೆ ಹಿಂತಿರುಗಿದ್ದು, ಇಂದೋರ್‌ಗೆ ತಪ್ಪಿಸಿಕೊಂಡು ಹೋಗಲು ಸಿದ್ಧತೆ ಮಾಡುತ್ತಿದ್ದ ಎಂದು ಗಾಯಕ್ವಾಡ್ ಪೊಲೀಸರಿಗೆ ತಿಳಿಸಿದ್ದಾರೆ.