ಗಾಂಧಿನಗರ: ಮೃಗಾಲಯದಲ್ಲಿ ಬೋನಿನಲ್ಲಿಟ್ಟ ಸಿಂಹ/ಸಿಂಹಿಣಿಗಳನ್ನು ಹತ್ತಿರದಿಂದ ಕಂಡಾಗಲೇ ಕೆಲವರು ಹೆದರುತ್ತಾರೆ. ಹೀಗಿರುವಾಗ ರಾಜರೋಷವಾಗಿ ಸಿಂಹಿಣಿಯೊಂದು ರಸ್ತೆಗಿಳಿದು ಗ್ರಾಮಸ್ಥರನ್ನು ಬೆಚ್ಚಿಬೀಸಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ರಾತ್ರಿ ಹೊತ್ತು ಕಾಡು ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗಳ ಮೇಲೆ ಸಿಂಹ, ಹುಲಿ ಹಾಗೂ ಇತರೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ ಗುಜರಾತ್‍ನ ಮಾಧವ್‍ಪುರದಲ್ಲಿ ಹಾಡಹಗಲೇ ಸಿಂಹಿಣಿಯೊಂದು ಬೀದಿಗಿಳಿದು ಅಡ್ಡಾದಿಡ್ಡಿ ಓಡಾಡಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
Advertisement
Imagine someone charging at you at 80kmp ????????
Even Usain Bolt can’t escape( Average speed-38kmp)from a charging lion. In such a situation, where will u find tolerance for each other other than India? Video from Madavpur village of Gujurat( VC-SM) pic.twitter.com/PLyOMq6oDv
— Susanta Nanda (@susantananda3) March 7, 2020
Advertisement
ರಸ್ತೆ ಮೇಲೆ ಸಿಂಹಿಣಿ ಓಡಾಡುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಅವರು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಇಷ್ಟು ವೇಗವಾಗಿ ಸಿಂಹಿಣಿ ಓಡಿಸಿಕೊಂಡು ಬಂದರೆ ಜಗತ್ತಿನ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಕೂಡ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದು ಅಧಿಕಾರಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Advertisement
ವಿಡಿಯೋದಲ್ಲಿ ಮೊದಲು ಗ್ರಾಮಸ್ಥರು ತಮ್ಮ ಪಾಡಿಗೆ ತಾವು ಮಾತನಾಡುತ್ತಾ, ಓಡಾಡುತ್ತಾ ನಿಂತಿರುತ್ತಾರೆ. ಇದೇ ವೇಳೆ ವೇಗವಾಗಿ ಓಡಿಬಂದ ಸಿಂಹಿಣಿ ಗ್ರಾಮಕ್ಕೆ ಎಂಟ್ರಿಕೊಡುತ್ತೆ. ಸಿಂಹಿಣಿಯನ್ನು ಕಂಡ ತಕ್ಷಣ ಗ್ರಾಮಸ್ಥರು ಎದ್ನೋ, ಬಿದ್ನೋ ಎಂದು ಓಡಿ ಹೋಗುತ್ತಿರುವ ದೃಶ್ಯ, ಸಿಂಹಿಣಿ ವೇಗವಾಗಿ ಜನರ ಮಧ್ಯೆ ಓಡಿ ಹೋದ ದೃಶ್ಯಗಳು ಸೆರೆಯಾಗಿದೆ.