ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಮೋದಿ (Narendra Modi) ತವರು ಗುಜರಾತ್‌ನಲ್ಲಿ `ಏಕರೂಪದ ನಾಗರಿಕ ಸಂಹಿತೆ’ (UCC) ಜಾರಿ ಸಂಬಂಧ ಬಿಜೆಪಿ ಸರ್ಕಾರ (BJP Government) ಮಹತ್ವದ ತೀರ್ಮಾನ ಪ್ರಕಟಿಸಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಲುವಾಗಿ ಸವಿಸ್ತಾರ ಅಧ್ಯಯನ ನಡೆಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸವುದಾಗಿ ಘೋಷಿಸಿದೆ. ಇದನ್ನೂ ಓದಿ: ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನ – ತುಮಕೂರಿಗೂ ಲಗ್ಗೆ ಇಟ್ಟ ನಕಲಿ ಭಗವದ್ಗೀತೆ ಪುಸ್ತಕ ಜಾಲ
Advertisement
Advertisement
ಬಿಜೆಪಿ 2019ರ ಲೋಕಸಭಾ ಚುನಾವಣೆಯ (Elections) ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರೋದಾಗಿ ಭರವಸೆ ನೀಡಿತ್ತು. ಇತ್ತೀಚೆಗೆ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳೂ ಸಂಹಿತೆ ಜಾರಿಗೊಳಿಸಲು ಸಮಿತಿಗಳನ್ನು ರಚನೆ ಮಾಡಿದ್ದವು. ಈ ರಾಜ್ಯಗಳ ಸಾಲಿಗೆ ಇದೀಗ ಗುಜರಾತ್ ಸಹ ಸೇರ್ಪಡೆಯಾಗಿದೆ. ಇದನ್ನೂ ಓದಿ: ಶಾಸಕ ಬೆಲ್ಲದ್ ಹೆಸರಿನಲ್ಲಿ ಡೆತ್‌ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
Advertisement
Advertisement
ಸಮಿತಿ ರಚನೆ:
ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸಮುತಿಯು 3 ರಿಂದ 4 ಸದಸ್ಯರನ್ನ ಹೊಂದಿರಲಿದೆ. ಚುನಾವಣೆ ನೀತಿ ಸಂಹಿತೆಗೂ ಮುನ್ನವೇ ಈ ಸಂಹಿತೆ ಜಾರಿಯಾಗಲಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ, ಕೇಂದ್ರ ಸಚಿವ ಪುರುಷೋತ್ತಮ ರೂಪಾಲಾ ತಿಳಿಸಿದ್ದಾರೆ. ಇದನ್ನೂ ಓದಿ: ದೇಗುಲ ಸ್ಫೋಟಿಸಲು ಬಂದಿದ್ದ ಬಾಂಬರ್ – ಸಾಹಿತ್ಯ ಓದಿಕೊಂಡೇ ISIS ಮೂಲಭೂತವಾದಿಯಾಗಿದ್ದ
ಏನಿದು ಏಕರೂಪ ನಾಗರಿಕ ಸಂಹಿತೆ?
ಹಿಂದೂ (Hindu), ಮುಸ್ಲಿಂ (Muslims), ಸಿಖ್ಖರು ಸೇರಿದಂತೆ ದೇಶದ ವಿವಿಧ ಧರ್ಮಗಳ ಜನರು ವಿವಾಹ, ಆಸ್ತಿ ಹಂಚಿಕೆ ಸೇರಿ ವಿವಿಧ ಉದ್ದೇಶಗಳೊಗೆ ತಮ್ಮ ಸಮುದಾಯದ ವೈಯಕ್ತಿಕ ಕಾನೂನುಗಳನ್ನು ಪಾಲಿಸುತ್ತಿದ್ದಾರೆ. ಹಾಗಾಗಿ ಎಲ್ಲ ಧರ್ಮದವರಿಗೂ ವಿವಾಹ ವಿಚ್ಛೇದನ, ಅಸ್ತಿ ದತ್ತುಗೆ ಸಂಬಂಧಿಸಿದ ವಿಚಾರಗಳಿಗೆ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ.
ಸಂಹಿತೆ ಏಕೆ?
ರಾಜ್ಯದಲ್ಲಿ ಹಿಂದೂ ವಿವಾಹ ಕಾನೂನುಗಳು ಬೇರೆ-ಬೇರೆಯಾಗಿದ್ದು, ವಿವಿಧ ಸಮಸ್ಯೆಗಳಿಗೆ ಕಾರಣವಾಗಿದೆ. ಅಲ್ಲದೇ ಆಯಾ ವೈಯಕ್ತಿಕ ಧರ್ಮಗಳಲ್ಲಿ (Relegions) ಪ್ರತ್ಯೇಕ ನಿಯಮ ಇರುವ ಕಾರಣ. ಆಸ್ತಿ ವ್ಯಾಜ್ಯಗಳೂ ಹೆಚ್ಚಾಗಿವೆ. ಮಹಿಳೆಯರಿಗೆ ಪತಿ ಅಥವಾ ತಂದೆಯ ಆಸ್ತಿಯಲ್ಲಿ ಪಾಲು ಸಿಗುತ್ತಿಲ್ಲ ಎನ್ನುವ ದೂರುಗಳು ಬರುತ್ತಲೇ ಇರುತ್ತವೆ. ಇದೆಲ್ಲದಕ್ಕೂ ಅಂತ್ಯವಾಡಲು ಒಂದೇ ಕಾನುನು ರೂಪಿಸಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗುತ್ತಿದೆ.