– ಪತ್ನಿ ಕೃತ್ಯದ ಬಗ್ಗೆ ದೂರು ಕೊಟ್ಟ ಪತಿ
– ಅಪ್ರಾಪ್ತೆ ಮೇಲೆ 1 ವರ್ಷದಿಂದ ನಿರಂತರ ಅತ್ಯಾಚಾರ
– ತಾಯಿ ಪರಾರಿ, ಮೂವರು ಅರೆಸ್ಟ್
ಗಾಂಧಿನಗರ: 12 ವರ್ಷದ ಮಗಳ ಮೇಲೆ ಅತ್ಯಾಚಾರವೆಸೆಗಲು ಕಾಮುಕರಿಗೆ ಸ್ವತಃ ತಾಯಿಯೇ ಸಹಕರಿಸಿದ ನೀಚ ಘಟನೆ ಗುಜರಾತ್‍ನ ಭಾವ್‍ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ತನ್ನ ಮಗಳ ಮೇಲೆ ವಿಕೃತಿ ಮೆರೆದ ಪತ್ನಿ ವಿರುದ್ಧ ಪತಿಯೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಭಾವ್‍ನಗರ ಜಿಲ್ಲೆಯ ಭುಟಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ 1 ವರ್ಷದಿಂದ ಕಾಮುಕರು ನನ್ನ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಇದಕ್ಕೆ ಸ್ವತಃ ನನ್ನ ಪತ್ನಿಯೇ ಸಾಥ್ ಕೊಡುತ್ತಿದ್ದಳು ಎಂದು ಬಾಲಕಿ ತಂದೆ ಪೊಲೀಸರಿಗೆ ಶನಿವಾರ ದೂರು ನೀಡಿದ್ದರು. ಇತ್ತ ಪತಿ ತನ್ನ ವಿರುದ್ಧ ದೂರು ನೀಡಿರುವ ವಿಚಾರ ತಿಳಿದ ಪತ್ನಿ ಮನೆಯಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಲ್ಯಾಣ ಮಂಟಪದ ಬಾತ್‍ರೂಮಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‍ಗೈದ ಯುವಕ
ಆರೋಪಿಗಳನ್ನು ಶಾಂತಿ ಧಂಧುಕಿಯಾ(46), ಬಾಬುಬಾಯಿ ಸಾರ್ತನ್‍ಪರ(43), ಚಂದ್ರೇಶ್ ಸಾರ್ತನ್‍ಪರ(32) ಎಂದು ಗುರುತಿಸಲಾಗಿದ್ದು, ಪೊಲೀಸರು ಭಾನುವಾರ ಈ ಮೂವರನ್ನು ಬಂಧಿಸಿದ್ದಾರೆ. ಮಗಳ ಮೇಲೆ ನಡೆಯುತ್ತಿದ್ದ ಅತ್ಯಾಚಾರದ ಬಗ್ಗೆ ತಂದೆಗೆ ಅರಿವಿರಲಿಲ್ಲ. ಆದರೆ ಬಾಲಕಿಯೇ ಈ ಬಗ್ಗೆ ಹೇಳಿದಾಗ ಪತ್ನಿಯ ನೀಚ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೂರು ಹಿಂಪಡೆಯಲು ನಿರಾಕರಿಸಿದ ರೇಪ್ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ
ಕಳೆದ 1 ವರ್ಷದಿಂದ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಮೂವರು ವ್ಯಕ್ತಿಗಳು ನನ್ನನ್ನು ಅತ್ಯಾಚಾರಗೈಯ್ಯುತ್ತಿದ್ದರು. ಇದಕ್ಕೆ ನನ್ನ ತಾಯಿಯೂ ಸಹಕರಿಸುತ್ತಿದ್ದರು. ತಂದೆಗೆ ಏನಾದರು ಕೆಲಸ ಹೇಳಿ ಅವರನ್ನು ಮನೆಯಿಂದ ಹೊರ ಕಳಿಸುತ್ತಿದ್ದರು. ಆ ಬಳಿಕ ಮೂವರು ಮನೆಗೆ ಬಂದು ಅತ್ಯಾಚಾರ ಮಾಡುತ್ತಿದ್ದರು. ಇದನ್ನು ನೋಡಿಕೊಂಡು ತಾಯಿ ಸುಮ್ಮನಿರುತ್ತಿದ್ದರು ಎಂದು ಸಂತ್ರಸ್ತೆ ಪೊಲೀಸರ ಬಳಿ ತಿಳಿಸಿದ್ದಾಳೆ.