ಗಾಂಧಿನಗರ: ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಇತ್ತೀಚೆಗೆ ಆನ್‍ಲೈನ್‍ನ ವಿವಿಧ ಫೀಚರ್‍ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಈ ಬೆಳವಣಿಗೆಯನ್ನು ಆದರಿಸಿ ಸರಕಾರ ರೈತರಿಗೆ ಸ್ಮಾರ್ಟ್ ಫೋನ್ ಖರೀದಿಸಲು 1,500 ರೂ. ನೆರವನ್ನು ನೀಡಲಿದೆ.
ಗುಜರಾತ್‍ನ ಕೃಷಿ, ರೈತ ಕಲ್ಯಾಣ ಮತ್ತು ಸಹಕಾರ ಇಲಾಖೆ ರಾಜ್ಯದ ರೈತರಿಗೆ ಸ್ಮಾರ್ಟ್ ಫೋನ್ ಖರೀದಿಸಲು 1,500 ರೂ.ಗಳ ವರೆಗೆ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಿದೆ. ಈಗಾಗಲೇ ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ವಿವಿಧ ಆನ್‍ಲೈನ್ ಫೀಚರ್‍ಗಳನ್ನು ಬಳಸಲು ಪ್ರಾರಂಭಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮದುವೆ ಫೋಟೋ ಜೊತೆಗೆ ಭಾವನಾತ್ಮಕ ಸಾಲು ಬರೆದು ಶೇರ್ ಮಾಡಿ ಶಿಲ್ಪಾ ಶೆಟ್ಟಿ
Advertisement
Advertisement
ಕೃಷಿ ಮಾಡಲು ಜಮೀನನ್ನು ಹೊಂದಿರುವ ರೈತರು ಮಾತ್ರವೇ ಈ ನೆರವನ್ನು ಪಡೆದುಕೊಳ್ಳಬಹುದು. ಐ-ಖೇದುತ್ ಪೋರ್ಟಲ್ ಮೂಲಕ ರೈತ ಅರ್ಜಿಯನ್ನು ಸಲ್ಲಿಸಬೇಕು. ಈ ಹಣಕಾಸಿನ ನೆರವು ಕೇವಲ ಸ್ಮಾರ್ಟ್ ಫೋನ್ ಖರೀದಿಗೆ ಮಾತ್ರವೇ ಇದ್ದು, ಇತರ ಪರಿಕರಗಳಾದ ಚಾರ್ಜರ್, ಇಯರ್ ಫೋನ್ ಗಳಂತಹ ಬಿಡಿ ಭಾಗಗಳನ್ನು ಖರೀದಿಸಲು ಬಳಕೆ ಮಾಡುವಂತಿಲ್ಲ.