ಗುಜರಾತ್‌ಗೆ ಕಳಂಕ ತರುವ ಸಂಚು ನಡೆಯುತ್ತಿದೆ – ಮೋದಿ ಅಸಮಾಧಾನ

Public TV
1 Min Read
NARENDRA MODI 2 1

ಗಾಂಧಿನಗರ: ವಿಶ್ವ ಮತ್ತು ದೇಶದಲ್ಲಿ ಗುಜರಾತಿನ ಹೆಸರಿಗೆ ಕಳಂಕ ತರಲು ಸಂಚು ರೂಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ವೇಳೆ ಕಛ್ ಜಿಲ್ಲೆಯಲ್ಲಿಂದು ಸುಮಾರು 4,400 ಕೋಟಿ ಮೊತ್ತದ ಯೋಜನೆಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಅಲ್ಲದೇ 2001ರ ಜನವರಿ 21ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಭೂಕಂಪದ ಸಂತ್ರಸ್ತರ ಸ್ಮರಣಾರ್ಥವಾಗಿ ನಿರ್ಮಿಸಿರುವ `ಸ್ಮೃತಿ ವನ ಸ್ಮಾರಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯ ಈ ಸಾಧನೆಗೂ ಮುನ್ನವೇ ವಿಶ್ ಮಾಡಿದ ದೋಸ್ತಿ ABD

ವಿಶ್ವದಲ್ಲಿ ಹಾಗೂ ದೇಶದಲ್ಲಿ ಗುಜರಾತ್ ಹೆಸರಿಗೆ ಕಳಂಕ ತರುವ ಕೆಲಸ ನಡೆಯುತ್ತಿದೆ. ರಾಜ್ಯಕ್ಕೆ ಹರಿದುಬರುವ ಬಂಡವಾಳವನ್ನು ತಡೆಯಲು ಸಂಚು ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ ದೈತ್ಯ ಅವಳಿ ಕಟ್ಟಡ ನೆಲಸಮ – ಅಕ್ಕಪಕ್ಕದ ಕಾಂಪ್ಲೆಕ್ಸ್‌ಗಳ ಗೋಡೆ, ಕಿಟಕಿಗಳು ಡ್ಯಾಮೇಜ್

ದೇಶದಲ್ಲೇ ಮೊದಲ ಬಾರಿಗೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ರೂಪಿಸಿದ ರಾಜ್ಯ ಗುಜರಾತ್. ಕೋವಿಡ್ ಸಾಂಕ್ರಾಮಿಕ ನಿರ್ವಹಣೆ ವೇಳೆಯೂ ಆ ಕಾಯ್ದೆ ಉತ್ತೇಜನಕಾರಿ ಆಗಿತ್ತು. ಬಂಡವಾಳಕ್ಕೆ ತಡೆ ಒಡ್ಡುವ ಎಲ್ಲಾ ರೀತಿಯ ಸಂಚುಗಳನ್ನೂ ವಿಫಲಗೊಳಿಸಿ ಗುಜರಾತ್ ಮತ್ತು ಕಛ್ ಅಭಿವೃದ್ಧಿ ಹೊಂದಿದವು ಎಂದಿದ್ದಾರೆ.

ಇದೇ ವೇಳೆ ಗುಜರಾತ್‌ನಲ್ಲಿ ಈ ಹಿಂದೆ ಭೂಕಂಪ ಸಂಭವಿಸಿದಾಗ ನರೇಂದ್ರ ಮೋದಿ ಅವರು ಕೇವಲ ಬಿಜೆಪಿ ಕಾರ್ಯಕರ್ತರಾಗಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ದೆಹಲಿಯಿಂದ ಕಛ್‌ಗೆ ಆಗಮಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

Modi 3

ಆಣೆಕಟ್ಟು ವಿರೋಧಿಸುತ್ತಿರುವವರು ನಗರ ನಕ್ಸಲರು: ಇದೇ ವೇಳೆ ಮಾತನಾಡಿದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಜಿಲ್ಲೆಗೆ ನರ್ಮದಾ ನೀರು ಬರುವುದನ್ನು ಕಛ್ ಜನರು ಸಂಭ್ರಮಿಸುತ್ತಿದ್ದಾರೆ. ನಗರ ನಕ್ಸಲರು ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ. ಅವರಲ್ಲಿ ಒಬ್ಬ ನಗರ ನಕ್ಸಲ್ ಮೇಧಾ ಪಾಟ್ಕರ್ ಆಗಿದ್ದಾರೆ. ಅವರನ್ನು ಯಾವ ಪಕ್ಷ ಬೆಂಬಲಿಸುತ್ತಿದೆ ಎಂದೂ ತಿಳಿದಿದೆ ಎಂದು ಕಿಡಿಕಾರಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *