ನವದೆಹಲಿ: ಗುಜರಾತ್‌ನಲ್ಲಿ(Gujarat Elections) ಬಿಜೆಪಿ ಈ ಬಾರಿಯೂ ಅಧಿಕಾರ ಹಿಡಿಯಲಿದೆ ಎಂದು ಟೈಮ್ಸ್ ನೌ(Times Now) ವಾಹಿನಿ ತಿಳಿಸಿದೆ. ಆದರೆ ಆಪ್(AAP) ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ.
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ(BJP) 125- 130 ಸ್ಥಾನವನ್ನು ಗೆಲ್ಲುವ ಮೂಲಕ ಸತತ 7ನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ತಿಳಿಸಿದೆ. ಕಾಂಗ್ರೆಸ್ 29-33, ಆಪ್ 20-24, ಇತರರು 1-3 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ
Advertisement
Advertisement
ಹಾಲಿ ವಿಧಾನಸಭೆ ಅವಧಿ ಮುಂದಿನ ವರ್ಷದ ಫೆಬ್ರವರಿ 18ಕ್ಕೆ ಮುಗಿಯಲಿದೆ. ಕಳೆದ ಚುನಾವಣೆಯಲ್ಲಿ ಎನ್‍ಡಿಎ 99, ಕಾಂಗ್ರೆಸ್ 77 ಸ್ಥಾನ ಗೆದ್ದಿತ್ತು. ನಂತರ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಬಲ 111ಕ್ಕೆ ಹೆಚ್ಚಾಗಿತ್ತು.ಇದನ್ನೂ ಓದಿ: ಮೋದಿ ಒಂದು ಸುತ್ತು ಬಂದು ಕೈಬೀಸಿ ಹೋದ್ರೆ, ರಾಹುಲ್ ಗಾಂಧಿ ತೂರಿಕೊಂಡು ಹೋಗ್ತಾರೆ: ಈಶ್ವರಪ್ಪ
Advertisement
ಪ್ರಧಾನಿ ನರೇಂದ್ರ ಮೋದಿ(Narendra Modi) ತವರು ರಾಜ್ಯ ಗುಜರಾತ್‍ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಡೆಯಲಿದೆ. ಈ ಮೊದಲೇ ನಿರ್ಧಾರವಾದಂತೆಯೇ ಹಿಮಾಚಲ ಮತ್ತು ಗುಜರಾತ್ ಚುನಾವಣೆ ಫಲಿತಾಂಶ ಡಿಸೆಂಬರ್ 8ರಂದೇ ಪ್ರಕಟವಾಗಲಿದೆ. ಮೊದಲ ಹಂತದಲ್ಲಿ 89 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ 93 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.