ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನೂ 3 ದಿನ ಮಾತ್ರ ಬಾಕಿ. ಓಖಿ ಚಂಡಮಾರುತದಂತೆ ಗುಜರಾತ್‍ನಲ್ಲೂ ರಾಜಕೀಯ ಚಂಡಮಾರುತ ಅಬ್ಬರಿಸುತ್ತಿದೆ. ಇದರ ಮಧ್ಯೆ ಚುನಾವಣಾ ಪೂರ್ವದಲ್ಲೇ ದೇಶದ ಅತಿ ದೊಡ್ಡ ಚುನಾವಣಾ ಸರ್ವೇ ವರದಿ ಹೊರಬಿದ್ದಿದೆ.
ಗುಜರಾತ್ ಚುನಾವಣೆಯಲ್ಲಿ ಮೋದಿ ಗೆಲ್ತಾರಾ? ರಾಹುಲ್ ಗಾಂಧಿ ಏನಾದರೂ ಮೋಡಿ ಮಾಡ್ತಾರ ಎನ್ನುವ ಪ್ರಶ್ನೆಗೆ ಇವತ್ತಿನ ಸರ್ವೇ ರಿಪೋರ್ಟ್ ಉತ್ತರ ನೀಡುತ್ತದೆ. ಪ್ರಮುಖವಾಗಿ ರಿಪಬ್ಲಿಕ್, ಇಂಡಿಯಾ ಟಿವಿ, ಟೈಮ್ಸ್ ನೌನಿಂದಲೂ ಸೋಲು ಗೆಲುವಿನ ಲೆಕ್ಕಾಚಾರ ಹೊರಬಿದ್ದಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಪ್ರಖ್ಯಾತ ಜ್ಯೋತಿಷಿಯೊಬ್ಬರು ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ ಬರುತ್ತದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
Advertisement
ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 182
ಮ್ಯಾಜಿಕ್ ಸಂಖ್ಯೆ :92
Advertisement
ರಿಪಬ್ಲಿಕ್ ಟಿವಿ: ಬಿಜೆಪಿಗೆ 110 – 125 ಸ್ಥಾನ ಸಿಕ್ಕಿದರೆ, ಕಾಂಗ್ರೆಸ್ 53 – 68 ಸ್ಥಾನಗಳು ಸಿಗಲಿದ್ದು, 04 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
Advertisement
ಸಮಯ್ ಲೈವ್: ಬಿಜೆಪಿ – 128 ಸ್ಥಾನ ಸಿಕ್ಕಿದರೆ, ಕಾಂಗ್ರೆಸ್ – 52, ಇತರೆ – 02 ಸ್ಥಾನಗಳಲ್ಲಿ ಜಯಗಳಿಸಲಿದೆ.
Advertisement
ಟೈಮ್ಸ್ ನೌ: ಬಿಜಪಿಗೆ 111 ಸ್ಥಾನ ಸಿಕ್ಕಿದರೆ ಕಾಂಗ್ರೆಸ್‍ಗೆ 68 ಸ್ಥಾನ, ಇತರೆ 3 ಸ್ಥಾನಗಳಲ್ಲಿ ಜಯಗಳಿಸುತ್ತದೆ ಎಂದು ಹೇಳಿದೆ.
ಜ್ಯೋತಿಷಿ ಸರ್ವೇ: ಖ್ಯಾತ ಜ್ಯೋತಿಷಿ ಅನಿರುದ್ಧ್ ಕುಮಾರ್ ಮಿಶ್ರಾ ಅವರ ಭವಿಷ್ಯವಾಣಿಯಲ್ಲೂ ಬಿಜೆಪಿಗೆ ಬಹುಮತ ಸಿಕ್ಕಿದೆ. ಬಿಜೆಪಿಗೆ 127 ರಿಂದ 134 ಸ್ಥಾನ ಸಿಕ್ಕಿದರೆ, ಕಾಂಗ್ರೆಸ್‍ಗೆ 40 ರಿಂದ 45 ಸ್ಥಾನ ಸಿಗಬಹುದು. ಇತರರು ಶೂನ್ಯ ಸಂಪಾದಿಸಬಹುದು ಅಥವಾ ಗರಿಷ್ಟ 5 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ.
2012 ರಲ್ಲಿ ಯಾರಿಗೆ ಎಷ್ಟು?
72.5% ಮತದಾನ ನಡೆದಿದ್ದು, 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.
2014ರಲ್ಲಿ ಎಷ್ಟು?
ಲೋಕಸಭಾ ಚುನಾವಣೆಯಲ್ಲಿ ಒಟ್ಟು 63.6% ಮತದಾನ ನಡೆದಿದ್ದು, ಎಲ್ಲ 26 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಬಿಜೆಪಿಗೆ 60.1% ಮತ ಬಿದ್ದರೆ, ಕಾಂಗ್ರೆಸ್‍ಗೆ 33.5% ಮತ ಬಿದ್ದಿತ್ತು.
Clear majority for BJP in Gujarat elections according to the opinion poll. #ModiWinsGujarat pic.twitter.com/jMAmc3ijIW
— TIMES NOW (@TimesNow) December 6, 2017
#Dec18WithTimesNow : Here are the vote shares from the opinion poll: pic.twitter.com/ZdXjhG1Ciy
— TIMES NOW (@TimesNow) December 6, 2017
Here is the voteshare in North Gujarat #Dec18WithTimesNow pic.twitter.com/tlJScJgymc
— TIMES NOW (@TimesNow) December 6, 2017
More pictures from Dahod. pic.twitter.com/u3QCvvKKSJ
— Narendra Modi (@narendramodi) December 6, 2017
Unbelievable enthusiasm at the Dahod rally. Thankful to all those who joined us today. I can see tremendous support for BJP's development agenda in all parts of Gujarat. pic.twitter.com/s0IPtVr349
— Narendra Modi (@narendramodi) December 6, 2017
Addressed a rally in Dhandhuka. Here are some pictures. pic.twitter.com/Q1dISq98vR
— Narendra Modi (@narendramodi) December 6, 2017