ಗಾಂಧೀನಗರ: ರಾಮಮಂದಿರ (Ram Mandir) ವಿಚಾರದಲ್ಲಿ ಕಾಂಗ್ರೆಸ್‌ನ (Congress) ನಿಲುವಿನಿಂದ ಅಸಮಾಧಾನಗೊಂಡು ಗುಜರಾತ್‌ನ (Gujarat) ಕಾಂಗ್ರೆಸ್ ಶಾಸಕ ಸಿ.ಜೆ ಚಾವ್ಡಾ (CJ Chavda) ರಾಜೀನಾಮೆ ನೀಡಿದ್ದಾರೆ.
ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕರಾದ ಸಿಜೆ ಚಾವ್ಡಾ ವಿಜಾಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಮಮಂದಿರ ವಿಷಯದಲ್ಲಿ ನಮ್ಮ ಪಕ್ಷದ (ಕಾಂಗ್ರೆಸ್) ಧೋರಣೆಯಿಂದ ಅಸಮಾಧಾನವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಗಾಂಧೀನಗರದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಸರಯೂ ನದಿಯ ತೀರಕ್ಕೆ ಕರ್ನಾಟಕದ ಸಪ್ತರ್ಷಿಗಳು
Advertisement
Advertisement
ರಾಜೀನಾಮೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೂ ನಾನು ರಾಜೀನಾಮೆ ನೀಡಿದ್ದೇನೆ. ಸುಮಾರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇಡೀ ದೇಶವೇ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಎದುರು ನೋಡುತ್ತಿದೆ. ಅದರಿಂದಾಗಿ ದೇಶದ ಜನರು ಬಹಳ ಸಂತೋಷದಿಂದ ಇದ್ದಾರೆ. ಆ ಸಂತೋಷದಲ್ಲಿ ಭಾಗವಹಿಸುವ ಬದಲು, ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯೇ ನನ್ನ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ರಾಮನನ್ನು ನೋಡಿದ್ದಾರಾ? ನೀವು ಹೇಳಿದಂತೆ ರಚನೆ ಮಾಡೋಣ: ಕಾಣಿಯೂರು ಶ್ರೀ ತಿರುಗೇಟು
Advertisement
Advertisement
ಗುಜರಾತ್‌ನ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೆಲಸಗಳು, ನೀತಿಗಳಿಗೆ ನಾವು ಬೆಂಬಲ ನೀಡಬೇಕಿತ್ತು. ಆದರೆ ನಾನು ಕಾಂಗ್ರೆಸ್‌ನಲ್ಲಿ ಇರುವುದರಿಂದ ಅದು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ನಾನು ರಾಜೀನಾಮೆ ನೀಡಿದ್ದೇನೆ ಎಂದು ಚಾವ್ಡಾ ಹೇಳಿದ್ದಾರೆ.
ಚಾವ್ಡಾ ಅವರು ರಾಜೀನಾಮೆ ನೀಡಿದ ನಂತರ 182 ಸದಸ್ಯ ಬಲವಿರುವ ಗುಜರಾತ್ ವಿಧಾನಸಭೆಯಲ್ಲಿ ಈಗ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ 15 ಕ್ಕೆ ಇಳಿದಿದೆ. ಚಾವ್ಡಾ ಅವರು ಬಿಜೆಪಿಗೆ ಹೋಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಕುರಿತು ಬಿಜೆಪಿಯಿಂದ ಯಾವುದೇ ಸೂಕ್ತ ಮಾಹಿತಿಗಳಿಲ್ಲ. ಈ ಹಿಂದೆಯೂ ಇದೇ ರೀತಿ ಖಂಭತ್‌ನ ಆನಂದ್ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಚಿರಾಗ್ ಪಾಟೇಲ್ ಎಂಬವರು ಕೂಡ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರಿಗೆ ಆಹ್ವಾನ
ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ನಂತರದ ದಿನಗಳಲ್ಲಿ ಭಕ್ತರ ದರ್ಶನಕ್ಕೆ ರಾಮಮಂದಿರ ತೆರೆಯಲಿದೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾ ದಿನ ಗೈರಾದ್ರೆ 1 ಸಾವಿರ ಫೈನ್ ಪ್ರಕರಣ- ಶಾಲೆಯ ಪ್ರಾಂಶುಪಾಲರ ಸ್ಪಷ್ಟನೆ ಏನು?