ವಡೋದರ: ನೋಟಿಸ್ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದ ಸ್ಥಳೀಯ ಬಿಜೆಪಿ ಪಾಲಿಕೆಯ ಕಾರ್ಪೊರೇಟರ್ ಒಬ್ಬರನ್ನು ಮರಕ್ಕೆ ಕಟ್ಟಿ 30 ಜನರು ಹಲ್ಲೆ ನಡೆಸಿರುವ ಘಟನೆ ಗುಜರಾತ್‍ನ ವಡೋದರದಲ್ಲಿ ನಡೆದಿದೆ.
ಹಸ್ಮುಖ್ ಪಟೇಲ್ ಸ್ಥಳಿಯರಿಂದ ಹಲ್ಲೆಗೊಳಗಾದ ಬಿಜೆಪಿ ಕಾರ್ಪೊರೇಟರ್. ಪಾಲಿಕೆ ಅಲ್ಲಿ ನೆಲೆಸಿದ್ದ ನಿವಾಸಿಗಳ ಮನೆಗಳನ್ನು ಬುಲ್ಡೋಜರ್‍ನಿಂದ ಕೆಡವಲು ಮುಂದಾಗಿತ್ತು. ಈ ವೇಳೆ ಉದ್ರಿಕ್ತರ ಗುಂಪೊಂದು ಕಾರ್ಪೊರೇಟರ್‍ನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
Advertisement
ಏನಿದು ಘಟನೆ:
ಮನೆಗಳ ತೆರವು ಕಾರ್ಯಾಚರಣೆಗೆ ಪುರಸಭೆ ಮುಂದಾಗಿತ್ತು. ಇದಕ್ಕೆ ಸಂಬಂಧಿಸಿದ ನೋಟಿಸ್ ನೀಡುವಂತೆ ಜನರು ಪುರಸಭೆ ಆಯುಕ್ತರ ಬಳಿ ಹೋಗಿದ್ದಾರೆ. ನೋಟಿಸ್ ಈಗಾಗಲೇ ಕಾರ್ಪೊರೇಟರ್‍ಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ನೋಟಿಸ್ ನೀಡಿದ್ದರೂ ಸ್ಥಳೀಯರಿಗೆ ಮಾಹಿತಿ ನೀಡಿಲ್ಲವೆಂದು ಕೋಪಗೊಂಡು ನೇರ ಕಾರ್ಪೊರೇಟರ್ ಮನೆಗೆ ತೆರಳಿ ನೋಟಿಸ್ ತೋರಿಸುವಂತೆ ಕೇಳಿದ್ದಾರೆ. ನೋಟಿಸ್ ನೀಡಲು ನಿರಾಕರಿಸಿದ್ದಕ್ಕೆ ಉದ್ರಿಕ್ತ 30 ಜನರ ಗುಂಪೊಂದು ಹಸ್ಮುಖ್ ಪಟೇಲ್‍ರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
Advertisement
http://www.youtube.com/watch?v=VrUPxLZtYsg
Advertisement
ಬಳಿಕ ಸ್ಥಳಕ್ಕೆ ವಡೋದರ ಪೊಲೀಸರು ಸ್ಥಳಕ್ಕೆ ಆಗಮಿಸಿ 30 ಮಂದಿ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಸದ್ಯ ಕಾರ್ಪೊರೆಟರ್‍ನನ್ನು ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.