ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Assembly Election) ಪ್ರಚಾರ ಭರದಿಂದ ಸಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಆದಿಯಾಗಿ ಬಿಜೆಪಿಯ (BJP) ಎಲ್ಲ ನಾಯಕರು ಅದ್ಧೂರಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಪ್ರತಿಪಕ್ಷಗಳಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ (Rahul Gandhi) ಆಪ್‍ನಿಂದ (AAP) ಅರವಿಂದ್ ಕೇಜ್ರಿವಾಲ್ (Arvind Kejriwal) ಹೀಗೆ ಹಲವು ನಾಯಕರು ಗಾಂಧಿ ನಾಡಲ್ಲಿ ಠಿಕಾಣಿ ಹೂಡಿದ್ದಾರೆ.
ಎಲ್ಲ ರಾಜ್ಯಗಳಂತೆ ಗುಜರಾತ್‍ನಲ್ಲಿ ಜಾತಿ ರಾಜಕಾರಣದ ಲೆಕ್ಕಾಚಾರ ನಡೆಯುತ್ತಿದ್ದು ಈ ಬಾರಿ ಪಾಟಿದಾರ್ ಸಮುದಾಯ ಯಾರಿಗೆ ಮತ ನೀಡಲಿದೆ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಕಳೆದ ಬಾರಿ ಪಾಟಿದಾರ್ ಹೋರಾಟ ತೀವ್ರಗೊಂಡಿದ್ದ ಹಿನ್ನೆಲೆ ಮತಗಳು ಕಾಂಗ್ರೆಸ್ (Congress) ಮತ್ತು ಬಿಜೆಪಿಯ ನಡುವೆ ಛಿದ್ರವಾಗಿದ್ದವು. ಕಾಂಗ್ರೆಸ್ ಕೊಂಚ ಹೆಚ್ಚು ಮತಗಳನ್ನು ಪಡೆದುಕೊಂಡಿತ್ತು. ಇದನ್ನೂ ಓದಿ: ಪುರುಷರು ಜೊತೆಯಲ್ಲಿರದಿದ್ದರೆ ಮಹಿಳೆಯರಿಗಿಲ್ಲ ಜಾಮಾ ಮಸೀದಿ ಪ್ರವೇಶ
2017ರ ಚುನಾವಣೆಯಲ್ಲಿ ಪಾಟಿದಾರ್ ಸಮುದಾಯ ಬಲಿಷ್ಠವಾಗಿರುವ 40 ಕ್ಷೇತ್ರಗಳ ಪೈಕಿ 24 ಸ್ಥಾನಗಳಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಸೌರಾಷ್ಟ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ಅಹಮದಾಬಾದ್ ಮತ್ತು ಗಾಂಧಿನಗರದ ನಗರ ಕೇಂದ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತು. 2012ರಲ್ಲಿ ಬಿಜೆಪಿ 28, ಕಾಂಗ್ರೆಸ್ 09 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್ ಫೋನ್
ಕಳೆದ ಬಾರಿ ಉತ್ತಮ ಸಾಧನೆ ಮಾಡಿದ್ದ ಕಾಂಗ್ರೆಸ್‍ಗೆ ಈ ಬಾರಿ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ. ಪಾಟಿದಾರ್ ಹೋರಾಟ ಅಂತ್ಯವಾಗಿದೆ. ಹೋರಾಟದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅವರು ಅಹಮದಾಬಾದ್ ಜಿಲ್ಲೆಯ ವಿರಾಮ್‌ಗಾಮ್‌ನಿಂದ ಸ್ಪರ್ಧಿಸುತ್ತಿದ್ದಾರೆ.
ಕಳೆದ ಬಾರಿ ಹೋರಾಟಕ್ಕೆ ಬೆಂಬಲ ನೀಡಿದ ಹಿನ್ನೆಲೆ ಹೆಚ್ಚು ಸ್ಥಾನ ಪಡೆಯುವಲ್ಲಿ ಸಫಲವಾಗಿತ್ತು. ಈ ಬಾರಿ ಹೋರಾಟವೂ ಇಲ್ಲ, ಹೋರಾಟ ನಾಯಕನೂ ಇಲ್ಲದಂತ ಪರಿಸ್ಥಿತಿ ಕಾಂಗ್ರೆಸ್‍ನಲ್ಲಿ ನಿರ್ಮಾಣವಾಗಿದೆ. ಮುಖ್ಯವಾಗಿ ಕೇಂದ್ರ ಸರ್ಕಾರದ 10% ಮೀಸಲಾತಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿರುವುದು ಬಿಜೆಪಿಗೆ ಹೆಚ್ಚು ಲಾಭ ತಂದುಕೊಡಬಹುದು ಎನ್ನಲಾಗುತ್ತಿದೆ.
ಪಾಟಿದಾರ್‌ಗಳು ಗುಜರಾತ್‍ನಲ್ಲಿ ಹೆಚ್ಚು ಭೂಮಿ ಹೊಂದಿರುವವರು ಮತ್ತು ಕೃಷಿಕ ಜಾತಿ, ಗುಜರಾತ್‍ನ ಜನಸಂಖ್ಯೆಯ 12% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದಾರೆ ಮತ್ತು ರಾಜ್ಯದ ರಾಜಕೀಯದಲ್ಲಿ ಗಮನಾರ್ಹವಾದ ಹಿಡಿತವನ್ನು ಹೊಂದಿದ್ದಾರೆ. ಈ ಹಿನ್ನೆಲೆ ಆಪ್ ಕೂಡಾ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಸದ್ಯಕ್ಕೆ 44 ಶಾಸಕರಿರುವ ಪಾಟಿದಾರ್ ಶಾಸಕರ ಸಂಖ್ಯೆ ಈ ಬಾರಿ ಹೆಚ್ಚಬಹುದು ಎನ್ನಲಾಗುತ್ತಿದೆ.