ಲಕ್ನೋ: ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಗುಜರಾತ್‍ನ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ವಕ್ತಾರ ಡ್ಯಾನಿಶ್ ಖುರೇಷಿ ಅವರನ್ನು ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ.
ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಖುರೇಷಿ ವಿರುದ್ಧ ವಿಶ್ವ ಹಿಂದೂ ಪರಿಷತ್ ದೂರು ದಾಖಲಿಸಿದೆ. ಕಾಶಿ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದ ಮೂರು ದಿನಗಳ ಸಮೀಕ್ಷೆ ವೇಳೆ ಗುಮ್ಮಟ ಆಕಾರದ ರಚನೆಯುಳ್ಳ ಶಿವಲಿಂಗ ಪತ್ತೆಯಾಗಿದೆ. ಆದರೆ ಈ ಪ್ರಕರಣವನ್ನು ಮಸೀದಿಯ ಆಡಳಿತ ಮಂಡಳಿ ತಳ್ಳಿಹಾಕಿದ್ದು, ಅದು ವಾಸ್ತವವಾಗಿ ರಚಿಸಲಾಗಿರುವ ಕಾರಂಜಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್ ವಿಚಾರಣೆಗೆ ಸುಪ್ರೀಂ ತಡೆ
Advertisement
Advertisement
ಈ ಕುರಿತಂತೆ ಖುರೇಷಿಗೆ ಸೇರಿದ ಟ್ವಿಟ್ಟರ್ ಹ್ಯಾಂಡಲ್‍ನಿಂದ ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಅವಹೇಳನಕಾರಿ ಪದ ಬಳಸಿರುವುದು ಸೈಬರ್ ತಂಡದ ಗಮನಕ್ಕೆ ಬಂದಿದ್ದು, ನಂತರ ಕ್ರಮ ಕೈಗೊಳ್ಳಲಾಗಿದೆ. ನಾವು ಟ್ವಿಟ್ಟರ್ ಹ್ಯಾಂಡಲ್‍ನ ತಾಂತ್ರಿಕ ವಿಶ್ಲೇಷಣೆ ನಡೆಸಿ ಖುರೇಷಿಯನ್ನು ಬಂಧಿಸಿದ್ದೇವೆ ಎಂದು ಅಪರಾಧ ವಿಭಾಗ ಎಸಿಪಿ ಜೆಎಂ ಯಾದವ್ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ