ಗಾಂಧಿನಗರ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಗುಜರಾತ್‍ನ ಅಹಮದಾಬಾದ್‍ಗೆ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭದ್ರತೆಗಾಗಿ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ವಡೋದರಾ ನಗರದ ಗೋರ್ವಾ ಪೊಲೀಸ್ ಠಾಣೆಯ ಪೇದೆ ಸಂಗೀತಾ ಪರ್ಮಾರ್ ಅವರನ್ನು ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕಾಗಿ ಅಹಮದಾಬಾದ್‍ನಲ್ಲಿ ನಿಯೋಜಿಸಲಾಗಿದೆ. ಹೀಗಾಗಿ ಸಂಗೀತಾ ಅವರು ಒಂದು ವರ್ಷದ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದನ್ನೂ ಓದಿ: ಟ್ರಂಪ್‍ಗೆ ಹೈ ಸೆಕ್ಯೂರಿಟಿ – 1,2,3….14 ಬೆಂಗಾವಲು ವಾಹನಗಳ ವಿಶೇಷತೆ ಏನು? ಯಾವುದರಲ್ಲಿ ಏನಿದೆ?
Advertisement
Advertisement
ಟ್ರಂಪ್ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಫೆಬ್ರವರಿ 19ರಂದು ಅಹಮದಾಬಾದ್‍ಗೆ ಹೋಗುವಂತೆ ಸಂಗೀತಾ ಪರ್ಮಾರ್ ಅವರಿಗೆ ಆದೇಶಿಸಲಾಗಿತ್ತು. ಆದೇಶದ ಪಡೆದ ಸಂಗೀತಾ ಅವರು, ತಮ್ಮ ಒಂದು ವರ್ಷದ ಮಗು ಅನಾರೋಗ್ಯದಿಂದ ಬಳಲುತ್ತಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಕೊನೆಯಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡು ಫೆಬ್ರವರಿ 18ರಂದು ರಾತ್ರಿ ಮಗನೊಂದಿಗೆ ಅಹಮದಾಬಾದ್ ತಲುಪಿದ್ದರು.
Advertisement
ಸಂಗೀತಾ ಅವರವನ್ನು ರಾಯಚಂದ್ ನಗರ ರಸ್ತೆಯಲ್ಲಿ ನಿಯೋಜನೆ ಮಾಡಲಾಗಿದೆ. ಹೀಗಾಗಿ ಅವರು ಬಸ್ ನಿಲ್ದಾಣವೊಂದರಲ್ಲಿ ಸೀರೆಯಿಂದ ಮಗುವಿಗೆ ಜೋಳಿಗೆ ಕಟ್ಟಿದ್ದಾರೆ. ಅದರಲ್ಲಿ ಮಗುವನ್ನು ಮಲಗಿಸಿ ಪಾಲನೆಯ ಜೊತೆಗೆ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದಾರೆ.
Advertisement
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಗೀತಾ ಅವರು, ನಾನು ಅಹಮದಾಬಾದ್‍ಗೆ ಬಂದಾಗ ಮಗವನ್ನು ನಿಯೋಜನಾ ಸ್ಥಳದಿಂದ 24 ಕಿ.ಮೀ ದೂರದಲ್ಲಿರುವ ಸಾಕೇತ್ ಗ್ರಾಮದಲ್ಲಿ ಸಂಬಂಧಿಕರೊಂದಿಗೆ ಬಿಟ್ಟಿದ್ದೆ. ಆದರೆ ಮಗು ತುಂಬಾ ಅಳುತ್ತಿತ್ತು. ಹೀಗಾಗಿ ಒಂದು ದಿನದ ಬಳಿಕ ಮಗವನ್ನು ತೆಗದುಕೊಂಡು ಬಂದೆ. ಬಳಿಕ ನಾನು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಮಗುವನ್ನು ತೆಗದುಕೊಂಡು ಬರಲು ಆರಂಭಿಸಿದೆ. ನಾನು ಬೆಳಗ್ಗೆ 8 ಗಂಟೆಗೆ ಇಲ್ಲಿಗೆ ಬಂದು ರಾತ್ರಿ 9 ಗಂಟೆಗೆ ಹೊರಡುತ್ತೇನೆ. ಎರಡೂ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಕೆಲವೊಮ್ಮೆ ಮಗುವಿಗೆ ಹಾಲುಣಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
Sangita Parmer, a police constable is performing her duties at Visat, Ahmadabad, with her 1 year old son. She says, "It is difficult but it is my responsibility to fulfill both duties of a mother & a constable. He is not well therefore I have to bring and breastfeed him".#Gujarat pic.twitter.com/ccOAeLZfY3
— ANI (@ANI) February 23, 2020