ಗಾಂಧೀನಗರ: ಟೋಲ್ ಬೂತ್ ಸಿಬ್ಬಂದಿಗೆ (Toll Booth Worker) ಕಪಾಳಮೋಕ್ಷ ಮಾಡಿದ ಆರೋಪದಡಿ ಆಮ್ ಆದ್ಮಿ ಪಕ್ಷದ ಗುಜರಾತ್ (Gujarat) ವಿಭಾಗದ ಉಪಾಧ್ಯಕ್ಷ ಮತ್ತು ಸೋಮನಾಥ್ ಕ್ಷೇತ್ರದ (Somnath constituency) ಪಕ್ಷದ ಅಭ್ಯರ್ಥಿ ಜಗ್ಮಲ್ ವಾಲಾ (Jagmal Val) ಅವರ ಮೇಲೆ ಪ್ರಕರಣ ದಾಖಲಾಗಿದೆ.
ಬುಧವಾರ ರಾತ್ರಿ ವೆರಾವಲ್ (Veraval) ಬಳಿಯ ದರಿ ಟೋಲ್ ಪ್ಲಾಜಾದಲ್ಲಿ ಎಎಪಿ ನಾಯಕ ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವೇಳೆ ಘಟನೆ ನಡೆದಿದೆ. ಪಕ್ಷದ ಇತರ ಕಾರ್ಯಕರ್ತರೊಂದಿಗೆ ಜಗ್ಮಲ್ ವಾಲಾ ಅವರು ಮೂರು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು. ಕೆಲವು ಕಾರಣಗಳಿಂದ ಕೋಪಗೊಂಡ ಜಗ್ಮಲ್ ವಾಲಾ ಟೋಲ್ ಬೂತ್ ನೌಕರನಿಗೆ ಕಪಾಳಮೋಕ್ಷ ಮಾಡಿ, ಗಲಾಟೆ ಮಾಡಿದ್ದಾರೆ. ಈ ಘಟನೆಯ ದೃಶ್ಯ ಪ್ಲಾಜಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಟೋಲ್ ಬೂತ್ ಸಿಬ್ಬಂದಿ ಜಗ್ಮಲ್ ವಾಲಾ ವಿರುದ್ಧ ದೂರು ನೀಡಿದ್ದು, ಪ್ರಭಾಸ್ ಪಟಾನ್ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು – ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಸರ ಕಿತ್ತು ಎಸ್ಕೇಪ್
Advertisement
Advertisement
ಈಗಾಗಲೇ ಈ ಹಿಂದೆ ತಮ್ಮ ಕಚೇರಿಯಲ್ಲಿಯೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಬೆದರಿಕೆಯೊಡ್ಡಿ, ಥಳಿಸಿದ ಪ್ರಕರಣದಡಿ ಜಗ್ಮಲ್ ವಾಲಾ ಜೈಲು ಪಾಲಾಗಿದ್ದರು. ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ಘಟನೆ ನಡೆದಿದ್ದು, ಇದು ಜಗ್ಮಲ್ ವಾಲಾ ವರ್ಚಸ್ಸಿಗೆ ಧಕ್ಕೆಯುಂಟು ಮಾಡಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ