ನವದೆಹಲಿ: ವೀಕೆಂಡ್ ಮುಗಿದ ನಂತರ ಬರುವ ಸೋಮವಾರವನ್ನು ಯಾಕಾದರೂ ಬರುತ್ತೋ ಎಂದು ಶಪಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಇದೀಗ ಅಚ್ಚರಿ ಎನ್ನುವಂತೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Record) ಸಂಸ್ಥೆಯೂ ಅಧಿಕೃತವಾಗಿ ಸೋಮವಾರವನ್ನು (Monday) ಕೆಟ್ಟ ದಿನವೆಂದು ಘೋಷಿಸಿದೆ.
ಬಹಳಷ್ಟು ಜನರಿಗೆ ಸೋಮವಾರವು ನೀರಸ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಟ್ವೀಟ್ ಮಾಡಿ, ವಾರದ (Week) ಅತ್ಯಂತ ಕೆಟ್ಟ ದಿನದ ದಾಖಲೆಯನ್ನು ನಾವು ಸೋಮವಾರ ಅಧಿಕೃತವಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕಾಲ್ಕೆರೆಯುತ್ತಾ ಜಗಳಕ್ಕೆ ಬಂದವನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ ಸಹ ಪ್ರಯಾಣಿಕ
we’re officially giving monday the record of the worst day of the week
— Guinness World Records (@GWR) October 17, 2022
- Advertisement
ಈ ಪೋಸ್ಟ್‌ನ್ನು 4 ಲಕ್ಷಕ್ಕೂ ಅಧಿಕ ಜನರು ಲೈಕ್ ಹಾಗೂ ಕಾಮೆಂಟ್ ಮಾಡಿದ್ದು, ನೆಟ್ಟಿಗರು ವಿಭಿನ್ನ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ ಈ ಕಾರಣಕ್ಕಾಗಿಯೇ ನಾನು ಸೋಮವಾರ ರಜೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ. ಇನ್ನೋರ್ವ ನೀವು ಸಾಕಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂದು ಹೇಳಿದ್ದಾನೆ. ಇದನ್ನೂ ಓದಿ: 7 ತಿಂಗಳು ಕಳೆದರೂ ಸ್ಮಾರ್ಟ್, ಹೈಟೆಕ್ ಮೀನು ಮಾರುಕಟ್ಟೆಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ