– ಹಳ್ಳ ಹಿಡಿದ ಐದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಾರುಕಟ್ಟೆ
– ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಬ್ಬಳ್ಳಿ ಜನರ ಆಕ್ರೋಶ
– ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಬ್ಬಳ್ಳಿ ಜನರ ಆಕ್ರೋಶ
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ(Smart City) ಮಾಡುವ ನಿಟ್ಟಿನಲ್ಲಿ ನೂರಾರು ಕಾಮಗಾರಿಗಳು ನಗರದಲ್ಲಿ ಆರಂಭಗೊಂಡಿವೆ. ಈಗಾಗಲೇ ಇನ್ನೂ ಕೆಲವು ಕಾಮಗಾರಿಗಳು ಮುಗಿದಿವೆ. ಹೀಗೆ ಸ್ಮಾರ್ಟ್ ಸಿಟಿ ಅನುದಾನದಡಿಯಲ್ಲಿ ನಿರ್ಮಾಣಗೊಂಡಿರುವ ಹೈ-ಟೆಕ್ ಫಿಶ್ ಮಾರ್ಕೆಟ್ ಜನರಿಗೆ ಅನುಕೂಲ ಮಾಡುವ ಬದಲು ಅನಾನುಕೂಲ ಮಾಡಿದೆ.
Advertisement
ಹೌದು. ಸ್ಮಾರ್ಟ್ ಸಿಟಿ ಯೋಜನೆ ಅನುದಾನದಡಿಯಲ್ಲಿ ಹುಬ್ಬಳ್ಳಿ (Hubballi) ನಗರದ ಗಣೇಶ ಪೇಟೆಯಲ್ಲಿ ಸುಮಾರು 5.6 ಕೋಟಿ ವೆಚ್ಚದಲ್ಲಿ ವಿಶ್ವ ದರ್ಜೆಯ ಹೈಟೆಕ್ ಮೀನು ಮಾರುಕಟ್ಟೆ(High Tech Fish Market) ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಕಾಮಗಾರಿ ಮುಕ್ತಾಯಗೊಂಡು ಈಗಾಗಲೇ ಏಳು ತಿಂಗಳು ಕಳೆದಿದ್ದರೂ ಇನ್ನೂ ಇದಕ್ಕೆ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಹೀಗಾಗಿ ಮೀನು ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿಯೇ ಸದ್ಯ ಮೀನು ಮಾರಾಟ ನಡೆಯುತ್ತಿದೆ. ಇದರಿಂದಾಗಿ ಮೀನುಗಳ ಅವಶೇಷಗಳು, ತ್ಯಾಜ್ಯ ನೀರು ಸಂಗ್ರಹವಾಗಿ ಈ ಏರಿಯಾದ ದಾರಿಯಲ್ಲಿ ಸಾಗುವುದೇ ಕಷ್ಟವಾಗಿದೆ. ಪಕ್ಕದ ನಿವಾಸಿಗಳು ವ್ಯಾಪಾರಿಗಳು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಅಮ್ಮ ನನ್ನ ಚಾಕ್ಲೇಟ್ ಕದ್ದಿದ್ದು, ಅವಳನ್ನು ಜೈಲಿಗೆ ಹಾಕಿ- ಪೊಲೀಸರಿಗೆ ದೂರು ನೀಡಿದ ಪುಟಾಣಿ
Advertisement
Advertisement
ಮೀನು ಮಾರಾಟಗಾರರಿಗೆ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಮಾಲಿನ್ಯ ಸಂಸ್ಕರಣಾ ಘಟಕ ಇಲ್ಲದಿರುವುದರಿಂದ ತ್ಯಾಜ್ಯಗಳು ರಾಶಿ ರಾಶಿಯಾಗಿ ಬಿದ್ದುಕೊಂಡು ಸ್ವಚ್ಛತೆಯಿಲ್ಲದಂತಾಗಿದೆ. ಸದ್ಯ ರಸ್ತೆಯಲ್ಲಿಯೇ ಮೀನು ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇನ್ನೂ ಸತ್ತ ಮೀನುಗಳಿಂದ ಬರುವ ದುರ್ಗಂಧದಿಂದಾಗಿ ಜನರ ಉಸಿರಾಟಕ್ಕೂ ಸಹ ತೊಂದರೆಯಾಗುತ್ತಿದೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಕೇಳಿದರೆ ಕುಂಟು ನೆಪಗಳನ್ನು ಹೇಳುತ್ತಾರೆ.
Advertisement
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]