– 200 ಯೂನಿಟ್ ಕರೆಂಟ್ ನೀಡುವಂತೆ ಆಗ್ರಹ
ಬೆಂಗಳೂರು: ಮಹಿಳೆಯರಿಗೂ ಉಚಿತ ಸರ್ಕಾರಿ ಬಸ್ ಪ್ರಯಾಣ ಬಗ್ಗೆ ಇಂದು ಸರ್ಕಾರ ಆದೇಶ ನೀಡುವ ಸಾಧ್ಯತೆ ಇದೆ. ಗೃಹ ಲಕ್ಷ್ಮಿ ಯೋಜನೆಗೂ ಇಂದು ಸರ್ಕಾರಿ ಆದೇಶ ನೀಡಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ (Gruhalaxmi Scheme) ಗೆ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ.
ಮಿನಿಮಮ್ ಕಂಡೀಷನ್ಸ್ ಮ್ಯಾಕ್ಸಿಮಮ್ ಬೆನಿಫಿಟ್ ಆಧಾರದಲ್ಲಿ ಆದೇಶಗಳ ಪ್ರಕಟವಾಗಲಿದ್ದು, ಆದೇಶಗಳ ಪ್ರಕಟಕ್ಕೆ ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ. ಸರಾಸರಿ ವಿದ್ಯುತ್ ಬಳಕೆ ಮೇಲೆ ಉಚಿತ ಕೊಡಲು ಜನರ ವಿರೋಧವಿದ್ದು, 200 ಯೂನಿಟ್ ಉಚಿತ ವಿದ್ಯುತ್ (200 Unit Free Electricity) ನೀಡುವಂತೆ ರಾಜ್ಯಾದ್ಯಂತ ಆಗ್ರಹಿಸಿದ್ದಾರೆ. ಇದನ್ನೂ ಓದಿ: 200 ಯೂನಿಟ್ ವಿದ್ಯುತ್ ಫ್ರೀ – ಷರತ್ತುಗಳು ಅನ್ವಯ
Advertisement
Advertisement
ಎಲ್ಲ ಗ್ಯಾರಂಟಿಗಳಲ್ಲೂ ಉಚಿತ ವಿದ್ಯುತ್ ಗ್ಯಾರಂಟಿಗೆ ವಿದ್ಯುತ್ ಬಳಕೆದಾರರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನುಡಿದಂತೆ 200 ಯುನಿಟ್ ಉಚಿತ ವಿದ್ಯುತ್ ಕೊಡುವಂತೆ ತೀವ್ರ ಒತ್ತಾಯಿಸಿದ್ದಾರೆ. ಈ ವಿಚಾರ ಪರಿಗಣಿಸಿ ಉಚಿತ ವಿದ್ಯುತ್ ಆದೇಶದಲ್ಲಿ ಸರ್ಕಾರ ಬದಲಾವಣೆ ಮಾಡುತ್ತಾ..? ಅಥವಾ ವಾರ್ಷಿಕ ಬಳಕೆ ಮೇಲಿನ ಸರಾಸರಿ ಲೆಕ್ಕಾಚಾರದಲ್ಲೇ ಉಚಿತ ವಿದ್ಯುತ್‍ಗೆ ಮಿತಿ ಹಾಕುತ್ತಾ ಸರ್ಕಾರ ಅನ್ನೋದೇ ಸದ್ಯದ ಕುತೂಹಲ. ಇದನ್ನೂ ಓದಿ: 200 ಯೂನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ – ವಾರ್ಷಿಕ ಸರಾಸರಿ ಅಸ್ತ್ರ ಬಳಸಿ ಬಿಲ್ ವಸೂಲಿ
Advertisement