ಲಕ್ನೋ: ಗ್ಯಾಂಗ್‌ಸ್ಟರ್, ರಾಜಕಾರಣಿ ಅತಿಕ್ ಅಹ್ಮದ್‌ನ (Atiq Ahmed) ಸಹಚರ ಹಾಗೂ ಉಮೇಶ್ ಪಾಲ್ (Umesh Pal) ಹತ್ಯೆ ಪ್ರಕರಣದಲ್ಲಿ ಬದುಕುಳಿದಿರುವ ಆರೋಪಿ ಗುಡ್ಡು ಮುಸ್ಲಿಂನ (Guddu Muslim) ಟವರ್ ಲೊಕೇಶನ್ ಕೊನೆಯದಾಗಿ ಕರ್ನಾಟಕದಲ್ಲಿ (Karnataka) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ (Raju Pal) ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಗುಡ್ಡು ಮುಸ್ಲಿಂ ಕೂಡಾ ಒಬ್ಬನಾಗಿದ್ದ. ಆತ ಉಮೇಶ್ ಪಾಲ್ ಹತ್ಯೆಯಾದ ದಿನ ಫೆಬ್ರವರಿ 24 ರಂದು ತಲೆಮರೆಸಿಕೊಂಡಿದ್ದಾನೆ.
ಉಮೇಶ್ ಪಾಲ್ ಹತ್ಯೆಯಾದ ಒಂದು ದಿನದ ನಂತರ ಫೆಬ್ರವರಿ 25 ರಂದು ಪ್ರಯಾಗರಾಜ್‌ನ ಧೂಮ್‌ಗಂಜ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ 10 ಜನ ಆರೋಪಿಗಳಲ್ಲಿ ಗುಡ್ಡು ಮುಸ್ಲಿಂ ಸೇರಿದ್ದಾನೆ. ಉಮೇಶ್ ಪಾಲ್ ಹತ್ಯೆಯ ವೇಳೆ ಅವರ ನಿವಾಸದ ಹೊರಗಿನಿಂದ ಗುಡ್ಡು ಮುಸ್ಲಿಂ ಸ್ಫೋಟಕ ವಸ್ತುವನ್ನು ಎಸೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ತಲೆಗೆ 1, ದೇಹಕ್ಕೆ 8 ಗುಂಡೇಟು
ಉಮೇಶ್ ಪಾಲ್ ಹತ್ಯೆಯ ಬಳಿಕ 2 ತಿಂಗಳೊಳಗೆ ಅತಿಕ್ ಅಹ್ಮದ್ ಸೇರಿದಂತೆ ಒಟ್ಟು 6 ಆರೋಪಿಗಳನ್ನು ಕೊಲ್ಲಲಾಗಿದೆ. 10 ಆರೋಪಿಗಳ ಪೈಕಿ ಹತ್ಯೆಯಾಗಿರುವ 6 ಜನರೆಂದರೆ, ಅತಿಕ್ ಅಹ್ಮದ್, ಆತನ ಪುತ್ರ ಅಸದ್, ಸಹೋದರ ಅಶ್ರಫ್, ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಹಾಗೂ ಗುಲಾಮ್ ಹಸನ್. ಇದೀಗ ಬದುಕುಳಿದಿರುವ ಆರೋಪಿಗಳಾದ ಗುಡ್ಡು ಮುಸ್ಲಿಂ, ಅರ್ಮಾನ್ ಹಾಗೂ ಸಬೀರ್ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ – ಇಸ್ಲಾಮಿಕ್ ಮತೀಯವಾದ ಬೆಳೆಸಿಕೊಂಡಿದ್ದ ಆರೋಪಿ