ಬೆಂಗಳೂರು: ನಾಳೆ ಮಧ್ಯರಾತ್ರಿಯಿಂದ ದೇಶಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದ ಪೆಟ್ರೋಲ್ ಬಂಕ್ ಮಾಲೀಕರು ಇದೀಗ ಮುಷ್ಕರವನ್ನು ಕೈಬಿಟ್ಟಿದ್ದಾರೆ.
ತೈಲ ಕಂಪನಿಗಳು ಮಾತುಕತೆ ಗೆ ಮುಂದಾದ ಹಿನ್ನಲೆಯಲ್ಲಿ ಬಂಕ್ ಮಾಲೀಕರು ಈ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.
Advertisement
ಮುಷ್ಕರ ಯಾಕೆ?: ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪೆಟ್ರೋಲ್ ಡೀಸೆಲ್ ಡೀಲರ್ಸ್ ಆಸೋಸಿಯೇಷನ್ ಅಕ್ಟೋಬರ್ 13 ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ ಬಂದ್ ನಡೆಸಲು ನಿರ್ಧರಿಸಿತ್ತು.
Advertisement
ಸರ್ಕಾರವು ನಿತ್ಯ ದರದ ಪರಿಷ್ಕರಣೆಯನ್ನು ಕೈ ಬಿಡಲು ಹಾಗೂ ಅಪೂರ್ಣ ಚಂದ್ರ ಕಮೀಟಿ ವರದಿ ಜಾರಿಗೆ ಒತ್ತಾಯಿಸಿ ನಾಳೆ ಮಧ್ಯರಾತ್ರಿಯಿಂದ ಅಕ್ಟೋಬರ್ 13 ರ ದಿನವಿಡಿ ಪೆಟ್ರೋಲ್ ಬಂಕ್ ಬಂದ್ ಮಾಡಲು ಸಂಘ ಮುಂದಾಗಿತ್ತು.
Advertisement
ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತೆಗೆದುಕೊಳ್ಳದಿದ್ದರೆ, ನಾವು ಅಕ್ಟೋಬರ್ 27 ರಿಂದ ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವಾಧಿ ಬಂದ್ ನಡೆಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪೆಟ್ರೋಲ್ ಡೀಸೆಲ್ ಡೀಲರ್ಸ್ ಆಸೋಸಿಯೇಷನ್ ರವೀಂದ್ರನಾಥ್ ಪಬ್ಲಿಕ್ ಟಿವಿಗೆ ತಿಳಿಸಿದ್ದರು.