ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವಾರ ಆಗ್ತಿದೆ. ಮೊದಲ ಸಂಪುಟದಲ್ಲಿಯೇ ಗ್ಯಾರಂಟಿ ಯೋಜನೆ ಜಾರಿ ಮಾಡ್ತೀವಿ ಎಂದಿದ್ದ ಕಾಂಗ್ರೆಸ್ ಸರ್ಕಾರ ಕೇವಲ ತಾತ್ವಿಕ ಒಪ್ಪಿಗೆಯನ್ನಷ್ಟೇ ನೀಡಿತ್ತು. ಮುಂದಿನ ವಾರ ಸಂಪುಟ ಸಭೆ ನಡೆಸಿ ಜಾರಿ ಮಾಡ್ತೀವಿ ಎಂದು ಸಿಎಂ ತಿಳಿಸಿದ್ರು. ಆದರೆ ಸಂಪುಟ (Cabinet) ವಿಸ್ತರಣೆ ಕಸರತ್ತಿನಲ್ಲಿ ತೊಡಗಿರುವ ಸರ್ಕಾರ ಇನ್ನೂ ಸಂಪುಟ ಸಭೆ ಕರೆಯಲು ಮನಸ್ಸು ಮಾಡಿಲ್ಲ. ಆದರೆ ಜನ ಮಾತ್ರ ಕಾಂಗ್ರೆಸ್ ಗ್ಯಾರಂಟಿ (Congress Gurantee) ಕೊಟ್ಟಿದೆ ನಾವು ಕರೆಂಟ್ ಬಿಲ್ ಕಟ್ಟಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ಕಲುಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಾಸ್ಗಿ ಗ್ರಾಮದಲ್ಲಿ ವಿದ್ಯುತ್ ಬಿಲ್ ಕಟ್ಟೋದಕ್ಕೆ ಜನ ತಕರಾರು ಎತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 200 ಯೂನಿಟ್ ಕರೆಂಟ್ ಫ್ರೀ ಎಂದಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದಿದೆ, ನಾವು ಬಿಲ್ (Electricity Bill) ಕಟ್ಟಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೇ ಯಾರು ಕೂಡ ಕರೆಂಟ್ ಬಿಲ್ ಕಟ್ಟದಂತೆ ಗ್ರಾಮದಲ್ಲಿ ಪ್ರಚಾರ ಮಾಡ್ತಿದ್ದಾರೆ.
Advertisement
Advertisement
ಕಾಂಗ್ರೆಸ್ ಗ್ಯಾರಂಟಿ ವಿಪಕ್ಷಗಳಿಗೆ ಅಸ್ತ್ರ ಆಗಿದೆ. ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲ್ಲ ಎಂದು ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಇದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಜನರನ್ನು ಎತ್ತಿ ಕಟ್ಟಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ನಿಮ್ಮ ಮುಖ ನೋಡಿ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ ಅನ್ನೊದು ಕಾಂಗ್ರೆಸ್‍ಗೆ ನೆನಪಿರಬೇಕು ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ. ಭರವಸೆ ಕೊಟ್ಟಾಗ ಕಂಡೀಷನ್ ಹಾಕಿರಲಿಲ್ಲ. ಈಗೇನಾದ್ರೂ ಹಾಕಿದ್ರೆ ನಾವು ಸುಮ್ಮನಿರಲ್ಲ ಎಂದು ಪ್ರತಾಪ್ ಸಿಂಹ ವಾರ್ನಿಂಗ್ ನೀಡಿದ್ದಾರೆ. ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದ್ದಾರೆ.
Advertisement
ಬಿಜೆಪಿ, ಜೆಡಿಎಸ್ (BJP, JDS) ನವರು ಹೊಟ್ಟೆ ಉರಿಯಿಂದ ಹೀಗೆಲ್ಲಾ ಮಾಡ್ತಿದ್ದಾರೆ ಎಂದು ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಇನ್ನು 5 ಎಸ್ಕಾಂಗಳಿಂದ ಸರ್ಕಾರ ವಿವರ ಸಂಗ್ರಹಿಸಿದೆ. ಗೃಹ ವಿದ್ಯುತ್ ಬಳಕೆದಾರರ ಸಂಪೂರ್ಣ ವಿವರ, ಸಂಗ್ರಹಿಸಲಾಗುವ ವೆಚ್ಚದ ವಿವರ ಪಡೆದಿದೆಯಂತೆ. ಇದನ್ನೂ ಓದಿ: The Kerala Story: ದಾವಣಗೆರೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿ ಪ್ರದರ್ಶನ
Advertisement
`ಕೈ’ ಗ್ಯಾರಂಟಿಗೆ ಗೈಡ್‍ಲೈನ್: 5 ಗ್ಯಾರಂಟಿಗಳಿಗೆ ಸರಳ ಷರತ್ತುಗಳನ್ನು ಹಾಕುವ ಸಾಧ್ಯತೆ ಇದೆ. ಬಿಪಿಎಲ್ ಕಾರ್ಡ್‍ಗಳನ್ನ ಪ್ರತಿ ಯೋಜನೆಗೆ ಮಾನದಂಡವಾಗಿ ಪರಿಗಣಿಸುವ ಸಾಧ್ಯತೆಗಳಿವೆ. 10 ಕೆಜಿ ಅಕ್ಕಿ ಯೋಜನೆಗೆ ಯಾವುದೇ ಷರತ್ತು ವಿಧಿಸದಿರುವ ಸಾಧ್ಯತೆ ಹೆಚ್ಚಿದೆ. ಉಚಿತ ಬಸ್ ಪಾಸ್ ವಿಚಾರದಲ್ಲಿ ಬಹುತೇಕ ಮಹಿಳೆಯರಿಗೆ ಯೋಜನೆ ಜಾರಿಯಾಗಲಿದೆ. ಐರಾವತ, ಎಸಿ ಬಸ್‍ಗಳು, ಲಕ್ಷುರಿ ಬಸ್‍ಗಳು ಬಿಟ್ಟು ಉಳಿದ ಬಸ್‍ಗಳಲ್ಲಿ ಉಚಿತ ಪ್ರಯಾಣ ಸಾಧ್ಯತೆ ಇದೆ. ಯುವನಿಧಿ ಯೋಜನೆಗೆ ವಿದ್ಯಾರ್ಥಿಗಳ ಹಲವು ಮಾನದಂಡ ಸಾಧ್ಯತೆಗಳಿವೆ. ಅಂಕಪಟ್ಟಿ, ಬಿಪಿಎಲ್ ಕಾರ್ಡ್, ಪ್ಯಾನ್ ಕಾರ್ಡ್ ಆಧಾರದಲ್ಲಿ ಯೋಜನೆ ಅನುಷ್ಠಾನ ಸಾಧ್ಯತೆ ಇದೆ. 200 ಯೂನಿಟ್ ಫ್ರೀ ವಿದ್ಯುತ್ ಮಧ್ಯಮ ವರ್ಗ, ಬಿಪಿಎಲ್ ಕಾರ್ಡ್‍ದಾರರಿಗೆ ಯೋಜನೆ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಗ್ಯಾರಂಟಿ ಸುಳಿಯಲ್ಲಿ ಕಾಂಗ್ರೆಸ್ ಸರ್ಕಾರ ಸಿಲುಕಿದೆ. ಸರ್ಕಾರ ಬಂದು ಒಂದು ವಾರ ಆಯ್ತು. ವಿಳಂಬ ಯಾಕೆ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ ಗ್ಯಾರಂಟಿ ವಿರುದ್ಧ ಹೋರಾಟಕ್ಕೆ ಮುಂದಾಗಿದೆ.