ದಾವಣಗೆರೆ: ತಾಂತ್ರಿಕ ತೊಂದರೆಯಿಂದ ಗ್ಯಾರಂಟಿ (Congress Guarantee) ಹಣ (Money) ಬಿಡುಗಡೆ ಸಮಸ್ಯೆಯಾಗಿದೆ. ಯುಗಾದಿ ವೇಳೆಗೆ ಎಲ್ಲಾ ಗ್ಯಾರಂಟಿ ಹಣ ಬಿಡುಗಡೆ ಆಗಲಿದೆ ಎಂದು ಶಾಸಕ ಕೆ.ಎಸ್ ಬಸವಂತಪ್ಪ (MLA Basavanthappa) ಹೇಳಿದ್ದಾರೆ.
ದಾವಣಗೆರೆಯ (Davanagere) ಮಾಯಕೊಂಡದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಗ್ಯಾರಂಟಿ ಹಣ ಬಾಕಿ ವಿಚಾರವಾಗಿ ಪ್ರತಿಕ್ರಿಯಿಸಿ, ಯುಗಾದಿ ಬಂತು, ಅಕ್ಕಂದಿರು ಯುಗಾದಿ ಜೋರು ಮಾಡ್ತಾರೆ. ಹಬ್ಬ ಎನ್ನುವಷ್ಟರಲ್ಲಿ ಎಲ್ಲಾ ಹಣ ಬಿಡುಗಡೆ ಆಗುತ್ತದೆ. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆವವರು. ಗ್ಯಾರಂಟಿಗೆ ಮಾತ್ರ ಯಾವುದೇ ಕಾರಣಕ್ಕೂ ಹಣ ಕೊರತೆ ಮಾಡಲ್ಲ ಎಂದು ಎಂದಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ, ನೂತನ ಕಾಯ್ದೆಗೆ ರಾಜ್ಯಪಾಲರ ಮುದ್ರೆ ಬಿದ್ದ ತಕ್ಷಣ ಜಾರಿ ಆಗಲಿದೆ. ಇನ್ನು ಮುಂದೆ ಆದರೂ ಸಾಲ ಕೊಡಲು ಬಂದವರನ್ನು ಊರಿಂದ ಹೊರಗಿಡಿ. ಎಲ್ಲಾ ಸಮಯದಲ್ಲಿ ದುಡಿಮೆ ಒಂದೇ ರೀತಿ ಇರೋದಿಲ್ಲ. ಆಗ ಫೈನಾನ್ಸ್‍ನವರು ಟಾರ್ಚರ್ ಮಾಡ್ತಾರೆ. ಆಗ ಅನಾಹುತಗಳು ಆಗುತ್ತವೆ. ನನ್ನ ಕ್ಷೇತ್ರದಲ್ಲಿ ಯಾರಿಗಾದ್ರೂ ಸಮಸ್ಯೆ ಆದ್ರೆ ಹೇಳಿ ಎಂದಿದ್ದಾರೆ.
ಚನ್ನಗಿರಿಯ ಅಮ್ಜದ್ ಅತ್ಯಾಚಾರ ಪ್ರಕರಣದ ವಿಚಾರವಾಗಿ, ಕಾನೂನಿನಡಿಯಲ್ಲಿ ಎಲ್ಲರಿಗೂ ಶಿಕ್ಷೆ ಆಗುತ್ತದೆ. ಯಾರೂ ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಆತನ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.