ತುಮಕೂರು: ಅಭಿವೃದ್ದಿ ಕೆಲಸಕ್ಕಿಂತ ಗ್ಯಾರಂಟಿ (Congress Guarantee) ಈಡೇರಿಕೆಯೇ ನಮ್ಮ ಮೊದಲ ಆದ್ಯತೆಯಾಗಿತ್ತು. ಈ ಕಾರಣಕ್ಕೆ ಬಜೆಟ್‌ನಲ್ಲಿ (Budget) ಹೊಸ ಅಭಿವೃದ್ಧಿ ಕೆಲಸಕ್ಕೆ ಹಣ ಮೀಸಲಿಟ್ಟಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (Parameshwar) ಹೇಳಿದ್ದಾರೆ.
ತುಮಕೂರು ನಗರದ ಸ್ಮಾರ್ಟ್ ಸಿಟಿ (Smart City) ಕಾಮಗಾರಿ ವೀಕ್ಷಣೆ ಬಳಿಕ ಮಾಧ್ಯಮವರೊಂದಿಗೆ ಅವರು ಮಾತನಾಡಿದದರು. ಈ ವೇಳೆ ತುಮಕೂರಿಗರ ಮೆಟ್ರೋ ರೈಲಿನ (Metro Rail) ಕನಸು ಯಾವಾಗ ನನಸಾಗುತ್ತದೆ ಎಂಬ ಪ್ರಶ್ನೆಗೆ, ಈಗ ನಮ್ಮ ಸರ್ಕಾರದ ಮೊದಲ ಆದ್ಯತೆ 5 ಗ್ಯಾರಂಟಿಗಳನ್ನು ಈಡೇರಿಸುವುದು. ನಮ್ಮ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಈಗ ನಾವು ಮಂಡಿಸಿದ ಬಜೆಟ್ (Budget) ಕೇವಲ ಗ್ಯಾರಂಟಿ ಯೋಜನೆಯ ಹಣದ ಖರ್ಚು ಹೊಂದಿಸಲು ಮಾಡಿರುವಂತಹ ಬದಲಾವಣೆಯ ಬಜೆಟ್ ಆಗಿದೆ ಎಂದರು.
Advertisement
Advertisement
ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೋ ತರುವ ವಿಚಾರವನ್ನು ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಅದನ್ನು ಮುಂದಿನ ವರ್ಷದ ಬಜೆಟ್‌ನಲ್ಲಿ ತಿಳಿಸಲಾಗುವುದು. ಪಿಪಿಪಿ ಮಾದರಿಯಲ್ಲಿ ಜಾರಿ ಮಾಡುವ ಉದ್ದೇಶ ನಮಗಿದೆ. ಅದಕ್ಕೆ ಬೇಕಾಗಿರುವ ಸಮಗ್ರ ಯೋಜನಾ ವರದಿ (DPR) ಅನ್ನು ಸದ್ಯದಲ್ಲೇ ತಯಾರು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
Advertisement
ಹೊಸ ಕಾಮಗಾರಿಗೆ ಈ ವರ್ಷ ಹಣ ನೀಡಲು ಸಾಧ್ಯವಾಗಿಲ್ಲ. ಹಳೆ ಕಾಮಗಾರಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
Advertisement
Web Stories