ಕೊಪ್ಪಳ: ಗ್ಯಾರಂಟಿ ಯೋಜನೆಗೆ (Guarantee Scheme) ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ರೈತರಿಗೆ (Farmers) ಶಾಕ್ ನೀಡಿದೆ. ರೈತರ ಪಂಪ್ ಸೆಟ್‌ಗಳಿಗೆ (Pumpset) ಟ್ರಾನ್ಸ್‌ಫರ್ಮರ್ (Transformer) ಸಹಿತ ಮೂಲ ಸೌಲಭ್ಯ ಒದಗಿಸುವ ಯೋಜನೆ ರದ್ದು ಮಾಡಿದೆ. ಬದಲಾಗಿ ರೈತರು ಸ್ವತಃ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸ್ಪಷ್ಟವಾಗಿ ಆದೇಶಿಸಿದೆ. ಬರದಿಂದ ಕಂಗಾಲಾಗಿರೋ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ಡಿ.ಎಂ.ವಿನೋದ್ ಕುಮಾರ ಕಳೆದ ಅಕ್ಟೋಬರ್ 7 ರಂದು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. 3ರ ಸೆ.22ರ ನಂತರ ನೋಂದಣಿ ಆಗುವ ನೀರಾವರಿ ಪಂಪ್ ಸೆಟ್‌ಗಳಿಗೆ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಮೂಲ ಸೌಲಭ್ಯ ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಸರ್ಕಾರದ ಹೊಸ ಆದೇಶದ ಹಿನ್ನೆಲೆ ರೈತರು ತಮ್ಮ ನೀರಾವರಿ ಪಂಪ್ ಸೆಟ್ ವಿದ್ಯುತ್ ಪಡೆಯಲು ಲಕ್ಷಾಂತರ ರೂ. ಹಣ ಖರ್ಚು ಮಾಡಬೇಕಿದೆ. ಇದರಿಂದ ಸರ್ಕಾರದ ನಡೆ ವ್ಯಾಪಕ ಟೀಕೆಗೆ ಗ್ರಾಸವಾಗಿದೆ.
Advertisement
Advertisement
ಏನಿದು ಯೋಜನೆ?:
ಕಳೆದ 10 ವರ್ಷದಿಂದ ಅಕ್ರಮ – ಸಕ್ರಮ ಯೋಜನೆ ಜಾರಿಯಲ್ಲಿತ್ತು. ಪಂಪ್‌ಸೆಟ್ ಮೂಲಕ ನೀರಾವರಿ ಮಾಡುವ ರೈತರಿಗೆ ಇಂಧನ ಇಲಾಖೆಯ ಈ ಯೋಜನೆ ವರ ಆಗಿತ್ತು. ರೈತರು ಸುಮಾರು 20 ಸಾವಿರ ರೂ. ಶುಲ್ಕ ಪಾವತಿಸಿ ನೀರಾವರಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಪಡೆಯಲು ಪರವಾನಗಿ ಪಡೆದರೆ, ವಿದ್ಯುತ್ ಕಂಪನಿಗಳೇ ಆ ರೈತನ ಹೊಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ ಸರ್ಕಾರದ ಹೊಸ ನೀತಿಯಿಂದ ವಿದ್ಯುತ್ ಜಾಲ ಎಷ್ಟೇ ದೂರವಿದ್ದರೂ ಸ್ವತಃ ಹಣದಲ್ಲೇ ವಿದ್ಯುತ್ ಕಂಬ ಮತ್ತು ತಂತಿ ಹಾಕಿಕೊಳ್ಳಬೇಕಿದೆ. ಜೊತೆಗೆ ಲಕ್ಷಂತರ ರೂ. ಖರ್ಚು ಮಾಡಿ ಟ್ರಾನ್ಸ್‌ಫಾರ್ಮರ್ ಪಡೆಯಬೇಕಿದೆ. ಇದು ರೈತರಿಗೆ ಭಾರೀ ಸಂಕಷ್ಟ ತಂದೊಡ್ಡಿದೆ. ಇದನ್ನೂ ಓದಿ: ಕಾಂಗ್ರೆಸ್‌ನವರು ಬೆಳಗ್ಗೆ ಎದ್ದರೆ ನಾಯಿ-ನರಿಗಳಂತೆ ಕಚ್ಚಾಡ್ತಾರೆ: ಯಡಿಯೂರಪ್ಪ
Advertisement
ರೈತರಿಗೆ ನೋಂದಣಿ ಶುಲ್ಕ 20 ಸಾವಿರ ರೂ. ಶುಲ್ಕ ಪಾವತಿಸುವುದೇ ಕಷ್ಟವಾಗಿತ್ತು. ಸರ್ಕಾರದ ಹೊಸ ನೀತಿಯಿಂದ ರೈತರು ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಪಡೆಯಲು ಲಕ್ಷಂತರ ರೂ.ಖರ್ಚು ಮಾಡಬೇಕಿದೆ.
Advertisement
Web Stories