ಮೈಸೂರು: ಪಕ್ಷ ತೊರೆಯುವ ಸುಳಿವು ಕೊಟ್ಟಿದ್ದ ಮಾಜಿ ಸಚಿವ ಜಿ.ಟಿ. ದೇವೇಗೌಡ (GT Devegowda) ಅಂತಿಮವಾಗಿ ಜೆಡಿಎಸ್‍ನಲ್ಲಿಯೇ (JDS) ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಟಿ ದೇವೇಗೌಡಗೆ ಚಾಮುಂಡೇಶ್ವರಿ ಹಾಗೂ ಅವರ ಪುತ್ರನಿಗೆ ಹುಣಸೂರು ಕ್ಷೇತ್ರದ ಟಿಕೆಟ್ ನೀಡಲು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು (HD DeveGowda) ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಗುರುವಾರ ಜಿಟಿ ದೇವೇಗೌಡರು ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: 1 ಮತ ಅಂತರದ ಗೆಲುವು – ಚುನಾವಣೆ ಮುಗಿದು 1 ವರ್ಷ, 10 ತಿಂಗಳ ಬಳಿಕ ಮರು ಮತ ಎಣಿಕೆ
ಮೈಸೂರಿನಲ್ಲಿ (Mysuru) ನಡೆಯುತ್ತಿರುವ ಜೆಡಿಎಸ್ ಸಭೆಗೆ ಗೈರಾಗಿರುವ ಅರಸಿಕೆರೆ ಶಾಸಕ ಶಿವಲಿಂಗೇಗೌಡ ಜೆಡಿಎಸ್ ತೊರೆಯುವ ಸುಳಿವು ನೀಡಿದ್ದಾರೆ. ಇನ್ನು, ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನು ಮತ್ತೆ ಜೆಡಿಎಸ್‍ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ದಾಸರಹಳ್ಳಿ ಶಾಸಕರನ್ನು ಸೆಳೆಯಲು ಡಿಕೆಶಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ತಕ್ಷಣ ಉಕ್ರೇನ್‌ನಿಂದ ಹೊರಟುಬಿಡಿ – ವಿದ್ಯಾರ್ಥಿಗಳು, ನಾಗರಿಕರಿಗೆ ಭಾರತ ತುರ್ತು ಸಲಹೆ