ನವದೆಹಲಿ: ಇನ್ಮುಂದೆ ಜುಲೈ 18ರಂದು ಜಾರಿಗೆ ಬಂದ ಜಿಎಸ್‌ಟಿ ಹೊಸ ನಿಯಮಗಳ ಅನ್ವಯ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಹಿಡುವಳಿದಾರನು ಆಸ್ತಿಯನ್ನು ಬಾಡಿಗೆ ಪಡೆಯಲು ಶೇ.18 ರಷ್ಟು ತೆರಿಗೆ ಪಾವತಿಸಬೇಕು. ನೀವು ಪಾವತಿಸುವ ಬಾಡಿಗೆಗೆ ಶೇ.18 ರಷ್ಟು ಜಿಎಸ್‌ಟಿ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.
Advertisement
ಈ ಹಿಂದೆ ಬಾಡಿಗೆ ಅಥವಾ ಲೀಸ್‌ನಲ್ಲಿ (ಭೋಗ್ಯಕ್ಕೆ) ನೀಡಲಾದ ಕಚೇರಿಗಳು ಅಥವಾ ವಾಣಿಜ್ಯ ಆಸ್ತಿಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗಿತ್ತು. ಆದರೆ ಕಾರ್ಪೊರೇಟ್ ಹೌಸ್‌ಗಳು, ವ್ಯಕ್ತಿಗಳಿಂದ ಪಡೆಯುವ ಬಾಡಿಗೆ ಅಥವಾ ಗುತ್ತಿಗೆಯ ಆಸ್ತಿಗಳ ಮೇಲೆ ಯಾವುದೇ ಜಿಎಸ್‌ಟಿ ವಿಧಿಸಲಾಗಿರಲಿಲ್ಲ. ಆದರೆ ಹೊಸ ನೀತಿಯ ಅನ್ವಯ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮಕ್ಯಾನಿಸಂ (ಆರ್‌ಸಿಎಂ) ಅಡಿಯಲ್ಲಿ ತೆರಿಗೆ ಪಾವತಿಸಲು ಹೊಣೆಗಾರನಾಗಿರುತ್ತಾನೆ. ಇದನ್ನೂ ಓದಿ: ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ- ಕೇಂದ್ರ
Advertisement
Advertisement
ಯಾರಿಗೆ ಅನ್ವಯ?:
ಹೊಸ ನಿಯಮಗಳ ಅನ್ವಯ ಜಿಎಸ್‌ಟಿ ಅಡಿಯಲ್ಲಿ ಆಸ್ತಿಯನ್ನು ನೋಂದಾಯಿಸಿಕೊಂಡ ಹಾಗೂ ಜಿಎಸ್‌ಟಿ ರಿಟರ್ನ್‌ಗಳನ್ನು ಸಲ್ಲಿಸಲು ಹೊಣೆಯಾಗಿದ್ದಾಗ ಮಾತ್ರ ಅವರಿಗೆ ತೆರಿಗೆ ಪಾವತಿ ಅನ್ವಯಿಸುತ್ತದೆ. ಆದರೆ ಆಸ್ತಿ ಮಾಲೀಕರು ಯಾವುದೇ ಕಾರಣಕ್ಕೂ ಜಿಎಸ್‌ಟಿ ಪಾವತಿಸಲು ಜವಾಬ್ದಾರಿಯಾಗಿರುವುದಿಲ್ಲ ಎಂದು ಹೊಸ ನಿಯಮ ಹೇಳುತ್ತದೆ. ಇದನ್ನೂ ಓದಿ: ಕುಂದಾನಗರಿಯಲ್ಲಿ ಮೂರು ಚಿರತೆ ಪ್ರತ್ಯಕ್ಷ – ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಹರಸಾಹಸ, ಡ್ರೋನ್ ಕ್ಯಾಮೆರಾ ಬಳಕೆ
Advertisement
ಅಲ್ಲದೇ ಸಾಮಾನ್ಯ ವೇತನದಾರರು ವಸತಿ, ಮನೆ, ಫ್ಲಾಟ್ ಅನ್ನು ಬಾಡಿಗೆ ಅಥವಾ ಗುತ್ತಿಗೆ ಪಡೆದುಕೊಂಡರೆ ಅವರು ಜಿಎಸ್‌ಟಿ ಪಾವತಿಸಬೇಕಾಗಿಲ್ಲ. ವ್ಯಾಪಾರ ಅಥವಾ ಬ್ಯುಸಿನೆಸ್ ಮಾಡುವವರು ಮಾತ್ರ ನಿಯಮಿತಕ್ಕಿಂತ ಹೆಚ್ಚಿನ ವಹಿವಾಟು ನಿರ್ವಹಿಸುವಾಗ ಕಡ್ಡಾಯವಾಗಿ ತಮ್ಮ ಮಾಲೀಕರಿಗೆ ಜಿಎಸ್‌ಟಿ ಪಾವತಿಸಲೇಬೇಕಾಗುತ್ತದೆ ಎಂದು ಕ್ಲಿಯರ್‌ಟ್ಯಾಕ್ಸ್ನ ಸಂಸ್ಥಾಪಕ ಹಾಗೂ ಸಿಇಒ ಅರ್ಚಿತ್ ಗುಪ್ತಾ ವಿವರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಜಿಎಸ್‌ಟಿ ಮಂಡಳಿಯು 47ನೇ ಸಭೆಯ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ.