ಕೊಪ್ಪಳ: ಜಿಎಸ್‍ಟಿ ತೆರಿಗೆ ಬಿಸಿ ಕೇವಲ ಶ್ರೀಮಂತರಿಗೆ ಮಾತ್ರವಲ್ಲ ಬದಲಿಗೆ ರೈತರಿಗೆ, ಸಣ್ಣ ವ್ಯಾಪಾರಸ್ಥರಿಗೂ ತಟ್ಟಿದೆ.
ಭತ್ತದ ನಾಡು ಕೊಪ್ಪಳದ ಗಂಗಾವತಿಯಲ್ಲಿ ಬ್ರಾಂಡೆಂಡ್ ಅಕ್ಕಿ ಮಾರಾಟಗಾರರಿಗೆ ಜಿಎಸ್‍ಟಿ ಸರಿಯಾಗಿ ಹೊಡೆತ ಕೊಟ್ಟಿದೆ. ಶೇಕಡಾ 5ರಷ್ಟು ಜಿಎಸ್‍ಟಿ ತೆರಿಗೆಯಿಂದ ಬ್ರಾಂಡೆಡ್ ಅಕ್ಕಿ ಬೆಲೆ ಹೆಚ್ಚಾಗಿದ್ದು, ಗ್ರಾಹಕರು ಅಕ್ಕಿ ಖರೀದಿಗೆ ಮುಂದಾಗುತ್ತಿಲ್ಲ.
Advertisement
Advertisement
ಜಿಎಸ್‍ಟಿಯಿಂದ ರೋಸಿ ಹೋಗಿರುವ ವ್ಯಾಪಾರಿಗಳು ಈಗ ಟ್ರೇಡ್ ಮಾರ್ಕ್ ರದ್ಧತಿಗೆ ಕೋರಿದ್ದು, ಬ್ರಾಂಡ್ ರಹಿತವಾಗಿ ಅಕ್ಕಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಬ್ರಾಂಡೆಡ್ ಅಕ್ಕಿಯ ಮಾರಾಟ ಶೇಕಡಾ 50 ರಷ್ಟು ಕುಂಠಿತಗೊಂಡಿದ್ದರೆ, ಬ್ರಾಂಡ್ ರಹಿತ ಅಕ್ಕಿಯ ವ್ಯಾಪಾರ ಶೇಕಡಾ 90ಕ್ಕೆ ಏರಿಕೆಯಾಗಿದೆ.
Advertisement
ಒಟ್ಟಿನಲ್ಲಿ ಭತ್ತದ ನಾಡಿನ ವ್ಯಾಪಾರಸ್ಥರನ್ನು ಜಿಎಸ್‍ಟಿ ಹೈರಾಣಾಗಿಸಿದೆ. ಗಂಗಾವತಿಯಿಂದಲೇ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಅತೀ ಹೆಚ್ಚು ಭತ್ತ ಹಾಗೂ ಅಕ್ಕಿ ರಫ್ತಾಗುತ್ತೆ. ಆದರೆ ಜಿಎಸ್‍ಟಿ ಜಾರಿಯಿಂದ ಭತ್ತ ಬೆಳೆಗಾರರು ಹಾಗೂ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.