ಮುಂಬೈ: ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಮೇಲೆ ಶೇ. 12ರಷ್ಟು ಜಿಎಸ್‍ಟಿ ತೆರಿಗೆ ಹಾಕಿರೋದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.
ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್‍ಟಿ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಕೋರ್ಟ್ ಇದಕ್ಕೆ ಪ್ರತಿಕ್ರಿಯಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.
Advertisement
ಶೆಟ್ಟಿ ವುಮೆನ್ ವೆಲ್‍ಫೇರ್ ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಯೊಂದು ಸ್ಯಾನಿಟರಿ ಪ್ಯಾಡ್‍ಗಳ ಮೇಲೆ 12% ಜಿಎಸ್‍ಟಿ ತೆರಿಗೆ ಹಾಕಿರೋದನ್ನ ಪ್ರಶ್ನಿಸಿ ಪಿಐಎಲ್ ಸಲ್ಲಿಸಿತ್ತು. ಭಾರತದಲ್ಲಿ ಕೇವಲ 12% ಮಹಿಳೆಯರು ಮಾತ್ರ ಸ್ಯಾನಿಟರಿ ನ್ಯಾಪ್‍ಕಿನ್ ಖರೀದಿಸಬಲ್ಲರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಫೌಂಡೇಷನ್ ಪರವಾಗಿ ವಾದ ಮಂಡಿಸಿದ ವಕೀಲರಾದ ಮಿಹಿರ್ ದೇಸಾಯಿ, ಬಹುತೇಕ 90% ನಷ್ಟು ಮಹಿಳೆಯರು ಆರೋಗ್ಯಕರವಾದ ಈ ಉತ್ಪನ್ನವನ್ನ ಬಳಸಲು ಸಾಧ್ಯವಾಗುತ್ತಿಲ್ಲ ಎಂದರು. ಬಳಿಕ ನ್ಯಾಯಾಧೀಶರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ನೋಟಿಸ್ ನೀಡುವಂತೆ ಸೂಚಿಸಿ ವಿಚಾರಣೆಯನ್ನು 4 ವಾರಗಳವರೆಗೆ ಮುಂದೂಡಿದ್ದಾರೆ.
Advertisement
ಪಿಐಎಲ್ ಅರ್ಜಿಯ ಪ್ರಕಾರ ಸ್ಯಾನಿಟರಿ ಪ್ಯಾಡ್ ಮೇಲಿನ 12% ಜಿಎಸ್‍ಟಿ ತೆರಿಗೆಯಿಂದಾಗಿ ಅದನ್ನು ಖರೀದಿಸಲು ಕಷ್ಟವಾಗುವ ಕಾರಣ ಮಹಿಳೆಯರ ಋತುಸ್ರಾವ ಹಾಗೂ ಸಂತಾನೋತ್ಪತ್ತಿ ಮತ್ತು ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಲಿದೆ. ಸ್ರ್ತೀಯರ ಆರೋಗ್ಯ ವೃದ್ಧಿಯ ನಿಟ್ಟಿನಲ್ಲಿ ಋತುಸ್ರಾವದ ಮೂಲಭೂತ ಆರೋಗ್ಯಕರ ಉತ್ಪನ್ನ ಮಹಿಳೆಯರ ಕೈಗೆಟುವಂತೆ ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
Advertisement
ಇದನ್ನೂ ಓದಿ: ಕಾಂಡೋಮ್ ಟ್ಯಾಕ್ಸ್ ಫ್ರೀ, ಆದ್ರೆ ನ್ಯಾಪ್‍ಕಿನ್‍ಗೆ ಯಾಕೆ ಟ್ಯಾಕ್ಸ್: ಮೋದಿ ವಿರುದ್ಧ ತಿರುಗಿ ಬಿದ್ದ ಮಹಿಳೆಯರು
ಇದನ್ನೂ ಓದಿ: ಸ್ಯಾನಿಟರಿ ನ್ಯಾಪ್‍ಕಿನ್ ಬದಲು ಬಟ್ಟೆಯೇ ಒಳ್ಳೆದು- ಬಿಜೆಪಿ ವಕ್ತಾರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಲಾಸ್