ಬೆಂಗಳೂರು: ಸ್ಯಾಂಡಲ್‍ವುಡ್ ನ ನಾಲ್ವರು ಸ್ಟಾರ್ ಗಳ ಮೇಲಿನ ಐಟಿ ದಾಳಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಕಾರಣವೇ ಎನ್ನುವ ಪ್ರಶ್ನೆ ಎದ್ದಿದೆ.
ಕನ್ನಡದಲ್ಲಿ ವರ್ಷಕ್ಕೆ 300 ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಟಾಲಿವುಡ್, ಮಾಲಿವುಡ್, ಕಾಲಿವುಡ್ ಸಿನಿಮಾ ಉದ್ಯಮಕ್ಕೆ ಹೋಲಿಸಿದರೆ ಸ್ಯಾಂಡಲ್‍ವುಡ್‍ನಿಂದ ತೆರಿಗೆ ಸಂಗ್ರಹ ಕಡಿಮೆ. ಇದರ ಜೊತೆಯಲ್ಲೇ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾಗಳು ತೆರೆಕಾಣುತ್ತಿವೆ. ಇಷ್ಟೆಲ್ಲಾ ಆದರೂ ತೆರಿಗೆ ಸಂಗ್ರಹ ಕಡಿಮೆ ಯಾಕೆ ಆಗುತ್ತಿದೆ ಎನ್ನುವ ಅನುಮಾನ ಆದಾಯ ತೆರಿಗೆ ಇಲಾಖೆಗೆ ಬಂದಿದೆ. ಈ ಅನುಮಾನ ಪರಿಹರಿಸಿಕೊಳ್ಳಲು ಜಿಎಸ್‍ಟಿಯ ಗುಪ್ತಚರ ವಿಭಾಗ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿಕೊಂಡಿತ್ತು. ಇದನ್ನೂ ಓದಿ: ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!
Advertisement
Advertisement
ಚಿತ್ರದ ಮೇಕಿಂಗ್ ಹಾಗೂ ನಟರ ಸಂಭಾವನೆ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿರಲಿಲ್ಲ. ಕೊನೆಗೆ ಮಲ್ಟಿಪ್ಲೆಕ್ಸ್ ಗಳಿಂದಲೇ ಅಧಿಕಾರಿಗಳು ಚಿತ್ರದ ಕಲೆಕ್ಷನ್ ಬಗ್ಗೆ ಮಾಹಿತಿ ಪಡೆದಿದ್ದರು. ಸಿನಿಮಾ ಎಷ್ಟು ದಿನ ಓಡಿದೆ, ಎಷ್ಟು ಆದಾಯ ಬಂದಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು. ಆದರೆ ನಿರ್ಮಾಪಕರು ಮತ್ತು ವಿತರಕರು ನೀಡಿದ ಡೇಟಾಕ್ಕೂ ಇದಕ್ಕೂ ತಾಳೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲದೇ ನಟರಿಗೆ ಮಾರುಕಟ್ಟೆಯಲ್ಲಿ ಇರುವ ಸಂಭಾವನೆ ಹಾಗೂ ನಟರು ಹೇಳಿರುವ ಸಂಭಾವನೆಗೂ ತಾಳೆ ಆಗದ ವಿಚಾರ ಪ್ರಾಥಮಿಕ ಪರಿಶೀಲನೆಯಲ್ಲಿ ಐಟಿ ಗಮನಕ್ಕೆ ಬಂದಿದೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು
Advertisement
ಕನ್ನಡದಲ್ಲಿ ಕೆಲ ನಟರಿಗೆ ಮುಂಗಡ ಸಂಭಾವನೆಯಾಗಿ ಒಂದು ವಿಲ್ಲಾ ಮತ್ತು ಫ್ಲಾಟ್‍ಗಳನ್ನು ನೀಡಲಾಗುತ್ತಿದೆ ಎನ್ನುವ ವಿಚಾರ 2017ರಲ್ಲಿ ನಡೆದಿದ್ದ ಐಟಿ ದಾಳಿ ವೇಳೆ ಬೆಳಕಿಗೆ ಬಂದಿತ್ತು. ಈ ಅನುಮಾನಗಳು ಮೂಡಿದ ಹಿನ್ನೆಲೆಯಲ್ಲಿ ಐಟಿ ಗುರುವಾರ ಸ್ಯಾಂಡಲ್‍ವುಡ್ ಸ್ಟಾರ್ ಗಳ ಮೇಲೆ ದಾಳಿ ನಡೆಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv