ಮುಂಬೈ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಜಾಜ್ ಆಟೊ ಕಂಪೆನಿ ತನ್ನ ಮೋಟಾರ್ ಸೈಕಲ್ಸ್ ಗಳ ಬೆಲೆಯನ್ನು ಕಡಿಮ ಮಾಡಿದೆ.
ಎಲ್ಲ ಮೋಟರ್ ಸೈಕಲ್ ಗಳ ಬೆಲೆಯನ್ನು 4,500ರವರೆಗೆ ತಗ್ಗಿಸಲಾಗಿದೆ ಎಂದು ಬಜಾಜ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜಿಎಸ್‍ಟಿಯಲ್ಲಿನ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ತಕ್ಷಣದಿಂದ ಜಾರಿಗೆ ಬರುವಂತೆ ದರವನ್ನು ಕಡಿತಗೊಳಿಸಲಾಗಿದೆ ಎಂದು ಅದು ತಿಳಿಸಿದೆ.
Advertisement
ಆದರೆ ಬೈಕ್‍ಗಳ ಮಾದರಿ ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ದರ ಕಡಿತದ ಲಾಭ ಬೇರೆಬೇರೆಯಾಗಿರುತ್ತದೆ. ಗ್ರಾಹಕರು ಬಜಾಜ್ ಅಟೋ ಡೀಲರ್‍ಗಳಿಗೆ ತೆರಳಿ ವಿವರವನ್ನು ಪಡೆಯಬಹುದು. ಅಷ್ಟೇ ಅಲ್ಲದೇ ಜೂನ್ 14 ಮತ್ತು ಜೂನ್ 30ರ ನಡುವಿನ ಬುಕ್ಕಿಂಗ್ ಅನುಕೂಲವನ್ನು ಪಡೆಯಬಹುದು ಎಂದು ಬಜಾಜ್ ಹೇಳಿದೆ.
Advertisement
35,183 ಬೆಲೆಯ 100 ಸಿಸಿಗಳಿಂದ ಹಿಡಿದು ಗರಿಷ್ಠ 1.53 ಲಕ್ಷ ರೂ. ಬೆಲೆಯ ಡೊಮಿನರ್ 400 ಬೈಕ್‍ಗಳನ್ನು ಬಜಾಜ್ ಮಾರಾಟ ಮಾಡುತ್ತಿದೆ.
Advertisement
ಈಗಾಗಲೇ ಆಟೊಮೊಬೈಲ್ ಕ್ಷೇತ್ರದ ಕಂಪೆನಿಗಳಾದ ಫೋರ್ಡ್ ಇಂಡಿಯಾ, ಆಡಿ, ಬಿಎಂಡಬ್ಲ್ಯೂ ಮತ್ತು ಮರ್ಸಿಡಿಸ್ ಬೆಂಝ್ ಕಂಪೆನಿಗಳು ತಮ್ಮ ವಾಹನಗಳ ಮೇಲೆ 10 ಸಾವಿರ ರೂ. ದರವನ್ನು ಕಡಿತಗೊಳಿಸಿದೆ.
Advertisement
ಜಿಎಸ್‍ಟಿಯಲ್ಲಿ ಆಟೊಮೊಬೈಲ್ ಉತ್ಪನ್ನಗಳ ಮೇಲೆ ಶೇ.28 ರಷ್ಟು ತೆರಿಗೆಯನ್ನು ಹಾಕಲಾಗುತ್ತದೆ. ಐಶಾರಾಮಿ ಕಾರುಗಳ ಮೇಲೆ ಶೇ.15 ರಷ್ಟು ಹೆಚ್ಚುವರಿ ಸೆಸ್ ವಿಧಿಸಿದರೆ, ಮೊಟಾರ್ ಸೈಕಲ್ 350 ಸಿಸಿಗಿಂತಲೂ ಹೆಚ್ಚಿನದ್ದಾಗಿದ್ದರೆ ಹೆಚ್ಚುವರಿಯಾಗಿ ಶೇ.3 ರಷ್ಟು ಸೆಸ್ ವಿಧಿಸಲಾಗಿದೆ.
ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?