ಬಿಜೆಪಿ ಕಾರ್ಯಕರ್ತರ ಪಕ್ಷ, ವಂಶಾಡಳಿತ ಪಕ್ಷವಲ್ಲ: ಪ್ರಧಾನಿ ಮೋದಿ

Public TV
1 Min Read
modhi g2

ಗಾಂಧಿನಗರ: ಕಾಂಗ್ರೆಸ್ ಪಕ್ಷವು ವಂಶಾಡಳಿತ ಪಕ್ಷವಾಗಿದ್ದು, ನಮ್ಮ ಪಕ್ಷವು ಕಾರ್ಯಕರ್ತರ ಪಕ್ಷವಾಗಿದೆ. ಉತ್ತರ ಪ್ರದೇಶದ ಚುನಾವಣೆಯ ಗೆಲುವು ಪಕ್ಷದ ಗೆಲುವಾಗಿದ್ದು ಅಮಿತ್ ಶಾ ಅಥವಾ ಮೋದಿಯ ಗೆಲುವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್ ರಾಜ್ಯದ ಚುನಾವಣೆಗೆ ಪೂರ್ವ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಗಾಂಧಿನಗರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ರ್ಯಲಿಯನ್ನು ಉದ್ದೇಶಿ ಪ್ರಧಾನಿ ಮೋದಿ ಮಾತನಾಡಿದರು.

ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧಿ ಪಕ್ಷಗಳಿಗೆ ನಡುಕ ಉಂಟಾಗಿದ್ದು, ಸುಳ್ಳು ಹೇಳಿಕೆಗಳನ್ನು ನೀಡುತ್ತಿವೆ. ದೇಶದಲ್ಲಿ ಜಾರಿಗೆ ತಂದಿರುವ ಜಿಎಸ್‍ಟಿ ನಿರ್ಧಾರ ಕೇವಲ ಪ್ರಧಾನಿ ಮಂತ್ರಿ ಮೋದಿ ಒಬ್ಬರ ನಿರ್ಧಾರವಲ್ಲ. ಇದರಲ್ಲಿ ಪ್ರಮುಖ 30 ಪಕ್ಷಗಳು ತಮ್ಮ ಒಮ್ಮತ ಅಭಿಪ್ರಾಯವನ್ನು ಸೂಚಿಸಿವೆ. ಇದರಲ್ಲಿ ಕಾಂಗ್ರೆಸ್ ಪಕ್ಷವು ಸೇರಿದೆ. ಆದರೆ ಇಂದು ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು‌ ದೂರಿದರು.

ಜಿಎಸ್‍ಟಿ ಜಾರಿಗೆ ತಂದಿರುವುದರಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಅಲ್ಲದೇ ಪ್ರಮುಖವಾಗಿ ಜಿಡಿಪಿ ಬೆಳವಣಿಗೆ ದರ 5.7%,ಕ್ಕೆ ಇಳಿದಿದೆ. ಉತ್ತಮ ಆರ್ಥಿಕ ಪ್ರಗತಿಗೆ ಬೇಕಾದ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದ ಸಂದರ್ಭದಲ್ಲಿ ಈ ರೀತಿ ಆಗುವುದು ಸಾಮಾನ್ಯ. ದೊಡ್ಡ ಪ್ರಮಾಣದ ನೋವಿಗಿಂತ ಸಣ್ಣ ಪ್ರಮಾಣದ ನೋವು ಉತ್ತಮ ಅಲ್ಲವೇ ಎಂದು ಪ್ರಶ್ನಿಸಿದರು.

ಜಿಎಸ್‍ಟಿ ಜಾರಿಗೆ ತಂದ ನಂತರ ನಮ್ಮ ಸರ್ಕಾರವು ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಹಲವು ಸುಧಾರಣೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

 

 

modi g

modi g 4

modi g5

modi 4

Share This Article
Leave a Comment

Leave a Reply

Your email address will not be published. Required fields are marked *