ನವದೆಹಲಿ: ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯ ಸಂಪೂರ್ಣ ಪರಿಷ್ಕರಣೆಗೆ ಅನುಮೋದನೆ ನೀಡಿದ ಬೆನ್ನಲ್ಲೇ, ಗುರುವಾರ ಭಾರತೀಯ ಷೇರು ಮಾರುಕಟ್ಟೆ (Indian Stock Market ) ಉತ್ತಮ ಆರಂಭವನ್ನು ಕಂಡಿದೆ.
ಸೆನ್ಸೆಕ್ಸ್ ಬೆಳಗ್ಗೆ 9:20 ರ ಸುಮಾರಿಗೆ 576.63 ಪಾಯಿಂಟ್‌ಗಳ ಏರಿಕೆ ಕಂಡು 81,144.34 ಕ್ಕೆ ವಹಿವಾಟು ನಡೆಸಿತು. ನಿಫ್ಟಿ 156.65 ಪಾಯಿಂಟ್‌ಗಳ ಏರಿಕೆ ಕಂಡು, 24,871.70 ಕ್ಕೆ ವಹಿವಾಟು ನಡೆಸಿತು. ಇದನ್ನೂ ಓದಿ: ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್ – ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ
ಬುಧವಾರ ಸಂಜೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2017 ರಲ್ಲಿ ಪ್ರಾರಂಭಿಸಲಾದ ಜಿಎಸ್ಟಿ ವ್ಯವಸ್ಥೆಯ ಸಂಪೂರ್ಣ ಪರಿಷ್ಕರಣೆಯನ್ನು ಘೋಷಿಸಿದರು. ಇದು ಗೃಹೋಪಯೋಗಿ ವಸ್ತುಗಳು, ಔಷಧಿಗಳು, ಸಣ್ಣ ಕಾರುಗಳು ಮತ್ತು ಉಪಕರಣಗಳ ಮೇಲಿನ ಸುಂಕವನ್ನು ಕಡಿತಗೊಳಿಸಿತು. ಟೂತ್‌ಪೇಸ್ಟ್ ಮತ್ತು ವಿಮೆಯಿಂದ ಹಿಡಿದು, ಟ್ರ್ಯಾಕ್ಟರ್ ಮತ್ತು ಸಿಮೆಂಟ್‌ವರೆಗೆ ಎಲ್ಲದರ ಮೇಲೆ ಪರಿಣಾಮ ಬೀರಿತು.
ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್‌ಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ಎರಡರ ಜೊತೆಗೆ ಐಷರಾಮಿ ವಸ್ತುಗಳಿಗೆ 40% ಜಿಎಸ್‌ಟಿಯ ಸ್ಲ್ಯಾಬ್ ಅನ್ವಯವಾಗಲಿದೆ. ಆದಾಗ್ಯೂ, ದುಬಾರಿ ಕಾರುಗಳು, ತಂಬಾಕು ಮತ್ತು ಸಿಗರೇಟ್‌ಗಳಂತಹ ಆಯ್ದ ಕೆಲವು ವಸ್ತುಗಳಿಗೆ ವಿಶೇಷ ಶೇ.40 ಸ್ಲ್ಯಾಬ್ ಅನ್ನು ಪ್ರಸ್ತಾಪಿಸಲಾಗಿದೆ. ಇದನೂ ಓದಿ: ದೀಪಾವಳಿಗೆ ದೇಶವಾಸಿಗಳಿಗೆ ಗಿಫ್ಟ್ – ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ?
ಪಾನ್ ಮಸಾಲ, ಗುಟ್ಕಾ, ಸಿಗರೇಟ್, ಜಗಿಯುವ ತಂಬಾಕು ಉತ್ಪನ್ನಗಳಾದ ಜರ್ದಾ, ಸಂಸ್ಕರಿಸದ ತಂಬಾಕು ಮತ್ತು ಬೀಡಿ ಹೊರತುಪಡಿಸಿ ಉಳಿದೆಲ್ಲ ಉತ್ಪನ್ನಗಳ ಮೇಲಿನ ಹೊಸ ದರಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.