– ಎಂಟು ವರ್ಷಗಳ ಬಳಿಕ GST ವ್ಯವಸ್ಥೆಯಲ್ಲಿ ಪರಿಷ್ಕರಣೆ
– ನಾಲ್ಕು ಸ್ಲ್ಯಾಬ್‌ಗಳ ಬದಲು ಎರಡು ಸ್ಲ್ಯಾಬ್‌ಗಳಿಗೆ ಇಳಿಕೆ
ನವದೆಹಲಿ: ದೇಶದ ತೆರಿಗೆ ವ್ಯವಸ್ಥೆಯಲ್ಲಿ ಅತಿದೊಡ್ಡ ಬದಲಾವಣೆಗೆ ಕೇಂದ್ರ ಮುಂದಾಗಿದೆ. 8 ವರ್ಷಗಳ ಬಳಿಕ ಜಿಎಸ್‌ಟಿ ವ್ಯವಸ್ಥೆಯಲ್ಲಿ ಪರಿಷ್ಕರಣೆಯಾಗಲಿದೆ. ಜಿಎಸ್‌ಟಿ ಮಂಡಳಿಯು ಇಂದಿನಿಂದ ಎರಡು ದಿನಗಳ ಸಭೆಯನ್ನು ಆರಂಭಿಸಲಿದೆ.
ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳನ್ನು ಅಗ್ಗವಾಗಿಸುವ ಮತ್ತು ಆಯ್ದ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ಸುಂಕಗಳನ್ನು ಪರಿಚಯಿಸುವ ಮೂಲಕ ವ್ಯಾಪಕ ತೆರಿಗೆ ಪರಿಷ್ಕರಣೆಯ ವಿಚಾರ ಈಗಾಗಲೇ ಚರ್ಚೆಯ ಮೇಜಿನ ಮೇಲಿದೆ. ಸಭೆಯಲ್ಲಿ ಸ್ಲ್ಯಾಬ್ ಬದಲಾವಣೆ ಬಗ್ಗೆ ಬಹುಮತದಿಂದ ನಿರ್ಧಾರ ಕೈಗೊಳ್ಳಲಾಗುವುದು. ಕೌನ್ಸಿಲ್‌ನ ಒಪ್ಪಿಗೆಯ ನಂತರ ಹೊಸ ದರಗಳ ಕುರಿತಾದ ಅಧಿಸೂಚನೆಗಳು 5-7 ದಿನಗಳಲ್ಲಿ ಜಾರಿಗೊಳ್ಳಬಹುದು. ಹೊಸ ನಿಯಮಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ನಾಲ್ಕು ಸ್ಲ್ಯಾಬ್‌ಗಳ ಬದಲು ಎರಡು ಸ್ಲ್ಯಾಬ್‌ಗಳಿಗೆ ಇಳಿಕೆಗೆ ಕೇಂದ್ರ ಮುಂದಾಗಿದೆ. 5%, 12%, 18%, 28% ತೆರಿಗೆ ಪದ್ದತಿಗೆ ಪೂರ್ಣ ವಿರಾಮ ಹಾಕಿ, 5% ಮತ್ತು 18% ಸ್ಲ್ಯಾಬ್‌ಗಳನ್ನು ಉಳಿಸಿಕೊಳ್ಳಲು ಈಗಾಗಲೇ ಕೇಂದ್ರ ನಿರ್ಧರಿಸಿದೆ. 12% ವ್ಯಾಪ್ತಿಯಲ್ಲಿರುವ ಎಲ್ಲ ವಸ್ತುಗಳು 5% ಗೆ ಮತ್ತು 28% ನಲ್ಲಿರುವ ಎಲ್ಲ ವಸ್ತುಗಳ ತೆರಿಗೆಯನ್ನು 18% ಇಳಿಸಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಈಗಾಗಲೇ ಸುಳಿವು ಕೂಡ ಸಿಕ್ಕಿದೆ.
ಇಂದಿನಿಂದ ಎರಡು ದಿನ ದೆಹಲಿಯಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೇತೃತ್ವ ವಹಿಸಲಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 31 ಸದಸ್ಯರು ಭಾಗಿಯಾಗಲಿದ್ದಾರೆ. ಒಟ್ಟು 33 ಸದಸ್ಯರ ಸಮ್ಮುಖದಲ್ಲಿ ಜಿಎಸ್‌ಟಿ ವ್ಯವಸ್ಥೆಯ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯಲಿದೆ. ಸಾಧಕ-ಬಾಧಕಗಳ ಬಳಿಕ ಬಹುಮತದ ಮೂಲಕ ನಿರ್ಧಾರ ಕೈಗೊಳ್ಳಲಾಗುವುದು.
ಜಿಎಸ್‌ಟಿ ಪರಿಷ್ಕರಣೆಗೆ ಈಗಾಗಲೇ ಬಹುತೇಕ ರಾಜ್ಯಗಳು ಸಮ್ಮತಿ ಸೂಚಿಸಿವೆ.
ಪ್ರಸುತ್ತ ವ್ಯವಸ್ಥೆಯಲ್ಲಿ ಯಾವ ಸ್ಲ್ಯಾಬ್‌ಗಳಲ್ಲಿ ಯಾವ ವಸ್ತುಗಳಿವೆ?
0% GST ಯಾವುದೇ ತೆರಿಗೆ ಇಲ್ಲ
ವಸ್ತುಗಳು
* ತಾಜಾ ಹಾಲು, ತಾಜಾ ಹಣ್ಣುಗಳು ಮತ್ತು ತರಕಾರಿಗಳು (ಬ್ರ್ಯಾಂಡ್ ಇಲ್ಲದವು)
* ಅಕ್ಕಿ, ಗೋಧಿ, ರಾಗಿ ಮತ್ತು ಇತರ ಧಾನ್ಯಗಳು (ಬ್ರ್ಯಾಂಡ್ ಇಲ್ಲದವು)
* ಮಾಂಸ, ಮೀನು (ಪ್ಯಾಕ್ ಮಾಡದವು)
* ನೈಸರ್ಗಿಕ ಜೇನು (ಬ್ರ್ಯಾಂಡ್ ಇಲ್ಲದವು)
* ಸಿಂಧೂರ, ಕಂಕಣ, ಬಳೆಗಳು
* ಸ್ಯಾನಿಟರಿ ನ್ಯಾಪ್‌ಕಿನ್‌ಗಳು
* ಪುಸ್ತಕಗಳು, ಸ್ಲೇಟ್‌ಗಳು, ಪೆನ್ಸಿಲ್‌ಗಳು (ಶೈಕ್ಷಣಿಕ)
ಸೇವೆಗಳು
* ಆರೋಗ್ಯ ಸೇವೆಗಳು (ಆಸ್ಪತ್ರೆಗಳು, ಚಿಕಿತ್ಸೆ)
* ಶಿಕ್ಷಣ ಸೇವೆಗಳು (ಶಾಲೆ, ಕಾಲೇಜುಗಳು)
* ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ತೆರೆದ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (BSBD) ಖಾತೆಗಳ ಸೇವೆಗಳು
5% GST ( ಈ ಸ್ಲ್ಯಾಬ್‌ನಲ್ಲಿ ದೈನಂದಿನ ಅಗತ್ಯ ವಸ್ತುಗಳು ಮತ್ತು ಕೆಲವು ಸೇವೆಗಳು ಸೇರಿವೆ)
ವಸ್ತುಗಳು
* ಸಕ್ಕರೆ, ಚಹಾ, ಕಾಫಿ (ರೋಸ್ಟೆಡ್ ಕಾಫಿ ಬೀನ್ಸ್)
* ಖಾದ್ಯ ತೈಲ (ಎಡಿಬಲ್ ಆಯಿಲ್)
* ಔಷಧಿಗಳು (ಜೀವರಕ್ಷಕ ಔಷಧಿಗಳು ಸೇರಿದಂತೆ)
* ದೇಶೀ ಸಿಹಿತಿಂಡಿಗಳು (ಬಾಂದ್‌ವಾಲೆ, ಲಾಡು)
* ತೂಗು 500 ರೂ.ಗಿಂತ ಕಡಿಮೆ ಇರುವ ಶೂಗಳು
* ಎಲ್‌ಪಿಜಿ ಸಿಲಿಂಡರ್ (ಗೃಹಬಳಕೆ)
* ಪ್ಯಾಕ್ ಮಾಡಿದ ಆಹಾರ ವಸ್ತುಗಳು (ಬ್ರ್ಯಾಂಡ್ ಇರುವವು, ಉದಾ: ಪ್ಯಾಕ್ ಮಾಡಿದ ಹಾಲು)
* ಕೃಷಿ ಉಪಕರಣಗಳು
* ರೋಗನಿರ್ಣಯ ಕಿಟ್‌ಗಳು
-ಸೇವೆಗಳು
* ರೈಲು ಪ್ರಯಾಣ (ಸಾಮಾನ್ಯ ದರ್ಜೆ, ಸ್ಲೀಪರ್)
* ಆರ್ಥಿಕ ದರ್ಜೆಯ ವಿಮಾನ ಟಿಕೆಟ್‌ಗಳು
* ಟೂರ್ ಆಪರೇಟರ್ ಸೇವೆಗಳು
* ಕೆಲವು ಜಾಬ್ ವರ್ಕ್ ಸೇವೆಗಳು
12% GST (ಈ ಸ್ಲ್ಯಾಬ್‌ನಲ್ಲಿ ಸಾಮಾನ್ಯವಾಗಿ ಬಳಸುವ, ಆದರೆ ಅಗತ್ಯವಲ್ಲದ ವಸ್ತುಗಳು ಮತ್ತು ಸೇವೆಗಳು ಸೇರಿವೆ)
ವಸ್ತುಗಳು
* ಬೆಣ್ಣೆ, ತುಪ್ಪ, ಚೀಸ್
* ಮೊಬೈಲ್ ಫೋನ್‌ಗಳು
* ಫ್ರೂಟ್ ಜ್ಯೂಸ್, ಒಣಗಿದ ಹಣ್ಣುಗಳು
* ಆಗರ್‌ಬತ್ತಿ
* ಛತ್ರಿಗಳು
* ರೋಸ್ಟೆಡ್ ಚಿಕೋರಿ
* ಇಟ್ಟಿಗೆಗಳು
* 500 ರೂ.ಗಿಂತ ಹೆಚ್ಚಿರುವ ಶೂಗಳು
ಸೇವೆಗಳು
* ರೈಲು ಸರಕು ಸಾಗಾಟ
* ವಿಮಾನ ಪ್ರಯಾಣ (ಆರ್ಥಿಕ ದರ್ಜೆಯಲ್ಲದವು)
* ರಿಯಲ್ ಎಸ್ಟೇಟ್‌ನಲ್ಲಿ ವಾಣಿಜ್ಯ ಮತ್ತು ವಸತಿ ಲಾವಾದೇವಿಗಳು
* ಹೋಟೆಲ್ ಕೊಠಡಿಗಳು (ದಿನಕ್ಕೆ 1,000 ರೂ. ರಿಂದ 7,500 ರೂ. ವರೆಗೆ)
18% GST (ಈ ಸ್ಲ್ಯಾಬ್‌ನಲ್ಲಿ ಹೆಚ್ಚಿನ ಗ್ರಾಹಕ ಉತ್ಪನ್ನಗಳು ಮತ್ತು ಸೇವೆಗಳು ಸೇರಿವೆ)
ವಸ್ತುಗಳು
* ಕೂದಲ ಎಣ್ಣೆ, ಟೂತ್‌ಪೇಸ್ಟ್, ಸಾಬೂನು
* ಐಸ್ ಕ್ರೀಮ್
* ಕಾಸ್ಮೆಟಿಕ್ಸ್ (ಪರ್ಫ್ಯೂಮ್, ಟಾಯ್‌ಲೆಟ್‌ರೀಸ್)
* ಮೊಬೈಲ್ ಫೋನ್‌ಗಳು
* ಕಂಪ್ಯೂಟರ್ ಮಾನಿಟರ್‌ಗಳು, ಪ್ರಿಂಟರ್‌ಗಳು
* ಪಾಸ್ಟಾ, ಕಾರ್ನ್‌ಫ್ಲೇಕ್ಸ್, ಬಿಸ್ಕತ್ತು
* ಟಿವಿ (ನಿರ್ದಿಷ್ಟ ಗಾತ್ರದವರೆಗೆ)
ಸೇವೆಗಳು
* ಟೆಲಿಕಾಂ ಸೇವೆಗಳು
* ರೆಸ್ಟೋರೆಂಟ್ ಸೇವೆಗಳು (ಆಲ್ಕೊಹಾಲ್ ಪರವಾನಗಿ ಇರುವವು)
* ಈವೆಂಟ್ ಟಿಕೆಟ್‌ಗಳು
* ಬಾಡಿಗೆ ಸೇವೆಗಳು
* ಸಲಹಾ, ವೃತ್ತಿಪರ, ಕೊರಿಯರ್ ಮತ್ತು ಐಟಿ ಸೇವೆಗಳು
* ಲೋನ್‌ಗಳ ಮೇಲಿನ ಪ್ರೊಸೆಸಿಂಗ್ ಶುಲ್ಕಗಳು (ಪ್ರಿನ್ಸಿಪಾಲ್ ಮತ್ತು ಬಡ್ಡಿಯ ಮೇಲೆ ಜಿಎಸ್‌ಟಿ ಇಲ್ಲ)
28% GST (ಈ ಸ್ಲ್ಯಾಬ್‌ನಲ್ಲಿ ಐಷಾರಾಮಿ ವಸ್ತುಗಳು ಮತ್ತು ಸೇವೆಗಳು ಸೇರಿವೆ. ಕೆಲವು ವಸ್ತುಗಳಿಗೆ ಹೆಚ್ಚುವರಿ ಸೆಸ್ ಕೂಡ ವಿಧಿಸಲಾಗುತ್ತದೆ)
ವಸ್ತುಗಳು
* ಐಷಾರಾಮಿ ಕಾರುಗಳು, ಹೈ-ಎಂಡ್ ಮೋಟರ್‌ಸೈಕಲ್‌ಗಳು
* ತಂಪು ಪಾನೀಯಗಳು (ಕೋಕ್, ಪೆಪ್ಸಿ)
* ತಂಬಾಕು ಉತ್ಪನ್ನಗಳು, ಸಿಗರೇಟ್‌ಗಳು
* ಎಸಿ, ರೆಫ್ರಿಜರೇಟರ್‌ಗಳು, ಡಿಶ್‌ವಾಶಿಂಗ್ ಮೆಷಿನ್‌ಗಳು
* ಸಿಮೆಂಟ್
* ಕಾಫಿ ಎಕ್ಸ್‌ಟ್ರಾಕ್ಟ್‌ಗಳು, ಎಸೆನ್ಸ್‌ಗಳು
-ಸೇವೆಗಳು
* ಗೇಮಿಂಗ್, ಜೂಜಾಟ, ಕ್ಯಾಸಿನೊಗಳು
* ಐಷಾರಾಮಿ ಹೋಟೆಲ್ ವಸತಿಗಳು (ದಿನಕ್ಕೆ 7,500 ರೂ.ಗಿಂತ ಹೆಚ್ಚು)
* ಅಮ್ಯೂಸ್‌ಮೆಂಟ್ ಪಾರ್ಕ್‌ಗಳು
ವಿಶೇಷ ದರಗಳು
* 0.25%: ಕಟ್ ಮಾಡಿದ ಮತ್ತು ಸೆಮಿ-ಪಾಲಿಶ್ ಮಾಡಿದ ಕಲ್ಲುಗಳು (ಉದಾ: ಡೈಮಂಡ್, ರತ್ನಗಳು)
* 3%**: ಚಿನ್ನ, ಬೆಳ್ಳಿ, ಆಭರಣಗಳು (ಜಾಬ್ ವರ್ಕ್‌ಗೆ 5% ಜಿಎಸ್‌ಟಿ)
* ಸೆಸ್ : ತಂಬಾಕು, ಏರಿಯೇಟೆಡ್ ವಾಟರ್, ಪೆಟ್ರೋಲ್, ಮೋಟಾರ್ ವಾಹನಗಳ ಮೇಲೆ 1% ರಿಂದ 204% ವರೆಗೆ ಸೆಸ್ ವಿಧಿಸಲಾಗುತ್ತದೆ.
ಯಾವ ವಸ್ತುಗಳ ಬೆಲೆಯಲ್ಲಿ ನಿರೀಕ್ಷೆ ಮಾಡಬಹುದು?
1. 12% ರಿಂದ 5% ಕ್ಕೆ ಸ್ಥಳಾಂತರಗೊಳ್ಳುವ ವಸ್ತುಗಳು
– ಆಹಾರ ಉತ್ಪನ್ನಗಳು: ಪ್ಯಾಕ್ ಮಾಡಿದ ಒಣಗಿದ ಹಣ್ಣುಗಳು, ಫ್ರೂಟ್ ಜ್ಯೂಸ್, ದೇಶೀ ಸಿಹಿತಿಂಡಿಗಳು
– ಗೃಹೋಪಯೋಗಿ ವಸ್ತುಗಳು: ಛತ್ರಿಗಳು, ಕೃಷಿ ಉಪಕರಣಗಳು, ಕೆಲವು ರೀತಿಯ ಶೂಗಳು (500 ರೂ.ಗಿಂತ ಹೆಚ್ಚಿನ ಬೆಲೆಯವು)
– ಇತರೆ: ಆಗರ್‌ಬತ್ತಿ, ಕೆಲವು ಇಟ್ಟಿಗೆಗಳು, ಕೆಲವು ರೀತಿಯ ಬಟ್ಟೆಗಳು (ಗಾರ್ಮೆಂಟ್ಸ್)
2. 28% ರಿಂದ 18% ಕ್ಕೆ ಸ್ಥಳಾಂತರಗೊಳ್ಳುವ ವಸ್ತುಗಳು
– ಗೃಹೋಪಯೋಗಿ ಉಪಕರಣಗಳು;
* ಏರ್ ಕಂಡಿಷನರ್‌ಗಳು (ಎಸಿ)
* ರೆಫ್ರಿಜರೇಟರ್‌ಗಳು
* ಟಿವಿಗಳು (32 ಇಂಚಿಗಿಂತ ದೊಡ್ಡವು)
* ಡಿಶ್‌ವಾಶಿಂಗ್ ಮೆಷಿನ್‌ಗಳು
– ದೈನಂದಿನ ಬಳಕೆಯ ವಸ್ತುಗಳು:
* ಟೂತ್‌ಪೇಸ್ಟ್, ಸಾಬೂನು, ಶಾಂಪೂ
* ಕಾಸ್ಮೆಟಿಕ್ಸ್ (ಕೆಲವು ರೀತಿಯವು)
* ಏರ್ ಆಯಿಲ್
ಇತರೆ
* ಸಿಮೆಂಟ್
* ಪೇಂಟ್ ಮತ್ತು ವಾರ್ನಿಷ್
* ಸೆರಾಮಿಕ್ ಟೈಲ್ಸ್
* ಸ್ಯಾನಿಟರಿ ವೇರ್
* ಕೆಲವು ಎಲೆಕ್ಟ್ರಾನಿಕ್ಸ್ (ಕಂಪ್ಯೂಟರ್ ಮಾನಿಟರ್‌ಗಳು, ಪ್ರಿಂಟರ್‌ಗಳು)
3. ವಿಶೇಷ ವಿನಾಯಿತಿಗಳು:
* ಆರೋಗ್ಯ ಮತ್ತು ಜೀವ ವಿಮೆ : ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಪ್ರಸ್ತಾವನೆ ಇದೆ. ಇದರಿಂದ ವಿಮಾ ಪ್ರೀಮಿಯಂಗಳ ಬೆಲೆ ಗಣನೀಯವಾಗಿ ಕಡಿಮೆಯಾಗಬಹುದು, ವಿಶೇಷವಾಗಿ ಮಧ್ಯಮ ವರ್ಗದವರಿಗೆ ಇದು ದೊಡ್ಡ ಉಳಿತಾಯವನ್ನು ಒದಗಿಸುತ್ತದೆ
* ಕೃಷಿ, ಜವಳಿ, ಫಲವತ್ತತೆ, ನವೀಕರಿಸಬಹುದಾದ ಶಕ್ತಿ, ಆರೋಗ್ಯ, ಕರಕುಶಲ ವಸ್ತುಗಳು, ಸಾರಿಗೆ : ಈ ಕ್ಷೇತ್ರಗಳಲ್ಲಿನ ಉತ್ಪನ್ನಗಳು 5% ಸ್ಲ್ಯಾಬ್‌ಗೆ ಸ್ಥಳಾಂತರಗೊಂಗಲಿವೆ, ಇದರಿಂದ ರೈತರು, ಕಿರು-ಸಣ್ಣ ಉದ್ದಿಮೆಗಳು (MSMEs) ಮತ್ತು ಸಾಮಾನ್ಯ ಗ್ರಾಹಕರಿಗೆ ಪ್ರಯೋಜನವಾಗಲಿದೆ.
* ನಿರ್ಮಾಣ ವಸ್ತುಗಳು: ಸಿಮೆಂಟ್ (28% ರಿಂದ 18%), ಸ್ಟೀಲ್ (18% ರಿಂದ 5% ಕ್ಕೆ ಸಂಭಾವ್ಯ ಸ್ಥಳಾಂತರ), ಪೇಂಟ್, ಸೆರಾಮಿಕ್ ಟೈಲ್ಸ್, ಮತ್ತು ಸ್ಯಾನಿಟರಿ ವೇರ್‌ಗಳ ಮೇಲಿನ ಜಿಎಸ್‌ಟಿ ಕಡಿಮೆಯಾದರೆ, ನಿರ್ಮಾಣ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ಅಂಡರ್-ಕನ್‌ಸ್ಟ್ರಕ್ಷನ್ ವಸತಿ ಯೋಜನೆಗಳ ಬೆಲೆ ಕಡಿಮೆಯಾಗಬಹುದು, ಇದು ಗೃಹ ಖರೀದಿದಾರರಿಗೆ ಪ್ರಯೋಜನಕಾರಿಯಾಗಿದೆ.
ಈ ಕ್ರಮದಿಂದ ಮಧ್ಯಮ ವರ್ಗಕ್ಕೆ ತೆರಿಗೆ ಭಾರ ಇಳಿಕೆ, ಶ್ರೀಮಂತರಿಗೆ ಹೊರೆಯಾಗಲಿದೆ. ಐಷರಾಮಿ ವಸ್ತುಗಳ ಮೇಲಿನ ತೆರಿಗೆ ಏರಿಕೆಗೆ ತಯಾರಿ ನಡೆದಿದ್ದು, 5%, 18% ಜೊತೆಗೆ 40% ಹೊಸ ಸ್ಲ್ಯಾಬ್ ಸೇರ್ಪಡೆ ಆಗಲಿದೆ. ತಂಬಾಕು, ಪಾನ್ ಮಸಾಲ, ಏರಿಯೇಟೆಡ್ ಪಾನೀಯಗಳು, ಐಷಾರಾಮಿ ಕಾರುಗಳು, ಮತ್ತು ಆನ್‌ಲೈನ್ ಗೇಮಿಂಗ್‌ನಂತಹ ಉತ್ಪನ್ನಗಳು ಮೇಲೆ ತೆರಿಗೆ ಏರಿಕೆ ಆಗಬಹುದು. 28% ರಿಂದ 40% ಏರಿಕೆಗೆ ಸರ್ಕಾರದ ಚಿಂತನೆ ನಡೆಸಿದೆ. ಕೆಲವು ಐಷಾರಾಮಿ ವಾಹನಗಳು 40% ಸ್ಲ್ಯಾಬ್‌ಗೆ ಸೇರಬಹುದು.