ಬೆಂಗಳೂರು: ಆಗಸ್ಟ್ 5ರಂದು ಬೆಳಗ್ಗೆ 11 ಗಂಟೆಗೆ ಗೃಹಜ್ಯೋತಿ (Gruhajyothi) ಯೋಜನೆ ಲಾಂಚ್ ಕಾರ್ಯಕ್ರಮ ನಿಗದಿಯಾಗಿದ್ದು, ಈ ಕಾರ್ಯಕ್ರಮ ಕಲಬುರಗಿಯಲ್ಲಿ (Kalaburagi) ನಡೆಯಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ (K.J.George) ಹೇಳಿದ್ದಾರೆ.
ಗೃಹಜ್ಯೋತಿ ಲಾಂಚ್ ಸಂಬಂಧ ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆ ಬಗ್ಗೆ ಮಾಧ್ಯಮ ಹೆಚ್ಚಾಗಿಯೇ ತಿಳಿಸಿದೆ. ನಾವು ವಿರೋಧ ಪಕ್ಷದಲ್ಲಿ ಇದ್ದಾಗಲೇ ಈ ಗ್ಯಾರಂಟಿಗಳನ್ನು ಪ್ಲಾನ್ ಮಾಡಿದ್ದು, ಸಿದ್ದರಾಮಯ್ಯ, ಡಿಕೆಶಿಯವರ ಸಹಿಯಿರುವ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡಿದ್ದೆವು. ಅವಶ್ಯಕ ವಸ್ತುಗಳ ಬೆಲೆ ಜನರನ್ನು ಕಾಡಿದ್ದರಿಂದ ಜನರಿಗೆ ಈ ಗ್ಯಾರಂಟಿಗಳನ್ನು ನೀಡಬೇಕು ಎಂದು ಯೋಚನೆ ಮಾಡಿದ್ದೆವು ಎಂದರು. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – SITಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ
ಸಿಎಂ ಸಿದ್ದರಾಮಯ್ಯ (Siddaramaiah) 12 ತಿಂಗಳ ಸರಾಸರಿ ತೆಗೆದುಕೊಳ್ಳಲು ಹೇಳಿದ್ದಾರೆ. ಜುಲೈ ತಿಂಗಳ ಗೃಹಜ್ಯೋತಿ ಬಿಲ್ ಕೊಡಲು ಶುರು ಮಾಡಿದ್ದೇವೆ. 1.43 ಕೋಟಿ ಗೃಹಜ್ಯೋತಿ ನೋಂದಣಿಯಾಗಿದೆ. ಆಗಸ್ಟ್ 5ರಂದು ಲಾಂಚ್ ಕಾರ್ಯಕ್ರಮ ನಡೆಯುತ್ತೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಗೃಹಜ್ಯೋತಿ ಲಾಂಚ್ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಪ್ರವಾಸ
ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಒಳಗೊಂಡಂತೆ ಒಟ್ಟು 1.43 ಕೋಟಿ ಮನೆಗಳಿಗೆ ಮೊದಲ ತಿಂಗಳ ಗೃಹಜ್ಯೋತಿ ನೀಡಲಾಗಿದೆ. 200 ಯೂನಿಟ್ ದಾಟಿದರೆ ಸಂಪೂರ್ಣ ಬಿಲ್ ಕಟ್ಟಬೇಕು. ಸರಾಸರಿ ಬಿಲ್‌ಗಿಂತ 10%ಗೂ ಹೆಚ್ಚು ಬಳಕೆಯಾದರೂ ಪೂರ್ತಿ ಬಿಲ್ ಕಟ್ಟಬೇಕು. ಎಷ್ಟು ಬಿಲ್ ಇದ್ದರೂ ಇಂಧನ ಇಲಾಖೆಗೆ ಸಬ್ಸಿಡಿ ಮೂಲಕ ಸರ್ಕಾರ ಹಣ ಪಾವತಿ ಮಾಡುತ್ತದೆ. 200 ಯೂನಿಟ್ ಒಳಗೆ ಸರಾಸರಿ ವಾರ್ಷಿಕ ಬಳಕೆ ಮತ್ತು 10% ವಿದ್ಯುತ್ ಹೆಚ್ಚುವರಿ ಬಳಕೆ ಉಚಿತ. ಅದಕ್ಕಿಂತ ಹೆಚ್ಚಾದರೆ ಬಿಲ್ ಕಟ್ಟಬೇಕು ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್‌ಐಆರ್
ಗೃಹ ಜ್ಯೋತಿ ಯೋಜನೆಯ ಪ್ರಮುಖ ವಿವರಗಳು:
* ರಾಜ್ಯದ ಎಲ್ಲಾ ಗೃಹಬಳಕೆದಾರರಿಗೆ 200 ಯೂನಿಟ್‍ಗಳವರೆಗಿನ ವಿದ್ಯುತ್ ಬಳಕೆ ಉಚಿತ.
* 2023ರ ಆಗಸ್ಟ್‍ನಲ್ಲಿ ಗೃಹ ಜ್ಯೋತಿ ಯೋಜನೆಯಿಂದ 1.42 ಕೋಟಿ ಕುಟುಂಬಗಳಿಗೆ ಲಾಭ.
* ಈ ಯೋಜನೆಯು ವಾಣಿಜ್ಯ ಗ್ರಾಹಕರಿಗೆ ಅನ್ವಯಿಸುವುದಿಲ್ಲ.
* 2022- 2023ರ ಹಣಕಾಸು ವರ್ಷದ ಸರಾಸರಿ ವಿದ್ಯುತ್ ಬಳಕೆಯನ್ನು ಗಣನೆಗೆ ತೆಗೆದುಕೊಂಡು ಪ್ರತಿ ಗ್ರಾಹಕರ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ 10 ಪ್ರತಿಶತವನ್ನು ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲಾಗುತ್ತದೆ.
* ಗರಿಷ್ಠ ಉಚಿತ ವಿದ್ಯುತ್ ಬಳಕೆಯ ಮಿತಿಯನ್ನು 200 ಯೂನಿಟ್‍ಗಳಿಗೆ ನಿರ್ಬಂಧಿಸಲಾಗಿದೆ.
* ಪ್ರತಿ ಬಳಕೆದಾರರಿಗೆ ನಿಗದಿಪಡಿಸಲಾದ ತಿಂಗಳ ಸರಾಸರಿ ಯೂನಿಟ್‍ಗೆ ಅನುಗುಣವಾಗಿ ವಿದ್ಯುತ್ ಬಳಕೆ ಮಾಡುವ ಗ್ರಾಹಕರ ಬಿಲ್ ಮೊತ್ತ ಶೂನ್ಯವಾಗಿರುತ್ತದೆ.
* ನಿಗದಿತ ಸರಾಸರಿ ಬಳಕೆಯ ಮಿತಿ ಮೀರಿದರೂ 200 ಯೂನಿಟ್ ಒಳಗಿದ್ದರೆ ಹೆಚ್ಚುವರಿ ಯೂನಿಟ್‍ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ.
* ಗ್ರಾಹಕರ ಮಾಸಿಕ ಸರಾಸರಿ ಬಳಕೆಯು 200 ಯೂನಿಟ್‍ಗಳನ್ನು ಮೀರಿದರೆ ಬಿಲ್‍ನ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
* ಯೋಜನೆಯ ಲಾಭ ಪಡೆಯಲು ಬಯಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು.
* ಗ್ರಾಹಕರು ತಮ್ಮ ಆಧಾರ್ ಸಂಖ್ಯೆಗಳನ್ನು ಬಿಲ್‍ನಲ್ಲಿ ನಮೂದಿಸಲಾದ ಗ್ರಾಹಕ ಐಡಿ ಅಥವಾ ಖಾತೆ ಐಡಿಯೊಂದಿಗೆ ಲಿಂಕ್ ಮಾಡಬೇಕು.
* ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಫಲಾನುಭವಿಗಳನ್ನು ಹೊಸದಾಗಿ ಪ್ರಾರಂಭಿಸಲಾದ ಗೃಹ ಜ್ಯೋತಿ ಯೋಜನೆಗೆ ಜೋಡಣೆ ಮಾಡಲಾಗುತ್ತದೆ.
* ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರವು ಗೃಹ ಜ್ಯೋತಿ ಸಬ್ಸಿಡಿ ಮೊತ್ತ ಮತ್ತು FPPAC ಮೊತ್ತವನ್ನು ಎಲ್ಲಾ ESCOM ಗಳಿಗೆ ಮುಂಚಿತವಾಗಿ ಪಾವತಿಸುತ್ತದೆ. ಇಂಧನ ಇಲಾಖೆಗೆ ಇದರಿಂದ ಆರ್ಥಿಕ ಹೊರೆ ಬೀಳದು.
Web Stories