ಕಾರವಾರ: ಸರ್ಕಾರಿ ಕಚೇರಿಯ ಬಳಿ ನೆಡಲಾಗಿದ್ದ ಗಿಡಗಳನ್ನು ಕಡಿದು ಹಾಕಿದ್ದಕ್ಕಾಗಿ ಕಚೇರಿಯ ಸುತ್ತಮುತ್ತ ಸಸಿಗಳನ್ನು ನೆಟ್ಟು ಬೆಳೆಸುವ ಶಿಕ್ಷೆ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಕಳೆದ ಎರಡು ವರ್ಷಗಳ ಹಿಂದೆ ವನಮಹೋತ್ಸವದ ನಿಮಿತ್ತ ವಾರ್ತಾ ಇಲಾಖೆಯ ಸುತ್ತಮುತ್ತ ಅರಣ್ಯ ಇಲಾಖೆ ಸಹಯೋಗದಲ್ಲಿ ಪತ್ರಕರ್ತರು ಹಾಗೂ ವಾರ್ತಾ ಇಲಾಖೆಯ ಅಧಿಕಾರಿಗಳು ಗಿಡಗಳನ್ನು ನೆಟ್ಟಿದ್ದರು. ಆದರೆ ವಾರ್ತಾ ಇಲಾಖೆಯ ವಾಹನ ಚಾಲಕನಾಗಿರುವ ಗೋವಿಂದ ಎಂಬುವವರು ಕಚೇರಿಯ ಬಳಿ ತಮ್ಮ ವಸತಿ ನಿಲಯಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬೆಳೆದು ನಿಂತಿದ್ದ ಗಿಡಗಳನ್ನು ಕಡದಿದ್ದಲ್ಲದೇ ಮೂರಕ್ಕೂ ಹೆಚ್ಚು ಗಿಡಗಳನ್ನು ಬುಡಸಮೇತ ಕಿತ್ತುಹಾಕಿದ್ದರು.
Advertisement
Advertisement
ಈ ಕುರಿತು ಅರಣ್ಯ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿದ ವಲಯ ಅರಣ್ಯಾಧಿಕಾರಿಗಳು ಈ ಬಗ್ಗೆ ದೂರು ದಾಖಲಿಸಿಕೊಂಡು ವಾರ್ತಾ ಇಲಾಖೆಯ ಚಾಲಕನಿಗೆ ಕೇಳಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
Advertisement
ಕಚೇರಿಯ ಸುತ್ತಮುತ್ತ 20 ಗಿಡಗಳನ್ನು ನಡೆಸಲಾಗಿದ್ದು ಅವುಗಳು ಬೆಳೆದು ದೊಡ್ಡದಾಗುವವರೆಗೆ ಪೋಷಣೆ ಮಾಡುವಂತೆ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಗಿಡಗಳನ್ನುನಾಶಮಾಡುವವರಿಗೆ ಅರಣ್ಯ ಇಲಾಖೆ ತಕ್ಕ ಪಾಠ ಕಲಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv