ನವದೆಹಲಿ: ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿ ಅಶೋಕ ಚಕ್ರ (Ashoka Chakra) ಈ ಬಾರಿ ಭಾರತೀಯ ವಾಯುಪಡೆಯ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಅವರಿಗೆ ಸಿಗಲಿದೆ. ಗಣರಾಜ್ಯೋತ್ಸವ ಮುನ್ನ ದಿನ ಕೇಂದ್ರ ಸರ್ಕಾರ ಪ್ರಶಸ್ತಿಯನ್ನು ಪ್ರಕಟಿಸಿಸಿ ಗೌರವಿಸಿದೆ.
ಆಕ್ಸಿಯಮ್ -4 ಕಾರ್ಯಾಚರಣೆಯ ಪೈಲಟ್ ಆಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಮೊದಲ ಭಾರತೀಯ ಇಸ್ರೋ (ISRO) ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಧರ್ಮೇಂದ್ರಗೆ ಪದ್ಮವಿಭೂಷಣ; ಮಮ್ಮುಟ್ಟಿ, ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ ಪ್ರಶಸ್ತಿ

ಜೂನ್ 2025 ರಲ್ಲಿ ಅವರು ಐಸಿಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಮತ್ತು ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದನ್ನೂ ಓದಿ: ಶತಾವಧಾನಿ ಗಣೇಶ್ಗೆ ಪದ್ಮ ಭೂಷಣ, ರಾಜ್ಯದ 7 ಮಂದಿಗೆ ಪದ್ಮಶ್ರೀ
ಬಾಹ್ಯಾಕಾಶದಲ್ಲಿ 18 ದಿನಗಳ ಅವಧಿಯಲ್ಲಿ ಶುಕ್ಲಾ ಭಾರತಕ್ಕೆ ಸಂಬಂಧಿಸಿದ ಏಳು ನಿರ್ದಿಷ್ಟ ಪ್ರಯೋಗಗಳನ್ನು ನಡೆಸಿದ್ದರು. ಈ ಪರೀಕ್ಷೆಗಳು ಕೇವಲ ಪ್ರದರ್ಶನಕ್ಕಾಗಿ ಮಾತ್ರವಾಗಿರಲಿಲ್ಲ; ಗಗನಯಾನ ಕಾರ್ಯಾಚರಣೆಯಲ್ಲಿರುವ ಭವಿಷ್ಯದ ಗಗನಯಾತ್ರಿಗಳು ಭೂಮಿಯ ಕೆಳ ಕಕ್ಷೆಯ ಕಠಿಣ ಪರಿಸರದಲ್ಲಿ ಬದುಕುಳಿಯಲು ಸಹಾಯ ಮಾಡುವ ಅಗತ್ಯ ಡೇಟಾವನ್ನು ಅವು ಒದಗಿಸಿದ್ದವು.

