ಭುವನೇಶ್ವರ: ಸಾಮಾನ್ಯವಾಗಿ ಮದುವೆ ಕಾರ್ಯಕ್ರಮವು ಡ್ಯಾನ್ಸ್, ಮ್ಯೂಸಿಕ್ ಹಾಗೂ ಮೋಜಿನಿಂದ ಕೂಡಿರುತ್ತದೆ. ಆದರೆ ಒಡಿಶಾ (Odisha) ದ ನವದಂಪತಿ ತಮ್ಮ ಮದುವೆ ಕಾರ್ಯಕ್ರಮವನ್ನು ಬಹಳ ವಿಭಿನ್ನ ಹಾಗೂ ವಿಶೇಷವಾಗಿ ಮಾಡಿದ್ದಾರೆ.
ಹೌದು. ವರನೊಬ್ಬ ಜೆಸಿಬಿ (JCB) ಯ ಮೂಲಕ ಮೆರವಣಿಗೆ ಹೊರಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಘಟನೆ ಒಡಿಶಾದ ಬೌದ್ ಜಿಲ್ಲೆಯ ಚತ್ರರಂಗ ಗ್ರಾಮದಲ್ಲಿ ನಡೆದಿದೆ.
Advertisement
Advertisement
ವರನನ್ನು ಗಂಗಾಧರ್ ಬೆಹೆರಾ ಎಂದು ಗುರುತಿಸಲಾಗಿದೆ. ವರನ ಮದುವೆಯ ಮೆರವಣಿಗೆಯು ನಯಾಗಢ ಜಿಲ್ಲೆಯ ಖಂದಪದ ಬ್ಲಾಕ್‍ನ ಕಿಯಾಜರಾ ಗ್ರಾಮಕ್ಕೆ ತೆರಳಬೇಕಿತ್ತು. ಆದರೆ ವರ ಯಾವುದೇ ಐಷಾರಾಮಿ ವಾಹನಗಳನ್ನು ಬಳಸದೇ ಜೆಸಿಬಿ ಮೂಲಕ ವಧು ಮನೆ ತಲುಪಿದ್ದಾನೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಅಚ್ಚರಿಪಟ್ಟಿದ್ದಾರೆ.
Advertisement
ಮೂಲಗಳ ಪ್ರಕಾರ, ವರ ಗಂಗಾಧರ್ ಸಹೋದರ ಜೆಸಿಬಿ ಆಪರೇಟರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗಂಗಾಧರ್ ಜೆಸಿಬಿಯಲ್ಲಿ ಮದುವೆ ಮೆರವಣಿಗೆ ಹೊರಡಲು ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ
Advertisement
ಒಟ್ಟಿನಲ್ಲಿ ಗಂಗಾಧರ್ ಸಹೋದರನನ್ನು ಗೌರವಿಸುವ ಸಲುವಾಗಿ ಜನರು ಶ್ಲಾಘಿಸುವುದರೊಂದಿಗೆ ವಿಶಿಷ್ಟ ಮದುವೆಯ ಮೆರವಣಿಗೆಯು ಈಗ ಇಡೀ ಪಟ್ಟಣದಲ್ಲಿ ಚರ್ಚೆಯಾಗಿದೆ.