ಜಮ್ಮು & ಕಾಶ್ಮೀರದ ಪ್ರವಾಸೋದ್ಯಮ ಕಚೇರಿ ಬಳಿ ಗ್ರೆನೇಡ್ ದಾಳಿ – 10 ಮಂದಿಗೆ ಗಾಯ

Public TV
1 Min Read
Grenade attack near Jammu and Kashmir Tourism office in Srinagar 10 injured

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪ್ರವಾಸೋದ್ಯಮ ಕಚೇರಿ (Tourism office) ಬಳಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಗರದ (Srinagar) ಪ್ರವಾಸಿ ಸ್ವಾಗತ ಕೇಂದ್ರದ ಸಮೀಪ ಇರುವ ಚಿಗಟ ಮಾರುಕಟ್ಟೆಯಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆದಿದೆ. ಸ್ಫೋಟದ ನಂತರ ವೈದ್ಯಕೀಯ ತಂಡಗಳೊಂದಿಗೆ ಭದ್ರತಾ ಪಡೆಗಳು (Indian Army) ತಕ್ಷಣವೇ ಸ್ಥಳಕ್ಕೆ ತೆರಳಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಇತ್ತೀಚೆಗೆ ಭದ್ರತಾ ಪಡೆಗಳು ಉಗ್ರ ಸಂಘಟನೆ ಎಲ್‌ಇಟಿಯ ಪಾಕಿಸ್ತಾನಿ ಕಮಾಂಡರ್‌ನ್ನು ಹೊಡೆದುರುಳಿಸಿದ್ದರು. ಇದಾದ ಒಂದು ದಿನದ ನಂತರ ಭಾರೀ ಭದ್ರತೆಯ ಪ್ರವಾಸಿ ಸ್ವಾಗತ ಕೇಂದ್ರದ (ಟಿಆರ್‌ಸಿ) ಬಳಿ ಈ ದಾಳಿ ನಡೆದಿದೆ. ಸ್ಫೋಟದಿಂದಾಗಿ ವ್ಯಾಪಾರಸ್ಥರು ಹಾಗೂ ಜನರು ಭಯಭೀತರಾಗಿದ್ದಾರೆ.

ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article