CricketLatestLeading NewsMain PostSports

ಎರಡನೇ ಬಾರಿ ICC ಅಧ್ಯಕ್ಷರಾದ ಗ್ರೆಗ್ ಬಾರ್ಕ್ಲೇ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ನ್ಯೂಜಿಲೆಂಡ್‍ನ ಗ್ರೆಗ್ ಬಾರ್ಕ್ಲೇ (Greg Barclay) ಆಯ್ಕೆಯಾಗಿದ್ದಾರೆ.

ಐಸಿಸಿ ಬೋರ್ಡ್ ಸದಸ್ಯರ ಒಮ್ಮತದ ಆಯ್ಕೆಯಾಗಿ ಎರಡನೇ ಬಾರಿ ಗ್ರೆಗ್ ಬಾರ್ಕ್ಲೇ ಆಯ್ಕೆಯಾದರು. ಈ ಮೂಲಕ 2020ರ ಬಳಿಕ 2022ರಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ 2 ವರ್ಷಗಳ ಅಧಿಕಾರವಧಿಯನ್ನು ಹಿಡಿದಿದ್ದಾರೆ. 2024ರ ವರೆಗೆ ಗ್ರೆಗ್ ಬಾರ್ಕ್ಲೇ ಅಧ್ಯಕ್ಷರಾಗಿರಲಿದ್ದಾರೆ. ಇದನ್ನೂ ಓದಿ: ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

2015ರ ಐಸಿಸಿ ಏಕದಿನ ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್‍ನ ಡೈರೆಕ್ಷರ್ ಆಗಿ ಕೆಲಸ ಮಾಡಿದ್ದ ಗ್ರೆಗ್ ಬಾರ್ಕ್ಲೇ, ನಾರ್ಥನ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್‍ನ ಸದಸ್ಯರು ಆಗಿದ್ದರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ನ ಹಲವು ಕಂಪನಿಗಳಲ್ಲಿ ಬೋರ್ಡ್‍ನ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಅಪಾರ ಅನುಭವ ಇವರಿಗಿದೆ. ಇದೀಗ ಎರಡನೇ ಬಾರಿ ಐಸಿಸಿಯ ಅಧ್ಯಕ್ಷರಾಗಿ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್ ಸೋಲಿನ ಬಳಿಕ ದ್ರಾವಿಡ್‌ಗೆ ವಿಶ್ರಾಂತಿ – ಲಕ್ಷ್ಮಣ್‌ ಕೋಚ್

ಈ ಮೊದಲು ಬಿಸಿಸಿಐ (BCCI) ಅಧ್ಯಕ್ಷ ಅವಧಿ ಮುಕ್ತಾಯಗೊಂಡ ಬಳಿಕ ಎರಡನೇ ಬಾರಿ ಅಧಿಕಾರವಧಿಯಲ್ಲಿ ಮುನ್ನಡೆಯಲು ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಒಪ್ಪಿರಲಿಲ್ಲ. ಆ ಬಳಿಕ ಗಂಗೂಲಿ ಐಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಬಿಸಿಸಿಐ ಬೆಂಬಲ ನೀಡದ ಕಾರಣ ಐಸಿಸಿ ಅಧ್ಯಕ್ಷರ ಸ್ಪರ್ಧಾ ಕಣದಿಂದ ಗಂಗೂಲಿ ಹಿಂದೆ ಸರಿದಿದ್ದರು. ಗಂಗೂಲಿ ಸ್ಪರ್ಧಿಸಿರಲಿಲ್ಲ.

Live Tv

Leave a Reply

Your email address will not be published. Required fields are marked *

Back to top button