ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದೇವಭಾಗ್ ಕಡಲತೀರದಲ್ಲಿ ಗ್ರೀನ್ ಸೀ ಕಡಲಾಮೆ ಕಳೆಬರಹ ಪತ್ತೆಯಾಗಿದೆ.
Advertisement
ಕರಾವಳಿಯಲ್ಲಿ ಹೆಚ್ಚಿನ ಮಳೆಯಾದ್ದರಿಂದ ಕಡಲ ಅಬ್ಬರಕ್ಕೆ ಆಮೆಯ ಕಳೆಬರಹ ತೇಲಿಬಂದಿದೆ. ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಪ್ರಶಾಂತ್ ಮಾರ್ಗದರ್ಶನದಲ್ಲಿ ರೀಫ್ ವಾಚರ್ ಕುಂದಾಪುರದ ಡಾ.ಶಾಂತನು ಕಲಂಬಿ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಆಮೆಯು ಸಣ್ಣ ಕರುಳಿನ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಇದನ್ನೂ ಓದಿ: ಮೂಢನಂಬಿಕೆಯಿಂದ ಅಪ್ರಾಪ್ತ ಮಗಳನ್ನು ಹೊಡೆದು ಸಾಯಿಸಿದ ಪೋಷಕರು
Advertisement
Advertisement
ಸ್ಥಳದಲ್ಲಿ ಕಡಲ ಜೀವಿಶಾಸ್ತ್ರ ವಿಭಾಗದ ಪ್ರಾಂಶುಪಾಲ ಜೆ.ಎಲ್. ರಾಥೋಡ್, ಕೋಸ್ಟಲ್ ಮರೈನ್‍ನ ಉಪ ವಲಯ ಅರಣ್ಯಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ, ಪ್ರಕಾಶ್ ಯರಗಟ್ಟಿ ಉಪಸ್ಥಿತರಿದ್ದರು. ಇದನ್ನೂ ಓದಿ: ಒಟ್ಟಿಗೆ ಓದಿದ್ರೂ ಅತ್ಯಾಚಾರ ಮಾಡಲು ಸಹಾಯ- ಕೃತ್ಯದ ವೀಡಿಯೋ ಅತ್ತೆಗೆ ಕಳಿಸಿದ ಕಿರಾತಕರು