ಲಾಕ್‍ಡೌನ್ ಪರಿಣಾಮದಿಂದಾಗಿ ಸರಿಯಾಗಿ ತರಕಾರಿ ಸಿಗುತ್ತಿಲ್ಲ. ಹೊರಗೆ ಹೋಗಿ ತರೋಣ ಎಂದರೆ ಅಂಗಡಿಗಳು ನಿಗದಿತ ಸಮಯದಲ್ಲಿ ಮಾತ್ರ ತೆರೆದಿರುತ್ತೆ. ಹೀಗಾಗಿ ಮನೆಯಲ್ಲಿಯೇ ಇದ್ದು ಹೊಸ ರೀತಿಯ ಅಡುಗೆ ಮಾಡಿ. ತರಕಾರಿಗಳಿಲ್ಲದೇ ಇರುವಾಗ ಗ್ರೀನ್ ಚಿಲ್ಲಿ ಕರ್ರಿ ಮಾಡಿ. ನಿಮಗಾಗಿ ಗ್ರೀನ್ ಚಿಲ್ಲಿ ಕರ್ರಿ ಮಾಡುವ ವಿಧಾನ ಇಲ್ಲಿದೆ….
ಬೇಕಾಗುವ ಸಾಮಗ್ರಿಗಳ
1. ಹಸಿ ಮೆಣಸಿನಕಾಯಿ – 10
2. ಸಾಸಿವೆ – 1/2 ಟೀ ಸ್ಪೂನ್
3. ಜೀರಿಗೆ – 1/2 ಟೀ ಸ್ಪೂನ್
4. ಮೆಂತೆ – 1/2 ಟೀ ಸ್ಪೂನ್
5. ಕರಿಬೇವು- 10 ರಿಂದ 15 ಎಲೆ
6. ಇಂಗು – 1/2 ಟೀ ಸ್ಪೂನ್
7. ಹುಣಸೆ ಹಣ್ಣಿನ ರಸ – 6 ಟೀ ಸ್ಪೂನ್
8. ಬೆಲ್ಲದ ಪುಡಿ – 3 ಟೀ ಸ್ಪೂನ್
9. ಅರಿಶಿಣ – ಚಿಟಿಕೆ
10. ನೀರು – 1/4 ಕಪ್
11. ಎಣ್ಣೆ – 4 ಟೀ ಸ್ಪೂನ್
12. ಉಪ್ಪು- ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಗ್ಯಾಸ್ ಆನ್ ಮಾಡಿಕೊಂಡು ಪ್ಯಾನ್ ಇಟ್ಟಿಕೊಳ್ಳಿ.
* ಮೊದಲಿಗೆ ಮೂರು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸಿವೆ, ಜೀರಿಗೆ, ಮೆಂತೆ, ಕರಿಬೇವು ಹಾಕಿ ಫ್ರೈ ಮಾಡಿ.
* ಫ್ರೈ ಆದಮೇಲೆ ಉದ್ದವಾಗಿ ಕತ್ತರಿಸಿಕೊಂಡಿದ್ದ ಮೆಣಸಿನಕಾಯಿ ಸೇರಿಸಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 4 ನಿಮಿಷ ಬೇಯಿಸಿಕೊಳ್ಳಿ.
* ಮೆಣಸಿನಕಾಯಿ ಬೆಂದ ಮೇಲೆ ಅದಕ್ಕೆ ಇಂಗು ಪುಡಿ, ಹುಣಸೆ ಹಣ್ಣಿನ ರಸ, ಬೆಲ್ಲದ ಪುಡಿ, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬಾಡಿಸಿಕೊಳ್ಳಿ.
* ಕೊನೆಗೆ ಕಾಲು ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಮೂರು ನಿಮಿಷ ಬೇಯಿಸಿಕೊಂಡ್ರೆ ಗ್ರೀನ್ ಚಿಲ್ಲಿ ಕರ್ರಿ ರೆಡಿ.