ಅಹಮದಾಬಾದ್: ಹಿಂಸಾತ್ಮಕ ಮೊಬೈಲ್ ಗೇಮ್ ಆಡಲು ಆಡಿಕ್ಟ್ ಆಗಿದ್ದ ಅಪ್ರಾಪ್ತ ಬಾಲಕನೊಬ್ಬ, ಗೇಮ್ ಪ್ರೇರಣೆಯಿಂದ ಸ್ವತಃ ತಾಯಿ ಹಾಗೂ ಸಹೋದರಿನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ ನೋಯ್ಡಾದಲ್ಲಿ ನಡೆದಿದೆ.
ತಾಯಿ ಅಂಜಲಿ ಹಾಗೂ 11 ವರ್ಷದ ಸಹೋದರಿ ಕನ್ನಿಕಾ ಮೃತ ದುರ್ದೈವಿಗಳಾಗಿದ್ದು, ಇಬ್ಬರನ್ನು ಬ್ಯಾಟ್‍ನಿಂದ ಹೊಡೆದು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.
Advertisement
Advertisement
ತನ್ನ ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡಿದ ನಂತರ ಬಾಲಕ ಮನೆಯಿಂದ 2 ಲಕ್ಷ ರೂ ಹಾಗೂ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ. ಆದರೆ ಮೊಬೈಲ್ ಕರೆಯ ನೆಟ್‍ವರ್ಕ್ ಆಧರಿಸಿ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ನೋಯ್ಡಾಗೆ ವಾಪಸ್ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಾನು ಮಾಡಿದ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಬಿಸ್ರಾಕ್ ಪೊಲೀಸ್ ಠಾಣೆ ಅಧಿಕಾರಿ ಅಜಯ್ ಶರ್ಮಾ ತಿಳಿಸಿದ್ದಾರೆ.
Advertisement
ಕೊಲೆಗೆ ಕಾರಣ ಏನೆಂಬುದರ ಕುರಿತು ವಿಚಾರಣೆ ನಡೆಸಿಲಾಗುತ್ತಿದೆ. ಸಂಪೂರ್ಣ ತನಿಖೆ ನಡೆಸಿದ ಬಳಿಕ ಕೃತ್ಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಸದ್ಯ ಕೊಲೆಯಾದ ಇಬ್ಬರ ಶವ ಪರೀಕ್ಷೆ ಪೂರ್ಣಗೊಂಡಿದ್ದು, ಅಂಜಲಿ ಅವರ ತಲೆಯಲ್ಲಿ 7 ಹಾಗೂ ಕನ್ನಿಕಾ ತಲೆಯಲ್ಲಿ 5 ಗಾಯದ ಗುರುತುಗಳು ಪತ್ತೆಯಾಗಿವೆ. ಘಟನೆ ಸೋಮವಾರ ರಾತ್ರಿ 8 ರಿಂದ 11 ರ ಸಮಯದಲ್ಲಿ ನಡೆದಿರುವ ಕುರಿತು ಶವ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಾಲಕನನ್ನು ವಿಚಾರಣೆ ನಡೆಸಿರುವ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆತ ತನ್ನ ಓದಿನಲ್ಲಿ ಹಿಂದಿದ್ದ. ಅಲ್ಲದೇ ಮೊಬೈಲ್ ಫೋನ್ ನಲ್ಲಿ ಕ್ರೈಂ ಗ್ಯಾಂಗ್‍ಸ್ಟರ್ ಗೇಮ್ ಆಡುವುದಕ್ಕೆ ಅಡಿಕ್ಟ್ ಆಗಿದ್ದ. ಘಟನೆ ನಡೆದ ದಿನ ಆತನ ತಾಯಿ ಓದುವ ಬಗ್ಗೆ ಆತನನ್ನು ಬೈದಿದ್ದರು ಎಂದು ತಿಳಿದು ಬಂದಿದೆ.