ಬೆಂಗಳೂರು: ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಇಂದು ಪರಿಷತ್‌ನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 (Greater Bengaluru Bill 2024) ಅನ್ನು ಅಂಗೀಕಾರ ಮಾಡಲಾಯಿತು.
ಪರಿಷತ್‌ನಲ್ಲಿ ಗ್ರೇಟರ್ ಬೆಂಗಳೂರು ಬಿಲ್ ಮಂಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar), ಅಧಿಕಾರ ವಿಕೇಂದ್ರೀಕರಣವನ್ನು ಸಮರ್ಥಿಸಿದ್ರು. ಸುಮಾರು 2:50 ಗಂಟೆಗಳ ಕಾಲ ಚರ್ಚೆ ನಡೆಯಿತು. ಕೊನೆಗೆ ವಿಪಕ್ಷಗಳ ಸಭಾಗ್ಯಾಗದ ನಡ್ವೆ ವಿಧೇಯಕವನ್ನು ಅಂಗೀಕರಿಸಲಾಯಿತು. ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸಭಾತ್ಯಾಗ ಮಾಡಿದ್ರೆ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದ್ರು.
ಪರಿಷತ್‌ನಲ್ಲಿ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಪಾಲರ ಭಾಷಣದ ಮೇಲೆ ಮುಂದುವರೆದ ಚರ್ಚೆ ನಡೆಯಿತು. ಬಳಿಕ ಡಿಕೆಶಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅನ್ನು ಮಂಡನೆ ಮಾಡಿದ್ರು. ಇದನ್ನೂ ಓದಿ: ಕೆಪಿಎಸ್‌ಸಿ ಪರೀಕ್ಷೆಯ ಲೋಪದೋಷಗಳನ್ನು ಪರಿಹರಿಸಿ: ಬಿ.ವೈ.ವಿಜಯೇಂದ್ರ
ಬಿಲ್ ಮಂಡಿಸಿ ಮಾತನಾಡಿದ ಡಿಕೆಶಿ, ಬೆಂಗಳೂರಿಗೆ ದೊಡ್ಡ ಇತಿಹಾಸ ಇದೆ. ಕೆಂಪೇಗೌಡರು ಬೆಂಗಳೂರು ಕಟ್ಟಿದ್ರು. 750 ಕಿಲೋಮೀಟರ್ ಬೆಂಗಳೂರು ಬೆಳೆದಿದೆ. ಬೆಂಗಳೂರು ಅಭಿವೃದ್ಧಿ ಮಾಡಬೇಕು, ಆಡಳಿತ ವಿಕೇಂದ್ರೀಕರಣ ಆಗಬೇಕು. ಉತ್ತಮವಾದ ಆಡಳಿತ ಕೊಡಬೇಕು ಅಂತ ಈ ಬಿಲ್ ತಂದಿದ್ದೇವೆ ಎಂದು ಸಮರ್ಥಿಸಿಕೊಂಡರು.
ಮುಂದುವರಿದು.. ಅನೇಕ ಜನರು ಕಾರ್ಪೋರೇಟರ್‌ಗಳಾಗಿ ಇವತ್ತು ಮಂತ್ರಿ, ಶಾಸಕರಾಗಿದ್ದಾರೆ. ಬೆಂಗಳೂರಿಗೆ ದೊಡ್ಡ ಇತಿಹಾಸ ಇದೆ. 39% ಜನಸಂಖ್ಯೆ ನಗರ ವ್ಯಾಪ್ತಿಗೆ ಬಂದಿದೆ. ಬೆಂಗಳೂರು ಜನಸಂಖ್ಯೆ 1.40 ಕೋಟಿ ಆಗಿದೆ. 1 ಕೋಟಿ ವಾಹನಗಳು ಇವೆ. ಮೊದಲು ಹೆಬ್ಬಾಳದವರೆಗೂ ಕಾರ್ಪೋರೇಷನ್ ಇತ್ತು. ಅದಾದ ಬಳಿಕ ಬಿಬಿಎಂಪಿ ಅಂತ ಮಾಡಿದ್ರು. ಇದನ್ನೂ ಓದಿ: ಯೂನಿವರ್ಸಿಟಿ ಮುಚ್ಚುವ ಬದಲು ಕಾಂಗ್ರೆಸ್ ಪಕ್ಷವನ್ನೇ ಮುಚ್ಚಿ ಬಿಡಿ: ಛಲವಾದಿ ನಾರಾಯಣಸ್ವಾಮಿ
198 ವಾರ್ಡ್ 2007 ರಲ್ಲಿ ರಚನೆ ಮಾಡಲಾಗಿತ್ತು. ಬೆಂಗಳೂರು ಅಭಿವೃದ್ಧಿ ಆಗಬೇಕಾದ್ರೆ ಅಧಿಕಾರ ವಿಕೇಂದ್ರೀಕರಣ ಮಾಡಬೇಕು. ಬಿ.ಎಸ್ ಪಾಟೀಲ್ ಅವರ ಕೈಯಲ್ಲಿ ಈ ಬಗ್ಗೆ ವರದಿ ಪಡೆದಿದ್ದೇವೆ. ಆ ವರದಿ ಆಧಾರದಲ್ಲಿ ನಾನು ಬಿಲ್ ಸದನಕ್ಕೆ ತಂದಿದ್ದೇವೆ. ಸದನ ಸಮಿತಿ ರಚನೆ ಮಾಡಬೇಕು ಅಂತ ಅಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸದನ ಸಮಿತಿ ರಚನೆ ಮಾಡಿದ್ವಿ. 5-6 ತಿಂಗಳು ಸದನ ಸಮಿತಿ ಚರ್ಚೆ ಮಾಡಿ ವರದಿ ಕೊಟ್ಟಿದ್ದಾರೆ. ಸದನ ಸಮಿತಿ ಅವರು ಎಲ್ಲರ ಸಭೆ ಮಾಡಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ವರದಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮನೆಯ ಬಾಗಿಲಲ್ಲೇ ಕುಳಿತ ಮೈಕ್ರೋಫೈನಾನ್ಸ್ ಸಿಬ್ಬಂದಿ – ಬೇಸತ್ತು ಮಹಿಳೆ ಆತ್ಮಹತ್ಯೆ
ಅಲ್ಲದೇ 74ನೇ ತಿದ್ದುಪಡಿಯನ್ನ ನಾವು ಯಾವುದೇ ಕಾರಣಕ್ಕೂ ಬದಲಾವಣೆ ಮಾಡೋದಿಲ್ಲ. ಬಿಜೆಪಿ ಅವರು ವರದಿ ಒಪ್ಪಿದ್ದಾರೆ. ರಾಜಕೀಯಕ್ಕೆ ವಿರೋಧ ಮಾಡ್ತಿದ್ದಾರೆ ಅಷ್ಟೆ. ಮೇಯರ್ ಅವಧಿ 2.5 ವರ್ಷ ಇರಲಿ. ಇದೊಂದು ಐತಿಹಾಸಿಕ ಬಿಲ್ ತಂದಿದ್ದೇವೆ. ಸದಸ್ಯರು ಸಲಹೆಗಳನ್ನು ಕೊಟ್ಟರೆ ಅದನ್ನ ಸ್ವೀಕಾರ ಮಾಡ್ತೀವಿ. ಏನಾದ್ರು ತಪ್ಪಿದ್ರೆ ಅದನ್ನ ಸರಿ ಮಾಡಿಕೊಳ್ತೀವಿ. ಪಾಲಿಕೆ ಎಷ್ಟು ಮಾಡಬೇಕು ಎಂಬುದರ ಚರ್ಚೆಯೂ ಆಗ್ತಿದೆ. ಯಾವುದೇ ಕಾರ್ಪೋರೇಷನ್ ಬೆಂಗಳೂರು ಬಿಟ್ಟು ಹೆಸರು ಇಡೋದಿಲ್ಲ. ಬೆಂಗಳೂರು ನಾರ್ಥ್, ಈಸ್ಟ್, ಸೌಥ್ ಅಂತ ಹೆಸರು ಇಡ್ತೀವಿ. ಒಂದು ಪಾಲಿಕೆಗೆ 150 ವಾರ್ಡ್ ಇರಲಿದೆ. ಸಿಎಂ ನೇತೃತ್ವದಲ್ಲಿ ಹೈ ಲೆವೆಲ್ ಸಮಿತಿ ಇರಲಿದೆ. ವಾರ್ಡ್ ಕಮಿಟಿಯನ್ನು ಮಾಡ್ತಿದ್ದೇವೆ ಎಂದು ಡಿಕೆಶಿ ಸದನದ ಗಮನಕ್ಕೆ ತಂದರು.