ನವದೆಹಲಿ: ಕೆಲ ದಿನಗಳ ಹಿಂದೆ ಧೋನಿ ಬ್ಯಾಟಿಂಗ್ ಬಗ್ಗೆ ಟೀಕಿಸಿದ್ದ ವ್ಯಕ್ತಿಗಳಿಗೆ ಟೀಂ ಇಂಡಿಯಾ ನಾಯಕ ಕೊಹ್ಲಿ ತಿರುಗೇಟು ನೀಡಿದ್ದರು. ಈಗ ಕೋಚ್ ರವಿಶಾಸ್ತ್ರಿ ಧೋನಿ ಬಗ್ಗೆ ಮೆಚ್ಚುಗೆಯ ಮಾತನ್ನು ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದ ವೇಳೆ ಮಾತನಾಡಿರುವ ರವಿಶಾಸ್ತ್ರಿ, ಧೋನಿ ಒಬ್ಬ ಅಸಾಮಾನ್ಯ ಆಟಗಾರ ಹಾಗೂ ಉತ್ತಮ ನಾಯಕರಾಗಿದ್ದು ಅವರ ಸುತ್ತಲು ಹೊಟ್ಟೆ ಕಿಚ್ಚು ಪಡುವವರೇ ಇದ್ದಾರೆ. ಅಲ್ಲದೇ ಧೋನಿಯವರ ವೃತ್ತಿ ಜೀವನ ಅಂತ್ಯಗೊಳಿಸಲು ಕಾದುಕುಳಿತಿದ್ದಾರೆ. ಆದರೆ ಕ್ರಿಕೆಟ್ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಧೋನಿ ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ಧೋನಿ ಅವರ ವಿರುದ್ಧ ಮಾಡುವ ಯಾವುದೇ ಟೀಕೆಗಳು ಅವರ ಮೇಲೆ ಪ್ರಭಾವನ್ನು ಬೀರುವುದಿಲ್ಲ. ನಮ್ಮ ದೃಷ್ಟಿಯಲ್ಲಿ ಧೋನಿ ಅವರಿಗೆ ಯಾವ ಸ್ಥಾನವನ್ನು ನೀಡಿದ್ದೇವೆ ಅದು ಹಾಗೆಯೇ ಮುಂದುವರೆಯುತ್ತದೆ ಎಂದು ಟೀಕಾಕಾರ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಇದನ್ನೂ ಓದಿ : ಧೋನಿ ನೃತ್ಯಕ್ಕೆ ಬಿದ್ದು ಬಿದ್ದು ನಕ್ಕ ಸಾಕ್ಷಿ: ವೈರಲ್ ವಿಡಿಯೋ ನೋಡಿ
Advertisement
ನ್ಯೂಜಿಲೆಂಡ್ ಸರಣಿಯ ಅಂತಿಮ ಟಿ20 ಪಂದ್ಯದ ನಂತರ ಮಾತನಾಡಿದ್ದ ಕೊಹ್ಲಿ ಸಹ ಎಲ್ಲರೂ ಧೋನಿ ಅವರನ್ನು ಮಾತ್ರ ಯಾಕೆ ಗುರಿಯಾಗಿಸಿಕೊಂಡಿದ್ದಾರೆ. ತಂಡದ ಸದಸ್ಯರಾಗಿ ಎಲ್ಲಾ ಆಟಗಾರರು ಪಂದ್ಯದ ವೇಳೆ ಬ್ಯಾಟ್ ಮಾಡುವ ಸನ್ನಿವೇಶದ ಕುರಿತು ತಿಳಿದಿರುತ್ತೇವೆ. ವಿವಿಧ ದೃಷ್ಟಿಗಳಿಂದ ವಿಮರ್ಶೆ ನಡೆಸುವ ಟೀಕಾಕಾರರ ಹೇಳಿಕೆಗಳಿಂದ ನಾವು ಭಾವನತ್ಮಕತೆಗೆ ಒಳಾಗುವುದಿಲ್ಲ. ಕ್ರೀಡಾಂಗಣದಲ್ಲಿದ್ದಾಗ ವಿಕೆಟ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತೇವೆ ಎಂದು ಹೇಳುವ ಮೂಲಕ ಟೀಕಾಕಾರರ ವಿರುದ್ಧ ಕಿಡಿಕಾರಿದ್ದರು.
ಇದನ್ನೂ ಓದಿ : ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್
ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಧೋನಿ ಕಳಪೆ ಬ್ಯಾಂಟಿಂಗ್ ಪ್ರದರ್ಶನ ನೀಡಿದ ಕಾರಣದಿಂದ ಧೋನಿ ಟಿ20 ಮಾದರಿಗೆ ನಿವೃತ್ತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರರ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಇನ್ನು ಹಲವು ಟೀಕಾಕಾರರು ಧೋನಿ ವೈಫಲ್ಯದ ಬಗ್ಗೆ ತಮ್ಮದೇ ಟೀಕೆಗಳನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಧೋನಿ ನಿವೃತ್ತಿ ಬಗ್ಗೆ ಮಾತನಾಡಿದವರಿಗೆ ತಿರುಗೇಟು ಕೊಟ್ಟ ಕೊಹ್ಲಿ