ಮ್ಯಾಡ್ರಿಡ್: ಫುಟ್‍ಬಾಲ್‍ನಲ್ಲಿ ಸಾಮಾನ್ಯವಾಗಿ ಫಾರ್ವಡ್ ಆಟಗಾರರು ಗೋಲು ದಾಖಲಿಸುತ್ತಾರೆ. ಕೆಲವೊಮ್ಮೆ ರಕ್ಷಣಾ ವಿಭಾಗದವರು ಗೋಲು ಹೊಡೆದದ್ದೂ ಇದೆ. ಆದರೆ ಬೆಂಕಿಯಂತೆ ಬರುವ ಚೆಂಡನ್ನು ತಡೆಯಲೆಂದೇ ಇರುವ ಗೋಲ್ ಕೀಪರ್ ಸ್ವತಃ ಗೋಲು ಹೊಡೆದ್ದು ನೋಡಿದ್ದೀರಾ..?
ಹೌದು, ಸ್ಪಾನಿಶ್ ಸೆಗುಂಡ ಡಿವಿಜನ್‍ನಲ್ಲಿ ಭಾನುವಾರ ನಡೆದ ಸ್ಪೋರ್ಟಿಂಗ್ ಜೆಜೋನ್ ವಿರುದ್ಧದ ಪಂದ್ಯದಲ್ಲಿ ಲುಗೋ ತಂಡದ ಗೋಲ್ ಕೀಪರ್ ಜುವಾನ್ ಕಾರ್ಲೋಸ್ ಬಾರಿಸಿದ ಅತ್ಯದ್ಭುತ ಗೋಲು ಇದೀಗ ಫುಟ್‍ಬಾಲ್ ಲೋಕದಲ್ಲೇ ಅಚ್ಚರಿಯ ಅಲೆಯೆಬ್ಬಿಸಿದೆ.
Advertisement
Advertisement
ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇರುವಾಗ ಲುಗೋ ತಂಡ ಜೆಜೋನ್ ವಿರುದ್ಧ 2-1 ಅಂತರದ ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಜೆಜೋನ್ ತಂಡಕ್ಕೆ ಗೋಡೆಯಂತೆ ತಡೆಯಾಗಿ ನಿಂತಿದ್ದ ಕಾರ್ಲೋಸ್, ಡಿ ಬಾಕ್ಸ್‍ನ ಸಮೀಪದಿಂದ ಒದ್ದ ಚೆಂಡು 60 ಯಾರ್ಡ್(55 ಮೀಟರ್) ದೂರದಲ್ಲಿದ್ದ ಎದುರಾಳಿ ತಂಡದ ಗೋಲು ಕೀಪರ್‍ನನ್ನು ವಂಚಿಸಿ ಗೋಲು ಬಲೆಯೊಳಗೆ ಸೇರಿತ್ತು. ಒಂದು ಕ್ಷಣ ಇದನ್ನು ನಂಬಲಾಗದೆ ಆಟಗಾರರು ಮೈದಾನದಲ್ಲೇ ಕಕ್ಕಾಬಿಕ್ಕಿಯಾಗಿ ನಿಂತರು.
Advertisement
ಗೋಲು ಕೀಪರ್ ದೂರದಿಂದ ಬಾರಿಸಿದ ಚೆಂಡು ಗೋಲಾಗಿ ಪರಿವರ್ತನೆಯಾದ್ದು ಒಂದು ದಾಖಲೆಯಾದರೆ, 30ನೇ ಹುಟ್ಟಹಬ್ಬದ ದಿನದಂದೇ ಈ ಅಪರೂಪದ ಗೋಲು ದಾಖಲಾದದ್ದು ಕಾರ್ಲೋಸ್ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
Advertisement
https://www.youtube.com/watch?v=cGMZbyJM6hs