ಬೆಂಗಳೂರು: ನಿವೃತ್ತ ಸಾರಿಗೆ ನೌಕರರಿಗೆ ನೀಡಬೇಕಾಗಿದ್ದ ಗ್ರಾಚ್ಯುಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಗ್ರಾಚ್ಯುಟಿ ಮತ್ತು ಗಳಿಕೆ ರಜೆ ನಗದೀಕರಣಕ್ಕಾಗಿ ಸರ್ಕಾರದಿಂದ 224.05 ಕೋಟಿ ರೂ. ಹಣ ಪಾವತಿಯಾಗಿದೆ.
2020ರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಾಕಿ ಹಣದ ಚೆಕ್‌ನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಒಟ್ಟು 11,694 ನಿವೃತ್ತ ನೌಕರರ ಹಣ ಬಿಡುಗಡೆಯಾಗಿದೆ. ಇಂದಿನಿಂದ RTGS ಹಾಗೂ ಚೆಕ್ ಮುಖಾಂತರ ನಿವೃತ್ತ ಸಿಬ್ಬಂದಿಗೆ ಹಣ ವಿತರಣೆ ಮಾಡಲಾಗುತ್ತಿದೆ.
Advertisement
Advertisement
ಕರಾರಸಾ ನಿಗಮ
4711 ಸಿಬ್ಬಂದಿ, 86.55 ಕೋಟಿ ರೂ.
Advertisement
ಬಿಎಂಟಿಸಿ
1833 – ಸಿಬ್ಬಂದಿ, 50.25 ಕೋಟಿ ರೂ.
Advertisement
ವಾಕರಸಾ ಸಂಸ್ಥೆ
3116 ಸಿಬ್ಬಂದಿ, 51.50 ಕೋಟಿ ರೂ.
ಕಕರಸಾ ಸಂಸ್ಥೆ
2034 ಸಿಬ್ಬಂದಿ, 35.75 ಕೋಟಿ ರೂ.