ಬೆಂಗಳೂರು: ಜಪಾನ್‌ನ (Japan) ಐಚಿ-ನಾಗೋಯಾದಲ್ಲಿ (Aichi Nagoya) ನಡೆದ 20ನೇ ಏಷ್ಯನ್ ಗೇಮ್ಸ್‌ನ ಗಾಲ್ಫ್ ಸ್ಪರ್ಧೆಯಲ್ಲಿ (Golf) ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟ ಮೈಸೂರಿನ ಪ್ರಣವಿ ಅರಸ್ (Pranavi Urs) ಅವರಿಗೆ ಮಂಗಳವಾರ (ಅ.6) ರಾತ್ರಿ ಕರುನಾಡಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAL) ಆಗಮಿಸಿದ ಪ್ರಣವಿ ಅವರನ್ನು ಅವರ ಬಂಧು-ಬಳಗ, ಅಪಾರ ಅಭಿಮಾನಿಗಳು ಹಾಗೂ ಕ್ರೀಡಾ ಪ್ರೇಮಿಗಳು ಹೂಗುಚ್ಛ ನೀಡಿ, ಜಯಘೋಷಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಬರಮಾಡಿಕೊಂಡರು. ಇದನ್ನೂ ಓದಿ: Asian Games 2026: ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಮೈಸೂರಿನ ಪ್ರಣವಿ ಅರಸ್

ಇದೇ ವೇಳೆ ಪ್ರಣವಿ ಅಭ್ಯಾಸ ನಡೆಸುವ ಮೈಸೂರಿನ ಪ್ರಸಿದ್ಧ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್ (ಜೆಡಬ್ಲ್ಯೂಜಿಸಿ) ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ವಿಜೇತ ಕ್ರೀಡಾಪಟುವನ್ನು ಆತ್ಮೀಯವಾಗಿ ಅಭಿನಂದಿಸಿ, ಅವರ ಸಾಧನೆಯನ್ನು ಗೌರವಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಣವಿ ಅರಸ್, ದೇಶಕ್ಕೆ ಚಿನ್ನದ ಪದಕ ಗೆದ್ದು ತಂದಿರುವುದು ಅಪಾರ ಸಂತಸ ಹಾಗೂ ಹೆಮ್ಮೆ ತಂದಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು. ಪ್ರಣವಿ ಅವರ ಈ ಅಪೂರ್ವ ಸಾಧನೆಗೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಹಿಳಾ ಹಾಕಿ ಟೀಂ

